ನಟಿ ಶೆಫಾಲಿ ಜರಿವಾಲ ಅವರ ದುರಂತ ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ. ಶೆಫಾಲಿ ಅವರ ನಿಗೂಢ ಸಾವು ಭಾರತೀಯ ಚಿತ್ರರಂಗದಲ್ಲೇ ಭಾರೀ ಸದ್ದು ಮಾಡ್ತಿದೆ. ಶೆಫಾಲಿ ಜರಿವಾಲ ಅವರ ಸಾವಿನ ಕಾರಣ ನಿಗೂಢವಾಗಿದೆ.
ಶೆಫಾಲಿ ಜರಿವಾಲ ದುರಂತದ ಬಗ್ಗೆ ಅವರ ಪತಿ ಪರಾಗ್ ತ್ಯಾಗಿ ಅವರು ಮಾಹಿತಿ ನೀಡಿದ್ದಾರೆ. ಶೆಫಾಲಿ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು ಎನ್ನಲಾಗಿದೆ. ಶೆಫಾಲಿ ಅವರಿಗೆ ಚಿಕ್ಕ ವಯಸ್ಸಿನಲ್ಲೇ ಮೂರ್ಛೆ ರೋಗ ಕೂಡ ಇತ್ತಂತೆ. ಈ ಬಗ್ಗೆ ಸಂದರ್ಶನವೊಂದರಲ್ಲಿ ತಾವೇ ಹೇಳಿಕೊಂಡಿದ್ದಾರೆ. ನಾನು 15ನೇ ವಯಸ್ಸಿನಿಂದ್ಲೇ ಮೂರ್ಛೆ ರೋಗದಿಂದ ಬಳಲುತ್ತಿದ್ದೇನೆ. ಯಾವಾಗ ಏನು ಬೇಕಾದರೂ ಆಗಬಹುದು. ಹೀಗಾಗಿ ಹೆಚ್ಚು ಸಿನಿಮಾಗಳಲ್ಲಿ ನಟಿಸಿಲ್ಲ ಅಂತಾ ಬಹಿರಂಗವಾಗೇ ಹೇಳಿಕೊಂಡಿದ್ರು.
ಇದರ ಜೊತೆಗೆ ಶೆಫಾಲಿ ತನ್ನ ವಯಸ್ಸು ಮರೆಮಾಚಲು ಔಷಧಿ ತೆಗೆದುಕೊಳ್ಳುತ್ತಿದ್ರಂತೆ ಅನ್ನೋ ಮಾತುಗಳು ಕೇಳಿಬರುತ್ತಿವೆ. 42ನೇ ವಯಸ್ಸಿನಲ್ಲೂ ಶೆಫಾಲಿ ತುಂಬಾ ಫಿಟ್ ಅಂಡ್ ಫೈನ್ ಆಗಿದ್ರು. ಫಿಟ್ ನೆಸ್ ಫ್ರೀಕ್ ಆಗಿದ್ದ ಶೆಫಾಲಿ, ಚರ್ಮದ ಆರೈಕೆಗೂ ವಿಶೇಷ ಕಾಳಜಿ ವಹಿಸುತ್ತಿದ್ರು. ವಯಸ್ಸು 40 ದಾಟಿದ್ರೂ ಹರೆಯದ ಹುಡುಗಿಯಂತೆ ಮಿಂಚುತ್ತಿದ್ರು.
ಶೆಫಾಲಿ ಸಾವಿನ ಬಳಿಕ ಅವರ ಬ್ಯೂಟಿ ಸಿಕ್ರೇಟ್ ಬಗ್ಗೆ ಭಾರೀ ಚರ್ಚೆಗಳಾಗ್ತಿವೆ. ಚರ್ಮದ ಸುಕ್ಕು ಬರಬಾರದೆಂದು ಕಾಸ್ಮೆಟಿಕ್ಸ್ ಔಷಧಿ ತೆಗೆದುಕೊಳ್ಳುತ್ತಿದ್ರು ಎನ್ನಲಾಗ್ತಿದೆ. ಶೆಫಾಲಿ ಆರೋಗ್ಯಕರ ಡಯಟ್ ಪಾಲಿಸುತ್ತಿದ್ರು. ಒಂದು ದಿನವೂ ಮಿಸ್ ಮಾಡದೇ ಯೋಗ, ವ್ಯಾಯಾಮ ಮಾಡ್ತಿದ್ರು. ಆದರೂ ಕಾರ್ಡಿಯಾರ್ಟಿಕ್ ಅರೆಸ್ಟ್ ಆಗಿರೋದು ಅನುಮಾನ ಮೂಡುವಂತೆ ಮಾಡಿದೆ.
ಇದೇ ವೇಳೆ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್, ಕರೊನಾ ವೇಳೆ ಆಡಿದ್ದ ಮಾತುಗಳು ಭಾರೀ ವೈರಲ್ ಆಗ್ತಿವೆ. ಇಡೀ ದೇಶದಲ್ಲಿ ಯಾವಾಗ ಮತ್ತು ಯಾರು ಸಾಯುತ್ತಾರೆ ಅಂತಾ ಯಾರಿಗೂ ತಿಳಿದಿಲ್ಲ. ಕೊರೊನಾ ವಾಕ್ಸಿನ್ ತೆಗೆದುಕೊಂಡ ನಂತರದ ಸಾವುಗಳ ಬಗ್ಗೆ ಯಾರಿಗೂ ಗೊತ್ತಾಗುತ್ತಿಲ್ಲ. ಅಖಿಲೇಶ್ ಯಾದವ್ ಅವರ ಈ ಮಾತುಗಳು ಈಗ ನಿಜವೆಂದು ಸಾಬೀತಾಗುತ್ತಿವೆ ಎಂಂದು ಸೋಶಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಹಾಕಲಾಗ್ತಿದೆ.