Recipe: ಮಂಗಳೂರು ಸ್ಪೆಶಲ್ ಬೇರು ಹಲಸಿನ ರವಾ ಫ್ರೈ

Recipe: ಬೇಕಾಗುವ ಸಾಮಗ್ರಿ:  ಬೇರು ಹಲಸು, 1 ಕಪ್ ರವೆ, 2 ಸ್ಪೂನ್ ಖಾರದ ಪುಡಿ, ಅರಿಷಿನ, 2 ಸ್ಪೂನ್ ಶುಂಠಿ, ಹಸಿಮೆಣಸು, ಬೆಳ್ಳುಳ್ಳಿ ಪೇಸ್ಟ್, 3 ಸ್ಪೂನ್ ಕಾರ್ನ್ ಫ್ಲೋರ್, 1 ಕಪ್ ಅಕ್ಕಿ ಹಿಟ್ಟು, ಕಾಲು ಕಪ್ ಮೈದಾ, ಉಪ್ಪು, ಕರಿಯಲು ಎಣ್ಣೆ.

ಮಾಡುವ ವಿಧಾನ: ಬೇರು ಹಲಸಿನ ಸಿಪ್ಪೆ ತೆಗೆದು, ನಿಮಗೆ ಬೇಕಾದ ಆಕಾರದಲ್ಲಿ ಕತ್ತರಿಸಿ, ನೀರಿನಲ್ಲಿ ಹಾಕಿ, ಸ್ವಚ್ಛ ಮಾಡಿ. ಬಳಿಕ ಕುದಿಯುವ ನೀರಿಗೆ ಈ ಬೇರುಹಲಸನ್ನು ಹಾಕಿ, ಗ್ಯಾಸ್ ಆಫ್ ಮಾಡಿ. 5 ನಿಮಿಷದ ಬಳಿಕ, ಬೇರು ಹಲಸನ್ನು ನೀರಿನಿಂದ ತೆಗೆಯಿರಿ.

ಹೀಗೆ ಮಾಡುವುದರಿಂದ ಬೇರು ಹಲವಸು ಸ್ವಲ್ಪ ಸಾಫ್ಟ್ ಆಗುತ್ತದೆ. ಇದಾದ ಬಳಿಕ ಮಿಕ್ಸಿಂಗ್ ಬೌಲ್‌ನಲ್ಲಿ ಅಕ್ಕಿ ಹುಡಿ, ಮೈದಾ, ಕಾರ್ನ್ ಫ್ಲೋರ್, ಸ್ಪೂನ್ ಶುಂಠಿ, ಹಸಿಮೆಣಸು, ಬೆಳ್ಳುಳ್ಳಿ ಪೇಸ್ಟ್, ಉಪ್ಪು, ಅರಿಶಿನ, ಖಾರದ ಪುಡಿ, ನೀರು ಹಾಕಿ ಬಜ್ಜಿ ಬ್ಯಾಟರ್ ರೆಡಿ ಮಾಡಿ.

ಈಗ ಬೇರು ಹಲಸನ್‌ನು ಈ ಹಿಟ್ಟಿನಲ್ಲಿ ಅದ್ದಿ, ರವೆಯಲ್ಲಿ ಅದ್ದಿ, ಕವರ್ ಮಾಡಿ. ಬಳಿಕ ಕಾದ ಎಣ್ಣೆಯಲ್ಲಿ ಮಂದ ಉರಿಯಲ್ಲಿ ಇದನ್ನು ಕಾಯಿಸಿದರೆ, ಬೇರು ಹಲಸಿನ ರವಾ ಫ್ರೈ ರೆಡಿ.

About The Author