ನನ್ನನ್ನು ಮುಟ್ಟಿದರೆ ನೀನು 35 ತುಂಡುಗಳಾಗಿರುತ್ತೀಯ ಅಂತ ಮೊದಲ ರಾತ್ರಿಯೇ ಗಂಡನಿಗೆ ಚಾಕಿವಿನಿಂದ ಬೆದರಿಕೆ ಹಾಕಿದ್ದಾಳೆ. ಉತ್ತರ ಪ್ರದೇಶದಲ್ಲಿ ನಡೆದಿರೋ ಈ ಘಟನೆ ವರನಿಗೆ ಆಘಾತ ನೀಡಿದೆ.
ಪ್ರಯಾಗ್‌ರಾಜ್ ಎಡಿಎ ಕಾಲೋನಿಯ 26 ವರ್ಷದ ನಿಶಾದ್, ಏಪ್ರಿಲ್ 29 ರಂದು ಸಿತಾರಾ ಅವರನ್ನು ವಿವಾಹವಾದರು. ನವವಿವಾಹಿತನಿಗೆ ಸುಂದರ ಸಂಸಾರ ಶುರುವಾಗಬೇಕಿತ್ತು. ಆದ್ರೆ ಮದುವೆ ರಾತ್ರಿಯೇ ವಧು ತನ್ನ ಗಂಡನನ್ನು ಪ್ರೀತಿಯಿಂದ ಸ್ವೀಕರಿಸಲಿಲ್ಲ.
ಮದುವೆಯ ರಾತ್ರಿ ವಧು ಚಾಕು ಹಿಡಿದು ನಾನು ಅಮನ್ ಗೆ ಸೇರಿದವಳು. ನನ್ನನ್ನು ಮುಟ್ಟಿದರೆ ನಿಮ್ಮನ್ನ 35 ತುಂಡುಗಳನ್ನು ಮಾಡ್ತೀನಿ ಅಂತ ಭಯಾನಕವಾಗಿ ಎಚ್ಚರಿಕೆ ನೀಡಿದಾಳೆ. ಏಪ್ರಿಲ್ 29 ರಂದು ಮದುವೆಯಾಗಿದ್ದ ಈ ಜೋಡಿಗೆ ಮೇ ೨ ರಂದು ಭವ್ಯ ಸಮಾರಂಭದೊಂದಿಗೆ ಸ್ವಾಗತ ಮಾಡಿಕೊಂಡಿದ್ದರು. ಆ ದಿನ ಸಮಾರಂಭ, ಆಚರಣೆಗಳಿಂದ ಕೂಡಿತ್ತು. ಆದ್ರೆ ವರನಿಗೆ ಆ ರಾತ್ರಿ ನಿದ್ದೆಯಿಲ್ಲದೆ ಭಯದಿಂದ ಕೂಡಿತ್ತು.
ಮೊದಲ ರಾತ್ರಿಯೇ ನವವಧು ಸ್ವಷ್ಟವಾಗಿ ಹೇಳಿದ್ದು ನನ್ನನ್ನು ಮುಟ್ಟಬೇಡ. ನಾನು ಅಮನ್‌ಗೆ ಸೇರಿದ್ದು, ನನ್ನ ಮುಟ್ಟಿದರೆ ನೀವು ೩೫ ತುಂಡುಗಳಾಗುತ್ತೀರಿ ಅಂತ. ಅದೇ ರೀತಿ ಸಿತಾರಾ ತನ್ನ ಮುಸುಕಿನ ಕೆಳಗೆ ಪ್ರತಿದಿನ ಚಾಕುವನ್ನು ಹಿಡಿದು ಮಲಗುತ್ತಿದ್ದಳು. ಮುಟ್ಟಿದರೆ ಚಾಕು ಇರಿಯೋದಾಗಿ ಹೇಳುತ್ತಿದ್ದಳು ಎಂದು ವರದಿಯಾಗಿದೆ. ಅವಳು ನಿದ್ರೆಯಲ್ಲಿ ನನ್ನನ್ನು ಚಾಕುವಿನಿಂದ ಇರಿಬಹುದು ಅನ್ನೋ ಭಯದಿಂದ ನಾನು ಎಚ್ಚರವಾಗಿದ್ದೆ. ನಾನು ಮತ್ತೊಂದು ಸುದ್ದಿಯಾಗಬಹುದೆಂದು ನಾನು ಭಾವಿಸಿದೆ ಅಂತಾ ವರ ನಿಶಾದ್ ಹೇಳಿಕೊಂಡಿದ್ದಾರೆ.