Wednesday, July 2, 2025

Latest Posts

ಚಿತ್ರಹಿಂಸೆ ಕೊಟ್ಟು ಕೊಂದವಳ ಶಾಪಕ್ಕೆ ಇರಾನ್ ಬಲಿ!?

- Advertisement -

ಇವತ್ತು ಇರಾನ್ ಅಕ್ಷರಶಃ ವಿಲವಿಲ ಒದ್ದಾಡುತ್ತಿದೆ. ಇಸ್ರೇಲ್ ಹಾಗೂ ಇರಾನ್ ಮಧ್ಯೆ ಉಂಟಾದ ಸಂಘರ್ಷಕ್ಕೆ ಯುದ್ಧದ ಕಾರ್ಮೋಡವೇ ಆವರಿಸಿಕೊಂಡಿದೆ. ಜನ ಸಾಮಾನ್ಯರು ಕಣ್ಣೀರಿಡುತ್ತಿದ್ದಾರೆ. ಇಡೀ ವಿಶ್ವವೇ ಇರಾನ್ ಸ್ಥಿತಿ ಕಂಡು ಮರುಕಪಡುತ್ತಿದೆ. ಆದರೇ, 22 ವರ್ಷಗಳ ಹಿಂದೆ ಇರಾನ್​ ಬೀದಿಯಲ್ಲಿ ಅವಳೊಬ್ಬಳು ಬಿಕ್ಕಳಿಸಿ ಬಿಕ್ಕಳಿಸಿ ಅತ್ತಿದ್ಳು.. ಅಯ್ಯೋ ನೋವು ಅಂದ್ರೂ ಕೇಳದೇ ಸಾರ್ವಜನಿಕವಾಗಿ 100 ಛಡಿಯೇಟು ಬಿದ್ದಿದ್ವು. ಇರಾನ್ ಅನ್ನೋ ಕರ್ಮಠ ಮುಸಲ್ಮಾನರ ದೇಶದ ಷೆರಿಯಾ ಕಾನೂನು ಆ ಹುಡುಗಿಯನ್ನ ಬಿಕ್ಕಳಿಸಿ ಅಳುವಂತೆ ಮಾಡಿತ್ತು.. ಅದಕ್ಕಿಂತ್ಲೂ ನೀಚವಾಗಿ ಆಕೆಗೆ ನರಕ ತೋರಿಸಿ ಕೊನೆಗೆ ಸಾರ್ವಜನಿಕವಾಗಿ ನೇಣು ಹಾಕಿ ಕೊಂದು ಶಿಕ್ಷೆ ನೀಡಲಾಯ್ತು. ಆ ಅಪ್ಪ ಅಮ್ಮ ಇಲ್ಲದ ಅನಾಥ ಹುಡುಗಿ ಕಣ್ಣೀರೇ ಇವತ್ತು ಇರಾನ್ ಅನ್ನೋ ದೇಶವನ್ನ ಅಳಿಸುತ್ತಿದೆ ಅನ್ನೋ ಒಂದು ಚರ್ಚೆ ಇದೀಗ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದೆ..

ಅತೀಫಾ ಸಹಾಲೆಹ್‌ ಅನ್ನೋ ಇದೇ 13 ವರ್ಷದ ಹುಡುಗಿಯನ್ನೇ ಇರಾನ್ ಬಹಿರಂಗವಾಗಿ ಗಲ್ಲಿಗೇರಿಸಿ ಕೊಂದಿತ್ತು. ಅವಳು ಮಾಡಿದ್ದು ಒಂದೇ ತಪ್ಪು ಪ್ರೀತಿ.. ಹೌದು, ಟೀನೇಜ್ ಹುಡುಗಿ ಅತೀಫಾ ಸಹಾಲೆಹ್‌ ಇಷ್ಟಪಟ್ಟ ಹುಡುಗನೊಂದಿಗೆ ಕಾರಿನಲ್ಲಿ ಕುಳಿತಿದ್ಳು.. ಇರಾನ್ ಪೊಲೀಸರು ಇದೇ ತಪ್ಪನ್ನೇ ಮುಂದಿಟ್ಟುಕೊಂಡು ಅರೆಸ್ಟ್ ಮಾಡಿದ್ರು. ನಿಮಗೆ ಗೊತ್ತಿರ್ಲಿ ಇರಾನ್ ನಲ್ಲಿ ಮಹಿಳೆ ಅನ್ನೋಳು ವಸ್ತುಗಿಂತ್ಲೂ ಕಡೆ ಆಗಿದ್ದಾಳೆ. ಅಲ್ಲಿನ ಷೆರಿಯಾ ಕಾನೂನು ಹೇಗಿದೆ ಎಂದರೇ ಗಂಡಸರ ಮಾತು ಕೇಳದಿದ್ರೂ ಬಹಿರಂಗವಾಗಿ ಛಡಿಯೇಟು ಕೊಟ್ಟೋ? ಕಲ್ಲಿನಿಂದ ಹೊಡೆದೋ ಕ್ರೂರವಾಗಿ ಶಿಕ್ಷಿಸುತ್ತಾರೆ.. ಹೀಗೆ ಅರೆಸ್ಟ್ ಆದ ಹುಡುಗಿ ಹಿನ್ನೆಲೆ ಏನು ಗೊತ್ತಾ? ಅದು ನಿಜಕ್ಕೂ ದಾರುಣ.

ಅತೀಫಾ ಸಹಾಲೆಹ್‌ 5 ವರ್ಷ ಇದ್ದಾಗ್ಲೇ ಅಮ್ಮ ಸಾವನ್ನಪ್ಪಿದ್ಳು. ಅಪ್ಪ ಅನಿಸಿಕೊಂಡ ಬೆಪ್ಪ ಮತ್ತೊಂದು ಮದುವೆ ಮಾಡಿಕೊಂಡಿದ್ದ.. ವ್ಯಸನಗಳ ದಾಸನಾಗಿದ್ದ.. ಅತೀಫಾ ಸಹಾಲೆಹ್‌ ಅನ್ನೋ ಜಾಣೆ ಅಜ್ಜ ಅಜ್ಜಿ ಜೊತೆಯಲ್ಲಿದ್ಳು. 13ನೇ ವಯಸ್ಸಿಗೇ ಮತ್ತೊಬ್ಬ ಹುಡುಗನೊಂದಿಗೆ ಕಾಣಿಸಿಕೊಂಡಿದ್ಳು ಅನ್ನೋ ತಪ್ಪಿಗೆ ಅರೆಸ್ಟ್ ಮಾಡಿದ್ದ ಹುಡುಗಿಯನ್ನ ಜೈಲಿನಲ್ಲಿ ಜೈಲರ್​ ಗಳು ಹೀನಾಯವಾಗಿ ಅತ್ಯಾಚಾರ ಮಾಡಿದ್ರು.. ಆ ನೀಚರ ಕೃತ್ಯ ಹೇಗಿತ್ತು ಎಂದರೇ ಅತೀಫಾ ಸಹಾಲೆಹ್‌ ನೋಡಲು ಬಂದ ಅಜ್ಜಿ ಕಂಗಾಲಾಗಿ ಹೋಗಿದ್ಳು. ಎರಡು ಕೈ ಬಳಸಿಕೊಂಡು ಮಕ್ಕಳಂತೆ ತೆವಳುತ್ತಾ ಬಂದು ಅಜ್ಜಿಯನ್ನ ನೋಡಿದ್ಳು ಅತೀಫಾ ಸಹಾಲೆಹ್‌..

ಇರಾನ್ ಕಾನೂನಿನ ಕ್ರೌರ್ಯ ಎಂಥದ್ದು ಎಂದರೇ ಅವಳು ಅಪ್ರಾಪ್ತಳು ಅನ್ನೋ ಕಾರಣ ನೀಡಿಯೇ ಶಿಕ್ಷಿಸಿದ್ದ ಕೋರ್ಟ್ ಅತೀಫಾ ಸಹಾಲೆಹ್‌ ದೈಹಿಕ ವಯಸ್ಸು ಮತ್ತು ಮಾನಸಿಕ ವಯಸ್ಸು ಎಷ್ಟು ಅಂತ ವೈಜ್ಞಾನಿಕವಾಗಿ ಪರೀಕ್ಷಿಸಲೇ ಇಲ್ಲ.. ಅತ್ಯಾಚಾರಕ್ಕೊಳಗಾದ ಹುಡುಗಿಯನ್ನ ಮತ್ತೊಂದು ಸಲ ವ್ಯಭಿಚಾರ ಮಾಡಿದ್ದಾಳೆ ಅಂತ ಹೇಳಿ ಬಂಧಿಸಿದ್ದ ಪೊಲೀಸರು ಗಲ್ಲಿಗೇರಿಸಿದ್ರು.. 2004 ರ ಆಗಸ್ಟ್ 15ರಂದು, ಅತೀಫಾ ಅವರನ್ನು ಇರಾನ್‌ನ ಸಾರ್ವಜನಿಕ ರಸ್ತೆ ಮದ್ಯೆ ನೂರಾರು ಜನರ ಮುಂದೆ ಬಾಲಕಿಯನ್ನ ದರದರನೆ ಎಳೆದು ತಂದು ವ್ಯಭಿಚಾರದ ಆರೋಪದ ಮೇಲೆ ಗಲ್ಲಿಗೇರಿಸಲಾಯಿತು. ಇರಾನಿನ ಕಾನೂನಿನ ಪ್ರಕಾರ, ಇರಾನಿನ ಕಾನೂನಿನ ಪ್ರಕಾರ, 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಯಾರನ್ನೂ ಗಲ್ಲಿಗೇರಿಸಲಾಗುವುದಿಲ್ಲ. ಆದರೆ ಇಲ್ಲಿ ಇದ್ದದ್ದು ನ್ಯಾಯದ ಮನಸ್ಸಿನಲ್ಲಿದ್ದ ಕ್ರೂರ ಮನೋಭಾವ. ಅತೀಫಾ ವಯಸ್ಸನ್ನು ಕೃತಕವಾಗಿ ಹೆಚ್ಚಿಸಿ, 22 ವರ್ಷ ಎಂದು ದಾಖಲಿಸಿದರು. ನ್ಯಾಯಾಲಯ, ವೈದ್ಯಕೀಯ ದಾಖಲೆಗಳೆಲ್ಲವೂ ಸುಳ್ಳು ಮಾಡಿದಂತೆ ವರದಿಯಾಗಿತ್ತು. ಹೀಗೆ ನಿರ್ದಯವಾಗಿ ಸತ್ತವಳ ಆರ್ತನಾದವೇ ಇವತ್ತು ಇರಾನ್ ಅನ್ನೋ ಕರ್ಮಠರ ದೇಶವನ್ನ ಅಳಿಸುತ್ತಿದೆಯೇ?

- Advertisement -

Latest Posts

Don't Miss