Health Tips: ಈರುಳ್ಳಿ ಇಲ್ಲಾ ಅಂದ್ರೆ, ಚಾಟ್ಗಳು ಸಪ್ಪೆ ಸಪ್ಪೆಯಾಗತ್ತೆ. ಜೋಳದ ರೋಟ್ಟಿ ತಿನ್ನುವಾಗಲೂ ಈರುಳ್ಳಿ ಇರಲೇಬೇಕು. ಖಾರ ತಿಂಡಿಯ ರುಚಿ ಹೆಚ್ಚಿಸಲು ಕೂಡ ಈರುಳ್ಳಿ ಅವಶ್ಯಕ. ಇಂಥ ಈರುಳ್ಳಿ ಬರೀ ರುಚಿ ಹೆಚ್ಚಿಸಲಷ್ಟೇ ಅಲ್ಲದೇ, ನಮ್ಮ ಆರೋಗ್ಯವನ್ನೂ ಕಾಪಾಡುತ್ತದೆ. ಹಾಗಾದ್ರೆ ಈರುಳ್ಳಿ ಸೇವನೆಯ ಲಾಭವೇನು ಅಂತಾ ತಿಳಿಯೋಣ ಬನ್ನಿ..
ಈರುಳ್ಳಿ ಸೇವನೆಯಿಂದ ನಮ್ಮ ದೇಹದಲ್ಲಿರುವ ವಿಷಕಾರಕ ಅಂಶ ಆಚೆ ಹೋಗುತ್ತದೆ. ಇದರಿಂದ ನಮ್ಮ ಆರೋಗ್ಯ ಚೆನ್ನಾಗಿರುತ್ತದೆ. ಹಳ್ಳಿ ಕಡೆ ಜನ ಹಸಿ ತರಕಾರಿಯನ್ನು ಊಟದ ಜತೆ ತಿನ್ನುವುದರಿಂದಲೇ, ಅವರ ಆರೋಗ್ಯ ಅಷ್ಟು ಚೆನ್ನಾಗಿರುತ್ತದೆ.
ಈರುಳ್ಳಿ ಸೇವನೆಯಿಂದ ಲೈಂಗಿಕ ಸಮಸ್ಯೆ ದೂರವಾಗುತ್ತದೆ. ಲೈಂಗಿಕ ಸಮಸ್ಯೆಯಿಂದ ಬಳಲುತ್ತಿರುವವರು ಪ್ರತಿದಿನ ಊಟದಲ್ಲಿ ಈರುಳ್ಳಿ ಬಳಕೆ ಮಾಡುವುದರಿಂದ ಲೈಂಗಿಕ ಸಮಸ್ಯೆಗೆ ಪರಿಹಾರ ಸಿಗುತ್ತದೆ.
ನಿಮ್ಮ ಹೃದಯದ ಆರೋಗ್ಯ ಚೆನ್ನಾಗಿರಬೇಕು ಅಂದ್ರೆ, ನೀವು ಪ್ರತಿದಿನ ಈರುಳ್ಳಿ ಸೇವನೆ ಮಾಡಬೇಕು. ಏಕೆಂದರೆ ಇದು ಬಿಪಿ ಕಂಟ್ರೋಲಿನಲ್ಲಿ ಇರಿಸಲು ಸಹಾಯಕವಾಗಿದೆ. ರಕ್ತ ಸಂಚಲನವನ್ನು ಸರಿಯಾಗಿರಿಸಿ, ನಮ್ಮ ಆರೋಗ್ಯ ಅಭಿವೃದ್ಧಿಪಡಿಸಲು ಇದು ಸಹಾಯಕವಾಗಿದೆ.
ನೀವು ತಿಂದ ಆಹಾರ ಚೆನ್ನಾಗಿ ಜೀರ್ಣವಾಗಿ ನಿಮ್ಮ ಆರೋಗ್ಯ ಅಭಿವೃದ್ಧಿಯಾಗಬೇಕು, ಜೀರ್ಣಕ್ರಿಯೆಗೆ ಸಂಬಂಧಿಸಿದ, ಮಲ ಮೂತ್ರ ವಿಸರ್ಜನೆಗೆ ಸಂಬಂಧಿಸಿದ ಆರೋಗ್ಯ್ ಸಮಸ್ಯೆ ಕಾಡಬಾರದು ಅಂದ್ರೆ, ನೀವು ಈರುಳ್ಳಿ ಸೇವನೆ ಮಾಡಬೇಕು.
ಬಿಪಿ ಅಷ್ಟೇ ಅಲ್ಲದೇ, ಶುಗರ್ ಕೂಡ ಕಂಟ್ರೋಲಿನಲ್ಲಿಡಲು ಈರುಳ್ಳಿ ಸಹಾಯಕವಾಗಿದೆ. ಈರುಳ್ಳಿ ಇನ್ಸುಲಿನ್ ಉತ್ಪಾದಿಸಿ, ಗ್ಲೂಕೋಸ್ ಮಟ್ಟವನ್ನು ನಿಯಂತ್ರಿಸಲು ಸಹಕಾರಿಯಾಗಿದೆ.
ಇನ್ನು ಪ್ರತಿದಿನ ಈರುಳ್ಳಿ ತಿನ್ನಲಾಗದಿದ್ದರೂ, ವಾರದಲ್ಲಿ ಮೂರು ಬಾರಿ ಸೇವಿಸಬಹುದು. ನಿಮಗೇನಾದರೂ ಈರುಳ್ಳಿ ಸೇವಿಸಿದರೆ, ಅಲರ್ಜಿ ಎಂದಾದಲ್ಲಿ ವೈದ್ಯರ ಬಳಿ ವಿಚಾರಿಸಿ, ಬಳಿಸ ಸೇವಿಸುವುದು ಉತ್ತಮ.