Recipe: ಬೇಕಾಗುವ ಸಾಮಗ್ರಿ: ಅರಿಶಿನ ಎಲೆ, 1 ಕಪ್ ಅಕ್ಕಿ, ಅರ್ಧ ಕಪ್ ಕಾಯಿತುರಿ, ಉಪ್ಪು. ಇದಿಷ್ಟು ಹಿಟ್ಟಿಗಾದರೆ, ಹೂರಣಕ್ಕಾಗಿ 1 ಕಪ್ ಕಾಯಿತುರಿ, ಸಿಹಿ ಬೇಕಾಗುವಷ್ಟು ಬೆಲ್ಲ, ಏಲಕ್ಕಿ.
ಮಾಡುವ ವಿಧಾನ: ಅಕ್ಕಿಯನ್ನು ಚೆನ್ನಾಗಿ ಸ್ವಚ್ಚ ಮಾಡಿ, 1 ಗಂಟೆ ನೆನೆಸಿಡಿ. ಬಳಿಕ ಮಿಕ್ಸಿ ಜಾರ್‌ಗೆ ಅಕ್ಕಿ, ಉಪ್ಪು, ಕಾಯಿತುರಿ ಹಾಕಿ ರುಬ್ಬಿಕ“ಳ್ಳಿ. ಹಿಟ್ಟು ಹೆಚ್ಚು ಗಟ್ಟಿಯಾಗಿಯೂ, ಹೆಚ್ಚು ತೆಳುವಾಗಿಯೂ ಇರದೇ, ಸಮವಾಗಿರಬೇಕು.
ಬಳಿಕ ಅರಿಶಿನ ಎಲೆಯನ್ನು ಚೆನ್ನಾಗಿ ಸ್ವಚ್ಛ ಮಾಡಿ, ಕಡೆ ಕುಡಿ ಎರಡೂ ಕಡೆ ಸ್ವಲ್ಪ ಕತ್ತರಿಸಿಕ“ಳ್ಳಿ. ನಂತರ ಹೂರಣ ಮಾಡಲು, ಬೆಲ್ಲ ಪಾಕ ಬರಿಸಿ, ಅದಕ್ಕೆ ಕಾಯಿ ತುರಿ ಮತ್ತು ಏಲಕ್ಕಿ ಪುಡಿ ಹಾಕಿ ಮಿಕ್ಸ್ ಮಾಡಿ. ಹೂರಣ ಚೆನ್ನಾಗಿ ರೆಡಿಯಾದ ಬಳಿಕ ಅರಿಶಿನ ಎಲೆಗೆ ಅಕ್ಕಿಹಿಟ್ಟು ಸವರಿ, ಅದರ ಮೇಲೆ ಹೂರಣ ಹಾಕಿ ಎಲೆ ಮಡಿಚಿ, ನಿಧಾನವಾಗಿ, 15 ಮುಂಚೆ ಹಬೆ ಬರಿಸಿದ್ದ ಇಡ್ಲಿ ಪಾತ್ರೆಗೆ ಹಾಕಿ, 15ರಿಂದ 20 ನಿಮಿಷ ಬೇಯಿಸಿದರೆ ಪಾತೋಳಿ ರೆಡಿ.