Spiritual: ವೃಂದಾವನ ಯಮುನಾ ನದಿ ದಡದಲ್ಲಿ ಇರುವ ಕಾಡಿನ ಹೆಸರು ನಿಧಿವನ. ಈ ಕಾಡಿನಲ್ಲಿ ರಾಾತ್ರಿ ವೇಳೆ ರಾಧಾ ಮತ್ತು ಕೃಷ್ಣ ರಾಸಲೀಲೆಯಾಡಲು ಬರುತ್ತಾರೆ ಅಂತಾ ಹೇಳಲಾಗುತ್ತದೆ.
ಹಾಗಾಗಿಯೇ ಇಲ್ಲಿರುವ ರಾಧಾ ಕೃಷ್ಣರ ದೇವಸ್ಥಾನ ಸಂಜೆ 7 ಗಂಟೆಗೆ ಮುಚ್ಚಲಾಗುತ್ತದೆ. ಅಲ್ಲದೇ, ಭಕ್ತರಿಗೆ ದೇವಸ್ಥಾನದ ಬಾಗಿಲು ಬಂದ್ ಆದ ಬಳಿಕ, ಇಲ್ಲಿನ ಅರ್ಚಕರೆಲ್ಲ ಸೇರಿ, ದೇವಸ್ಥಾನದಲ್ಲಿ ಹಾಲು, ಹಣ್ಣು, ಹಾಸಿಗೆ ಎಲ್ಲದರ ವ್ಯವಸ್ಥೆ ಮಾಡುತ್ತಾರೆ. ಮರುದಿನ ಬೆಳಿಗ್ಗೆ ದೇವಸ್ಥಾನದ ಒಳಗೆ ನೋಡಿದಾಗ, ಹಾಲು, ಹಣ್ಣಿನಲ್ಲಿ ವ್ಯತ್ಯಾಸವಾಗಿರುತ್ತದೆ. ಹಾಸಿಗೆ ಹರಡಿಕ“ಂಡಿರುತ್ತದೆ ಎಂದು ಅದನ್ನು ನೋಡಿದವರೇ ಹೇಳುತ್ತಾರೆ.
ಅಲ್ಲದೇ, ಈ ವನದಲ್ಲಿರುವ ಮರಗಳು ರಾತ್ರಿ ವೇಳೆಗೆ ಗೋಪಿಕೆಯರಾಗುತ್ತಾರಂತೆ. ಇವರ ರಾಸಲೀಲೆಯನ್ನು ಯಾರು ನೋಡಲು ಪ್ರಯತ್ನಿಸುತ್ತಾರೋ, ಅಂಥವರ ಕಣ್ಣು ಕುರುಡಾಗುತ್ತದೆ. ಮೂಕರಾಗುತ್ತಾರೆ. ಅಥವಾ ಬುದ್ಧಿ ಮಾಂದ್ಯರಾಗುತ್ತಾರೆಂದು ಹೇಳಲಾಗಿದೆ.
ಇವರ ಹೇಳುವ ಮಾತು ಎಷ್ಟು ಸತ್ಯ ಅಂತ ನೋಡೋಣವೆಂದು ಓರ್ವ ವಿದೇಶಿಗ, ಬೇಡ ಬೇಡವೆಂದರೂ ನಿಧಿವನದ ದೇವಸ್ಥಾನದ ಬಳಿ 7 ಗಂಟೆಯ ಬಳಿಕ ಕಾದು ಕುಳಿತಿದ್ದ. ರಾತ್ರ 9ಕ್ಕೆ ದೇವಸ್ಥಾನದ ಆಚೆಯಿಂದ ಸದ್ದು ಬಂದು, ಆತ ಕಿಟಕಿಯಿಂದ ಇಣುಕಿ ನೋಡಿದ್ದಾನೆ. ಅಲ್ಲೇ ಕುಸಿದು ಬಿದ್ದಿದ್ದಾನೆ. ಮರುದಿನ ಆತನನ್ನು ಮಾತನಾಡಿಸಿದರೆ, ಆತನಿಗೆ ಮಾತೇ ಬರುತ್ತಿಲ್ಲ. ಆತ ಸನ್ನೆ ಮೂಲಕ ತಾನು ನೋಡಿರುವುದನ್ನು ವಿವರಿಸಲು ಪ್ರಯತ್ನಿಸುತ್ತಿದ್ದನಂತೆ.
ಅದಕ್ಕೂ ಮುನ್ನ ಆ ವಿದೇಶಿಗ ವಿದ್ಯಾವಂಂತನಾಗಿದ್ದ, ಬುದ್ಧಿವಂತನಾಗಿದ್ದ, ಚೆನ್ನಾಗಿ ಮಾತನಾಡುತ್ತಿದ್ದ. ಆದರೆ ಆ ದೃಶ್ಯ ಪರೀಕ್ಷಿಸಲು ಹೋಗಿ, ಅವನು ಮೂಕನಾದ. ಇಂದಿಗೂ ದೇವಸ್ಥಾನದ ಬಳಿಯೇ ಆತ ಅಲೆದಾಡುತ್ತಿದ್ದಾನಂತೆ. ಅವನ ರೀತಿ ಯಾರಾದರೂ ಪರೀಕ್ಷಿಸುವ ಮಾತನಾಡಿದರೆ, ಅಂಥ ತಪ್ಪು ಎಂದಿಗೂ ಮಾಡಬೇಡಿ ಎಂದು ಸನ್ನೆ ಮೂಲಕ ಹೇಳುತ್ತಾನಂತೆ.