Wednesday, July 2, 2025

Latest Posts

Horoscope: ಈ ನಾಲ್ಕು ರಾಶಿಯವರು ಮೃದು ಮಾತಿನವರು

- Advertisement -

Horoscope: ಮಾತು ಮನೆ ಕೆಡಿಸಿತು, ತೂತು ಒಲೆ ಕೆಡಿಸಿತು ಅನ್ನೋ ಮಾತಿದೆ. ಅಂದ್ರೆ ನಮ್ಮ ಮಾತು ಸರಿಯಾಗಿದ್ದರೆ ಮಾತ್ರ ನಮ್ಮ ಜೀವನದಲ್ಲಿ, ಮನೆಯಲ್ಲಿ ನೆಮ್ಮದಿ, ಶಾಂತಿ ನೆಲೆಸಲು ಸಾಧ್ಯ. ಇಲ್ಲವಾದರೆ, ಜೀವನವೇ ನರಕವಾದಂತೆ. ಹಾಗಾಗಿ ಬೆಲ್ಲವಿಲ್ಲದಿದ್ದರೂ ಬೆಲ್ಲದಂಥ ಮಾತಿರಬೇಕು ಅಂತಾ ಹಿರಿಯರು ಹೇಳಿದ್ದಾರೆ. ಅಂಥ ಸವಿ ಮಾತನ್ನಾಡುವ ರಾಶಿಯ ಬಗ್ಗೆ ನಾವಿಂದು ಹೇಳಲಿದ್ದೇವೆ.

ವೃಷಭ ರಾಶಿ: ವೃಷಭ ರಾಶಿಯವರಿಗೆ ಶಿಕ್ಷಕರಾಗುವ ಅರ್ಹತೆ ಇರುವ ಎಲ್ಲ ಸಾಧ್ಯತೆಗಳಿದೆ. ಯಾಕಂದ್ರೆ ಇವರ ಮಾತಿನ ರೀತಿಯೇ ಅಷ್ಟು ಚಂದ. ಇವರಿಗೆ ತಾಳ್ಮೆ ಹೇಗೆ ಹೆಚ್ಚಾಗಿದೆಯೋ, ಅದೇ ರೀತಿ ಇವರ ಮಾತು ಕೂಡ ಮೃದು. ಬೇರೆಯವರ ಮನಸ್ಸಿಗೆ ನೋವಾಗದಂತೆ, ತಾಳ್ಮೆಯಿಂದ ವರ್ತಿಸುವ ಇವರು, ಮಾತಿಗೂ ಕೂಡ ಅಷ್ಟೇ ಬೆಲೆ ನೀಡುತ್ತಾರೆ.

ಕರ್ಕ ರಾಶಿ: ಕರ್ಕ ರಾಶಿಯವರು ಕೂಡ ಮೃದು ಸ್ವಭಾವದವರು. ಇನ್ನ“ಬ್ಬರ ಮನಸ್ಸಿಗೆ ನೋವಾಗುವಂತೆ ಮಾತನಾಡುವ ಸ್ವಭಾವ ಇವರದ್ದಲ್ಲ. ಯೋಚಿಸಿ, ಎಷ್ಟು ಬೇಕೋ ಅಷ್ಟೇ ಮಾತನಾಡುವುದು. ಗೌರವ ನೀಡಿ ಮಾತನಾಡುವುದು ಇವರ ಗುಣ. ಹಾಗಾಗಿಯೇ ಜನ ಕರ್ಕ ರಾಶಿಯವರ ಮಾತನ್ನು ಮೆಚ್ಚುತ್ತಾರೆ.

ತುಲಾ ರಾಶಿ: ತುಲಾ ರಾಶಿಯವರು ಮಾತಿನ ಮಲ್ಲರು. ಇವರು ಮಾತನಾಡಿದರೆ, ಎದುರಿನವರು ಖುಷಿಪಡದೇ, ನಗದೇ ಇರಲಾರದು. ಹಾಸ್ಯ ಪ್ರವತ್ತಿಯ ತುಲಾ ರಾಶಿಯವರಿಗೆ ಚೆನ್ನಾಗಿ ಮಾತನಾಡುವುದೂ ಗ“ತ್ತು. ಗಂಭೀರವಾಗಿ ಇರುವುದೂ ಗ“ತ್ತು. ಇವರ ಮಾತಿನಿಂದಲೇ ಇವರು ಸೆಂಟರ್ ಆಫ್ ಅಟ್ರ್ಯಾಕ್ಷನ್ ಎನ್ನಿಸಿಕ“ಳ್ಳುವುದು.

ಮೀನ ರಾಶಿ: ಮೀನ ರಾಶಿಯವರು ಮೃದು ಸ್ವಭಾವದವರು, ಮೃದು ಭಾಷಿಕರಾಗಿರುತ್ತಾರೆ. ಶಾಂತ ಸ್ವಭಾವದವರಾದ ಮೀನ ರಾಶಿಯವರು ಬೇರೆಯವರ ಮನಸ್ಸನ್ನು ನೋಯಿಸಲು ಇಚ್ಛಿಸುವುದಿಲ್ಲ. ಇವರ ಈ ಮೃದು ಮಾತಿನ ರೀತಿಯಿಂದಲೇ ಇವರು ಗಮನ ಸೆಳೆಯುತ್ತಾರೆ.

- Advertisement -

Latest Posts

Don't Miss