Friday, July 11, 2025

Latest Posts

Spiritual: ಈ 5 ಸೂತ್ರ ಪಾಲಿಸಿದವರಿಗೆ ದೇವರ ಆಶೀರ್ವಾದ ಸದಾ ಇರುತ್ತದೆ

- Advertisement -

Spiritual: ದೇವರ ಆಶೀರ್ವಾದ ನಮ್ಮ ಮೇಲಿರಬೇಕು ಎಂದರೆ ನಾವು ಕೆಲವು ರೀತಿ ನೀತಿಗಳನ್ನು ಪಾಲಿಸಬೇಕಾಗುತ್ತದೆ. ಅಂದರೆ ನಾವು ಜೀವಿಸುವ ರೀತಿಯಲ್ಲೇ ಧನಾತ್ಮಕ ಬದಲಾವಣೆ ಇರಬೇಕಾಗುತ್ತದೆ. ಹಾಗಾದ್ರೆ ಆ ಬದಲಾವಣೆಗಳು ಯಾವುದು ಅಂತಾ ತಿಳಿಯೋಣ ಬನ್ನಿ..

ಧ್ಯಾನ, ಜಪ, ಭಜನೆ: ಧ್ಯಾನ, ಜಪ, ಭಜನೆ ಈ ಮೂರು ನಮ್ಮ ಜೀವನದಲ್ಲಿ ಧನಾತ್ಮಕ ಬದಲಾವಣೆ ತರುವ ವಿಷಯವಾಗಿದೆ. ಯಾರು ಪ್ರತೀ ದಿನ ಧ್ಯಾನ ಮಾಡುತ್ತಾರೋ, ಅವರ ಏಕಾಗೃತೆ ಹೆಚ್ಚಾಗುತ್ತದೆ. ಯಾರು ಜಪ, ಭಜನೆ ಮಾಡುತ್ತಾರೋ, ಅವರ ನೆಮ್ಮದಿ ಹೆಚ್ಚುತ್ತದೆ.

ತಿಲಕವಿಡುವುದು: ನಾವು ತಿಲಕವಿಡುವುದರಿಂದ, ನಮ್ಮ ಏಕಾಗೃತೆ ಹೆಚ್ಚಾಗುತ್ತದೆ. ನಮ್ಮ ಹುಬ್ಬುಗಳ ನಡುವೆ ಇರುವ ಜಾಗವನ್ನು ಆಜ್ಞಾಚಕ್ರವೆಂದು ಕರೆಯಲಾಗುತ್ತದೆ. ಈ ಸ್ಥಳದಲ್ಲಿ ತಿಲಕವಿಡುವುದರಿಂದ ಆಕಾಗೃತೆ ಮತ್ತು ಸಕಾರಾತ್ಮಕತೆ ಹೆಚ್ಚಾಗುತ್ತದೆ.

ಸಾತ್ವಿಕ ಆಹಾರ: ಹಿಂದೂ ಧರ್ಮದಲ್ಲಿ ಸಾತ್ವಿಕ ಆಹಾರಕ್ಕೆ ಮಹತ್ವ ನೀಡಲಾಗಿದೆ. ಸಾತ್ವಿಕ ಆಹಾರ ಅಂದರೆ, ತರಕಾರಿ, ಹಣ್ಣು, ಸೊಪ್ಪು, ಕಾಳು ಇಂಥ ಆಹಾರ ಸೇವನೆ. ಅಂದರೆ, ಯಾರಿಗೂ ಉಪದ್ರ ನೀಡದೇ, ತಯಾರಾಗುವ ಆಹಾರ. ಇಂಥ ಆಹಾರ ಸೇವಿಸಿದರೆ, ದೇವರ ಆಶೀರ್ವಾದ ನಮಗೆ ಸಿಗುವುದಲ್ಲದೇ, ಆರೋಗ್ಯವೂ ಉತ್ತಮವಾಗಿರುತ್ತದೆ.

ಆಸ್ತಿಕರ ಸಂಗ: ನೀವು ಯಾರ ಜತೆ ಜೀವಿಸುತ್ತೀರೋ, ಯಾರ ಸಂಗ ಮಾಡುತ್ತೀರೋ, ಅವರಂತೆ ಆಗುತ್ತೀರಿ ಅಂತಾ ಹಿರಿಯರ ಹೇಳಿದ್ದಾರೆ. ಇದು ಸತ್ಯ ಕೂಡ. ವಾಚಾಳಿ ಸಂಗ ಮಾಡಿದರೆ, ನಿಮ್ಮ ಮಾತಿನಲ್ಲಿ ಋಣಾತ್ಮಕ ಬದಲಾವಣೆಯಾಗುತ್ತದೆ. ಸೌಮ್ಯ ಸ್ವಭಾವ, ಸ್ವಾಭಿಮಾನ, ಕೋಪಿಷ್ಟ ಹೀಗೆ ನೀವು ಯಾರ ಸಂಗ ಮಾಡುತ್ತೀರೋ, ಸ್ವಲ್ಪ ದಿನದಲ್ಲೇ ಅವರ ಹಾಗೆ ಆಡಲು ಶುರು ಮಾಡುತ್ತೀರಿ. ಹಾಗಾಗಿ ಆದಷ್ಟು ಆಸ್ತಿಕರ ಸಂಗ ಮಾಡಿ. ನಿಮಗೂ ಧ್ಯಾನ, ಭಕ್ತಿ, ಜಪತಪದಲ್ಲಿ ಆಸಕ್ತಿ ಹೆಚ್ಚುತ್ತದೆ.

ಇದರ ಜತೆಗೆ ಸಿಹಿಯಾದ ಮಾತು, ಮಿತವಾದ ಮಾತು, ಅವಶ್ಯಕತೆ ಇದ್ದಲ್ಲಿ ಮೌನ, ಕ್ಷಮಿಸುವ ಗುಣ, ದಾನ ಧರ್ಮದಂಥ ಗುಣ ಇದ್ದಲ್ಲಿ ದೇವರ ಆಶೀರ್ವಾದ ಸದಾ ನಮ್ಮ ಜತೆ ಇರುತ್ತದೆ.

- Advertisement -

Latest Posts

Don't Miss