- Advertisement -
Recipe: ಬೇಕಾಗುವ ಸಾಮಗ್ರಿ: 1 ಬೌಲ್ ಗೋಧಿ, 4ರಿಂದ 5 ಕೆಂಪು ಮೆಣಸು, 1 ಸ್ಪೂನ್ ಜೀರಿಗೆ, ಕೊತ್ತೊಂಬರಿ ಕಾಳು, ಸ್ವಲ್ಪ ಹುಣಸೆಹಣ್ಣು, ಕಾಲು ಕಪ್ ಕಾಯಿತುರಿ, ಉಪ್ಪು. ಎಣ್ಣೆ.
ಮಾಡುವ ವಿಧಾನ: ಗೋಧಿಯನ್ನು 1 ರಾತ್ರಿ ನೀರಿನಲ್ಲಿ ನೆನೆ ಹಾಕಿ, ಚೆನ್ನಾಗಿ ವಾಶ್ ಮಾಡಿ, ಮಿಕ್ಸಿ ಜಾರ್‌ಗೆ ಹಾಕಿ. ಇದರ ಜತೆ ಕೆಂಪು ಮೆಣಸು, ಜೀರಿಗೆ, ಕೊತ್ತೊಂಬರಿ ಕಾಳು, ಸ್ವಲ್ಪ ಹುಣಸೆಹಣ್ಣು, ಕಾಯಿತುರಿ, ಉಪ್ಪು ನೀರು ಹಾಕಿ ರುಬ್ಬಿ, ದೋಸೆ ಹಿಟ್ಟು ತಯಾರಿಸಿ. ಬಳಿಕ ಪ್ಯಾನ್‌ಗೆ ಎಣ್ಣೆ ಸವರಿ ದೋಸೆ ಹಾಕಿ. ಕಾಯಿ ಚಟ್ನಿಯ ಜತೆ ಈ ದೋಸೆ ಉತ್ತಮ ಕಾಂಬಿನೇಷನ್. ಇದು ರುಚಿಕರವೂ ಹೌದು, ಆರೋಗ್ಯಕರವೂ ಹೌದು. ನೀವು ಚಪಾತಿಯ ಬದಲು, ಹೀಗೆ ದೋಸೆ ಮಾಡಿಕ“ಡಬಹುದು.
- Advertisement -