Health Tips: ಹಾಲು ನಮ್ಮ ದೇಹಕ್ಕೆ ಕ್ಯಾಲ್ಶಿಯಂ ನೀಡುತ್ತದೆ. ತುಪ್ಪ ಕೂಡ ನಮ್ಮ ಮೂಳೆ ಬಲವಾಗಿಸುತ್ತದೆ. ಇವೆರಡನ್ನೂ ಸೇರಿಸಿ ಕುಡಿದರೆ, ನಮ್ಮ ಆರೋಗ್ಯ ಉತ್ತಮವಾಗರುತ್ತದೆ. ದೇಹದಲ್ಲಿ ಶಕ್ತಿ ಹೆಚ್ಚಾಗುತ್ತದೆ. ಹಾಗಾದರೆ ಇವೆರಡನ್ನೂ ನಾವು ಹೇಗೆ ಕುಡಿಯಬೇಕು. ಯಾವಾಗ ಕುಡಿಯಬೇಕು ಎಂದು ತಿಳಿಯೋಣ ಬನ್ನಿ.
ನೀವು ಬಿಸಿ ಹಾಲಿಗೆ, ತುಪ್ಪ ಸೇರಿಸಿ, ರಾತ್ರಿ ಮಲಗುವ ಮುನ್ನ ಕುಡಿಯಬೇಕು. ಇದರಿಂದ ನಿಮ್ಮ ಮೂಳೆ ಗಟ್ಟಿಯಾಗಿರುತ್ತದೆ. ದೇಹದಲ್ಲಿ ಕ್ಯಾಲ್ಶಿಯಂ ಅಂಶ ಹೆಚ್ಚಾಗುತ್ತದೆ. ಸಂತಾನದ ನಿರೀಕ್ಷೆಯಲ್ಲಿರುವವರು ಈ ಪ್ರಯೋಗ ಮಾಡಬಹುದು. ಆದರೆ ನಿಮಗೆ ಅಲರ್ಜಿಯಾಗುವುದಿಲ್ಲವೆನ್ನುವುದನ್ನು ಖಾತ್ರಿ ಮಾಡಿ, ಬಳಿಕ ಹಾಲು ಮತ್ತು ತುಪ್ಪದ ಸೇವನೆ ಮಾಡಿ.
ಏಕೆಂದರೆ ಮಗು ಗಟ್ಟಿಮುಟ್ಟಾಗಿ ಇರಬೇಕು, ಶಕ್ತಿಯುತವಾಗಿರಬೇಕು, ವಿಕಲಾಂಗತೆಯಿಂದ ದೂರವಾಗಿರಬೇಕು ಅಂದ್ರೆ, ಅಪ್ಪ-ಅಮ್ಮನ ದೇಹದಲ್ಲಿ ಸರಿಯಾದ ಪ್ರಮಾಣದಲ್ಲಿ ಕಬ್ಬಿಣಾಂಶ ಇರಬೇಕು. ಎಲ್ಲ ಪೋಷಕಾಂಷಗಳೂ ದೇಹದಲ್ಲಿರಬೇಕು. ಅದಕ್ಕಾಗಿ ನೀವು ನೆನೆಸಿದ ಡ್ರೈಫ್ರೂಟ್ಸ್, ಹಣ್ಣು, ತರಕಾರಿ, ಸಿರಿಧಾನ್ಯ, ಬೇಳೆ-ಕಾಳು, ಎಳ್ನೀರು ಸೇರಿ ಇದೆಲ್ಲದರ ಸೇವನೆ ಜತೆಗೆ ಬಿಸಿ ಹಾಲಿಗೆ ತುಪ್ಪ ಸೇರಿಸಿ, ಕುಡಿಯಿರಿ.
ಇನ್ನು ಬಿಸಿ ಹಾಲಿಗೆ ತುಪ್ಪ ಸೇರಿಸಿ ಕುಡಿದರೆ, ನಿಮ್ಮ ಜೀರ್ಣಶಕ್ತಿ ಹೆಚ್ಚಾಗುತ್ತದೆ. ಅಂದ್ರೆ ನಮ್ಮ ಉದರ ಸಮಸ್ಯೆ ಕಡಿಮೆ ಮಾಡಿ, ಮಲವಿಸರ್ಜನೆ ಸರಿಯಾಗಿ ಆಗುವಂತೆ ಮಾಡುತ್ತದೆ. ಹಾಗಾಗಿ ಮಲಬದ್ಧತೆ ಸಮಸ್ಯೆ ಇದ್ದವರು ಕೂಡ ಬಿಸಿ ಹಾಲಿಗೆ, ತುಪ್ಪ ಸೇರಿಸಿ ಸೇವಿಸಬಹುದು.
ಅಲ್ಲದೇ ನಿಮಗೆ ಪದೇ ಪದೇ ಕಾಲು, ಕೈ, ಪಾದ, ಕೀಲು ನೋವು ಬರುತ್ತಿದ್ದಲ್ಲಿ, ನೀವು ಬಿಸಿ ಹಾಲಿಗೆ ತುಪ್ಪ ಸೇರಿಸಿ, ಸೇವಿಸಬಹುದು. ನಿಮ್ಮ ತ್ವಚೆ ಕೂಡ ಆರೋಗ್ಯಕರವಾಗಿರುತ್ತದೆ. ಮತ್ತು ನಿಮ್ಮ ಸೌಂದರ್ಯ ಇಮ್ಮಡಿಯಾಗಿಸುವುದರಲ್ಲಿ ಈ ಬಿಸಿ ಹಾಲು ಮತ್ತು ತುಪ್ಪದ ಸೇವನೆ ಲಾಭಕಾರಿಯಾಗಿದೆ.




