International News: ಒಂದು ಕಾಲದಲ್ಲಿ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಮತ್ತು ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ ಕುಚಿಕು ಗೆಳೆಯರಂತೆ ಇದ್ದರು. ಅಮೆರಿಕದಲ್ಲಿ ಎರಡನೇಯ ಬಾರಿ ಟ್ರಂಪ್ ಗೆದ್ದು ಬರಲು ಮಸ್ಕ್ ಸಹ ಶ್ರಮಪಟ್ಟಿದ್ದರು. ಆದರೆ ಟ್ರಂಪ್ 2ನೇ ಬಾರಿ ಅಧ್ಯಕ್ಷರಾದ ಬಳಿಕ ತೆರಿಗೆ ನೀತಿಯಲ್ಲಿ ಭಾರೀ ಬದಲಾವಣೆ ತಂದಿದ್ದಕ್ಕಾಗಿ, ಮಸ್ಕ್ ಅಸಮಾಧಾನ ವ್ಯಕ್ತಪಡಿಸಿದ್ದರು. ಅಲ್ಲದೇ, ಪಕ್ಷದಿಂದ ಆಚೆ ಬಂದಿದ್ದರು.
ನಿನ್ನೆ ತಾನೇ ಎಲಾನ್ ಮಸ್ಕ್ ತಾನು ನೂತನ ಪಕ್ಷ ಸ್ಥಾಪಿಸುವುದಾಗಿ ಹೇಳಿಕೆ ನೀಡಿದ್ದರು. ಇದಕ್ಕೆ ಕಾರಣ ಅದೇ ನೂತನ ತೆರಿಗೆ ನೀತಿ. ಒನ್ ಬಿಗ್ ಬ್ಯೂಟಿಫುಲ್ ಹೆಸರಿನ ತೆರಿಗೆ ನೀತಿ. ಇದರಿಂದ ಅಮೆರಿಕದ ಜನರಿಗೆ ಸಮಸ್ಯೆ ಉಂಟಾಗುತ್ತದೆ. ಈ ತೆರಿಗೆ ನೀತಿ ಜಾರಿಗೆ ಬಂದರೆ, ನಾನು ನೂತನ ಪಕ್ಷ ಸ್ಥಾಪನೆ ಮಾಡುತ್ತೇನೆ. ಇದರಿಂದ ಸ್ಥಳೀಯರಿಗೆ ಅನುಕೂಲವಾಗುವಂತೆ ಮಾಡುತ್ತೇನೆ. 2028ರಲ್ಲಿ ಚುನಾವಣೆಗೂ ನಿಲ್ಲುತ್ತೇನೆ ಎಂದು ಎಲಾನ್ ಮಸ್ಕ್ ಸವಾಾಲ್ ಹಾಕಿದ್ದರು.
ಇದೀಗ ಈ ವಿಷಯಕ್ಕೆ ತಿರುಗೇಟು ನೀಡಿರುವ ಟ್ರಂಪ್, ಇವಿ ವಿರೋಧಿಸುವುದು ನನ್ನ ಅಭಿಯಾನದ ಭಾಗವಾಗಿತ್ತು. ಈಗ ಈ ನಿರ್ಧಾರವನ್ನು ವಿರೋಧಿಸುತ್ತಿರುವುದು ಹಾಸ್ಯಾಸ್ಪದವಾಗಿದೆ. ಇತಿಹಾಸದಲ್ಲಿ ಮಸ್ಕ್‌ಗಿಂತ ಯಾರೂ ಇಷ್ಟು ಹೆಚ್ಚು ಸಬ್ಸೀಡಿ ಪಡೆದಿರಲಾರರು. ಸಬ್ಸಿಡಿ ಇಲ್ಲದಿದ್ದರೆ ಮಸ್ಕ್ ತಮ್ಮ ಅಂಗಡಿ ಮುಚ್ಚಿ ದಕ್ಷಿಣ ಆಫ್ರಿಕಾಗೆ ಹೋಗಬೇಕಿತ್ತು. ಇನ್ನು ಮುಂದೆ ರಾಕೇಟ್ ಉಡಾವಣೆ, ಉಪಗ್ರಹ, ಎಲೆಕ್ಟ್ರಾನಿಕ್ ಕಾರು ಉತ್ಪಾದನೆ ಇರುವುದಿಲ್ಲ ಎಂದು ಟ್ರಂಪ್ ಹೇಳಿದ್ದಾರೆ.