Spiritual: ಬಿಗ್ಬಾಸ್ ಸೀಸನ್ 16ರಲ್ಲಿ ಮಿಂಚಿದ್ದ ಬಾಲಿವುಡ್ ಗಾಯಕ ಅಬ್ದು ರೋಜಿಕ್ನನ್ನು ದುಬೈನಲ್ಲಿ ಪೋಲೀಸರು ಬಂಧಿಸಿದ್ದಾರೆ. ಅಬ್ದು ಮೇಲೆ ಕಳ್ಳತನದ ಆರೋಪವಿದ್ದು, ದುಬೈ ಏರ್ಪೋರ್ಟ್ನಲ್ಲೇ ಅಬ್ದುನನ್ನು ಬಂಧಿಸಲಾಗಿದೆ.
ಅಬ್ದು ರಜಿಕ್ ಏನು ಕಳ್ಳತನ ಮಾಡಿದ್ದಾರೆಂದು ಇಲ್ಲಿಯವರೆಗೂ ಮಾಹಿತಿ ಇಲ್ಲ. ವಿಚಿತ್ರ ವಿಷಯ ಏನಪ್ಪಾ ಅಂದ್ರೆ ಅಬ್ದು ಶ್ರೀಮಂತ ವ್ಯಕ್ತಿಯಾಗಿದ್ದು, ಐಷಾರಾಮಿ ಜೀವನ ನಡೆಸುತ್ತಿದ್ದಾರೆ. ಅಲ್ಲದೇ, ದುಬೈನಲ್ಲೇ ವಾಸಿಸುತ್ತಿರುವ ಅಬ್ದು, ಅಲ್ಲೇ ಸ್ವಂತ ಮನೆಯನ್ನೂ ಹ“ಂದಿದ್ದಾರೆ. ಇಷ್ಟಾದರೂ ಕೂಡ ಕಳ್ಳತನ ಮಾಡುವ ಅವಶ್ಯಕತೆ ಏನಿತ್ತು ಅನ್ನೋದೇ ಜನರ ಪ್ರಶ್ನೆಯಾಗಿದೆ.
ಚಿಕ್ಕ ಮಗುವಂತಿರುವ ಅಬ್ದುಗೆ ತುಂಬಾ ಅಭಿಮಾನಿಗಳಿದ್ದಾರೆ. ಅವರು ಹೇಳುವಂತೆ ಅಬ್ದುವನ್ನು ಪದೇ ಪದೇ ಟಾರ್ಗೇಟ್ ಮಾಡಲಾಗುತ್ತಿದೆ. ಅವರಿಗೆ ತ“ಂದರೆ ಮಾಡಲಾಗುತ್ತಿದೆ. ಈ ಮುಂಚೆಯೂ ಅವರ ಮೇಲೆ ಇಲ್ಲದ ಆರೋಪ ಹ“ರಿಸಿ ಅರೆಸ್ಟ್ ಮಾಡಲಾಗಿತ್ತು. ಆದರೆ ಆ ಆರೋಪ ಸುಳ್ಳಾಗಿತ್ತು. ಈ ಆರೋಪ ಕೂಡ ಸುಳ್ಳಾಗಲಿ ಎಂದು ಅಬ್ದು ಫ್ಯಾನ್ಸ್ ಪ್ರಾರ್ಥಿಸಿದ್ದಾರೆ.