Beauty Tips: ನಾವು ಯಾರ ಬಳಿಯಾದರೂ ಮಾತನಾಡುವಾಗ, ಯಾವುದಾದರೂ ಕಾರ್ಯಕ್ರಮಕ್ಕೆ ಹೋಗುವಾಗ ನಮಗೆ ಕಾನ್ಫಿಡೆನ್ಸ್ ಬರಬೇಕು ಅಂದ್ರೆ, ನಮ್ಮ ಉಡುಪು ಚೆನ್ನಾಗಿರಬೇಕು. ಅದರ ಜತೆಗೆ ನಮ್ಮ ದೇಹ ಫ್ರೆಶ್ ಆಗಿರಬೇಕು. ಹಾಗಿರಬೇಕು ಅಂದ್ರೆ ನಮ್ಮ ದೇಹದಿಂದ ವಾಸನೆ ಬರಬಾರದು. ಕೆಲವರು ಯಾವುದೇ ಸೋಪ್, ಪರ್ಫ್ಯೂಮ್ ಹಾಕಿದ್ರೂ, ಕಂಕುಳಿನ ದುರ್ಗಂಧ ಮಾತ್ರ ಹೋಗೋದಿಲ್ಲ. ಅಂಥ ಸಮಯದಲ್ಲಿ ನಾವು ಏನು ಮಾಡಬೇಕು ಅಂತಾ ತಿಳಿಯೋಣ ಬನ್ನಿ..
ನಿಮ್ಮ ಕಂಕುಳಿನ ದುರ್ವಾಸನೆ ಹೋಗಬೇಕು ಅಂದ್ರೆ, ನೀವು ಸ್ನಾನ ಮಾಡುವ ನೀರಿಗೆ ಕಲ್ಲುಪ್ಪು ಮತ್ತು ರೋಸ್ ವಾಟರ್ ಹಾಕಿ ಸ್ನಾನ ಮಾಡಿ. ಇದರಿಂದ ಇಡೀ ದೇಹದ ದುರ್ಗಂಧ ಹೋಗುತ್ತದೆ. ಅಲ್ಲದೇ, ಹೆಚ್ಚು ಬಿಸಿಯೂ ಅಲ್ಲದ, ಹೆಚ್ಚು ತಣ್ಣಗೆಯೂ ಅಲ್ಲದ ನೀರಿನಿಂದ ಸ್ನಾನ ಮಾಡಿ.
ಇನ್ನು ಸ್ನಾನ ಮಾಡುವ ಮುನ್ನ ಕಂಕುಳಲ್ಲಿ ಆ್ಯಲೋವೆರಾ ಜೆಲ್‌ನಿಂದ ಮಸಾಜ್ ಮಾಡಿ. ನ್ಯಾಚುರಲ್ ಆ್ಯಲೋವೆರಾ ಜೆಲ್‌ನಿಂದ ಮಸಾಜ್ ಮಾಡಿದ್ರೆ, ವಾಸನೆ ದೂರವಾಗುತ್ತದೆ. ಆ್ಯಪಲ್ ಸೈಡರ್ ವಿನೇಗರ್ ಬಳಸಿದರೂ, ಕಂಕುಳ ದುರ್ಗಂಧ ಹೋಗುತ್ತದೆ.
ಆಹಾರದ ವಿಷಯಕ್ಕೆ ಬಂದರೆ, ನೀವು ಹಸಿ ಬೆಳ್ಳುಳ್ಳಿ, ಹಸಿ ಈರುಳ್ಳಿ ಹೆಚ್ಚು ತಿಂದರೆ ಬೆವರಿನ ವಾಸನೆ ಕೂಡ ಹಾಗೆಯೇ ಇರುತ್ತದೆ. ಹಾಗಾಗಿ ಎಲ್ಲಾದರೂ ಹೋಗುವಾಗ ಹಸಿ ಈರುಳ್ಳಿ, ಬೆಳ್ಳುಳ್ಳಿ ತಿನ್ನುವುದು ಬೇಡ. ಆದಷ್ಟು ಕಿತ್ತಳೆ, ನಿಂಬೆರಸ ಸೇರಿಸಿ, ಜ್ಯೂಸ್ ಶರ್ಬತ್ ಮಾಡಿ ಕುಡಿಯಿರಿ. ವಿಟಮಿನ್ ಸಿ ದೇಹ ಸೇರುವುದರಿಂದ ದೇಹದ ದುರ್ಗಂಧ ಕಡಿಮೆಯಾಗುತ್ತದೆ. ಹಾಗೇ ಹೆಚ್ಚೆಚ್ಚು ನೀರು ಕುಡಿಯಿರಿ.
ಹೆಚ್ಚು ಡಿಯೋ, ಪರ್ಫ್ಯೂಮ್ ಬಳಸಿದರೆ, ಅದು ನಿಮ್ಮ ಮಾನಸಿಕ ನೆಮ್ಮದಿ ಹಾಳು ಮಾಡುತ್ತದೆ. ಹಾರ್ಮೋನು ಏರುಪೇರಾಗುವಂತೆ ಮಾಡುತ್ತದೆ. ಹಾಗಾಗಿ ಆದಷ್ಟು ನ್ಯಾಚುರಲ್ ಆಗಿ, ಮನೆ ಮದ್ದಿನಿಂದಲೇ ನಿಮ್ಮೆಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡುಕ“ಳ್ಳಿ.