Wednesday, July 30, 2025

Latest Posts

Belagavi News: ತಮ್ಮ ಮೇಲಿನ ಆರೋಪಕ್ಕೆ ಸ್ಪಷ್ಟನೆ ನೀಡಿದ ಅಡವಿಸಿದ್ದೇಶ್ವರ ಸ್ವಾಮೀಜಿ

- Advertisement -

Belagavi News: ಬೆಳಗಾವಿ: ಸ್ವಾಮೀಜಿ ಮಠದಲ್ಲಿ ಮಹಿಳೆಯ ಜತೆ ಸಿಕ್ಕಿಬಿದ್ದ ವಿಚಾರಕ್ಕೆ ಸಂಬಂಧಿಸಿದಂತೆ, ಅಡವಿಸಿದ್ದೇಶ್ವರ ಸ್ವಾಮೀಜಿ ಬೆಳಗಾವಿ ಜಿಲ್ಲೆಯ ಗೋಕಾಕ ಸೂನ್ಯ ಸಂಪಾದನ ಮಠದಲ್ಲಿ ಮಾತನಾಡಿದ್ದಾರೆ.

ನನ್ನ ಮೇಲೆ ಬಂದಿರುವ ಆರೋಪಗಳು ಸುಳ್ಳು. ಇದೊಂದು ಕಿಡಿಗೇಡಿಗಳ ಷಡ್ಯಂತ್ರ. ನನ್ನ ವಿರುದ್ಧ ಇದೊಂದು ಹುನ್ನಾರದ ಷಡ್ಯಂತ್ರವಾಗಿದೆ, ಆ ರೀತಿ ಯಾವ ಘಟನೆಗಳು ನಡೆದಿಲ್ಲ. ಶ್ರೀಮಠಕ್ಕೆ ಬಂದಿರುವ ಭಕ್ತರ ಮೇಲಿನ‌ ಹಲ್ಲೆ ನೋವು ತಂದಿದೆ. ಪ್ರಕರಣ ಸಂಬಂಧ ಗದುಗೆಯಲ್ಲಿರುವವನೇ(ದೇವರೇ) ನಿರ್ಣಯ ನೀಡಬೇಕು ಎಂದು ಸ್ವಾಮೀಜಿ ಬೇಸರ ವ್ಯಕ್ತಪಡಿಸಿದ್ದಾರೆ.

ದುಷಶ್ಚಟಕ್ಕೆ ಬಂದಿರೋರಿಗೆ ಬುದ್ದಿಹೇಳಿರೋದಕ್ಕೆ ಇದನ್ನ ಬೇರೆ ಅರ್ಥಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಎಷ್ಟೇ ಮನವೊಲಿಕೆ ಮಾಡಿದ್ರೂ ಬಿಡಲಿಲ್ಲ, ಶ್ರೀಮಠದ ಗೌರವ, ಗ್ರಾಮದ ಗೌರವ ಕಳೆದಿದ್ದಕ್ಕೆ ನೋವು ತಂದಿದೆ. ಊಟ ಮಾಡಿ ಕೊನೆಗೆ ಹೋಗುವಾಗ ಘಟನೆ ಆಗಿದೆ ಎಂದು ಹೇಳಿರುವ ಸ್ವಾಮೀಜಿ ಈ ಬಗ್ಗೆ ದೂರು ನೀಡುತ್ತೀರಾ ಎಂದು ಕೇಳಿದ ಪ್ರಶ್ನೆಗೆ, ಭಕ್ತರ ನಿರ್ಧಾರಕ್ಕೆ ನಾನು ಬದ್ಧವಾಗಿರುತ್ತೇನೆ ಎಂದು ಉತ್ತರಿಸಿದ್ದಾರೆ.

- Advertisement -

Latest Posts

Don't Miss