ಸೋಶಿಯಲ್ ಮೀಡಿಯಾದಲ್ಲಿ ಬರೋ ಜಾಹೀರಾತು ಅಥವಾ ಇನ್ಫ್ಲುಯೆನ್ಸರ್ಗಳ ಮಾತು ನಂಬಿ ಯಾವುದೇ ಕ್ರೀಮ್ ಅಥವಾ ಸೌಂದರ್ಯವರ್ಧಕಗಳನ್ನ ಬಳಸೋ ಮುನ್ನ ನೂರು ಬಾರಿ ಯೋಚಿಸಬೇಕು. ಯಾಕಂದ್ರೆ ‘ಇನ್ಸ್ಟಾಗ್ರಾಂ ಪ್ರಚಾರ ನೋಡಿ ಫೇರ್ನೆಸ್ ಕ್ರೀಮ್ ಹಚ್ಚಿಕೊಂಡ 17 ವರ್ಷದ ಬಾಲಕಿಯೊಬ್ಬಳಿಗೆ ಗಂಭೀರ ಕಿಡ್ನಿ ಕಾಯಿಲೆ ಬಂದಿರೋ ಘಟನೆ ಕೇರಳದ ಮಲಪ್ಪುರಂನಲ್ಲಿ ದೊಡ್ಡ ಆತಂಕ ಹುಟ್ಟಿಸಿದೆ. ಹೌದು ‘ಇತ್ತ ಮಂಗಳೂರಿನ ಬಾಲಕಿಯೊಬ್ಬಳು ಮೊಡವೆ, ಕಪ್ಪು ಕಲೆ ಹೋಗುತ್ತೆ ಅಂತ ಸುಮಾರು ಒಂದು ವರ್ಷ ಕ್ರೀಮ್ ಬಳಸಿದ್ದಕ್ಕೆ, ಆಕೆಯ ದೇಹದಲ್ಲಿ ಅಪಾಯಕಾರಿ ಪ್ರಮಾಣದ ಪಾದರಸ ಅಂದ್ರೆ ಮರ್ಕ್ಯುರಿ ಪತ್ತೆಯಾಗಿರೋದಾಗಿ ತಿಳಿದುಬಂದಿದೆ..
ಎಸ್ ‘ವರದಿಗಳ ಪ್ರಕಾರ ಬಾಲಕಿ ಬಳಸುತ್ತಿದ್ದ ಕ್ರೀಮ್ ಟೆಸ್ಟ್ ಮಾಡಿದಾಗ ಬರೋಬ್ಬರಿ 12,500 PPM ಪ್ರಮಾಣದ ಪಾದರಸ ಇರೋದು ಪತ್ತೆಯಾಗಿದೆ. ಸೌಂದರ್ಯವರ್ಧಕಗಳಲ್ಲಿ ಪಾದರಸದ ಮಿತಿ 1 PPMಗಿಂತ ಕಡಿಮೆ ಇರಬೇಕು. ಆದ್ರೆ ಇಲ್ಲಿ ಮಿತಿಗಿಂತ ಹಲವು ಪಟ್ಟು ಹೆಚ್ಚಿದೆ. ಈ ವಿಷಕಾರಿ ಲೋಹ ದೇಹ ಸೇರಿದ್ರೆ ಕಿಡ್ನಿಯ ಫಿಲ್ಟರಿಂಗ್ ಘಟಕಕ್ಕೆ ಹಾನಿಯಾಗಿ ‘ಮೆಂಬ್ರೇನಸ್ ನೆಫ್ರೋಪತಿ’ ಅನ್ನೋ ಗಂಭೀರ ಕಾಯಿಲೆ ಬರಬಹುದು. ಕಾಲುಗಳಲ್ಲಿ ಊತ, ಬಿಪಿ ಏರುಪೇರು, ಪ್ರಜ್ಞೆ ತಪ್ಪೋ ಲಕ್ಷಣಗಳು ಕಾಣಿಸಿಕೊಂಡು ಪ್ರಕರಣ ಗಂಭೀರವಾಗಿದೆ.
ಈ ಘಟನೆ ಬೆನ್ನಲ್ಲೇ ಕೇರಳ ಸರ್ಕಾರ ತನಿಖೆಗೆ ಆದೇಶ ನೀಡಿದ್ದು, ಮಕ್ಕಳ ಹಕ್ಕುಗಳ ಆಯೋಗವೂ ಸ್ವಯಂಪ್ರೇರಿತ ಕೇಸ್ ದಾಖಲಿಸಿಕೊಂಡಿದೆ. ಸೆಲೆಬ್ರಿಟಿ ಅಥವಾ ಇನ್ಫ್ಲುಯೆನ್ಸರ್ಗಳು ಹೇಳಿದ್ರು ಅಂತ ಯಾವುದನ್ನೂ ಸುರಕ್ಷಿತ ಅಂದುಕೊಳ್ಳಬೇಡಿ. ಕ್ರೀಮ್ ತಗೊಳ್ಳೋ ಮುನ್ನ ಲೇಬಲ್, ತಯಾರಕರ ವಿವರ, ಪದಾರ್ಥಗಳು, ಲೈಸೆನ್ಸ್ ಮತ್ತು ಎಕ್ಸ್ಪೈರಿ ಡೇಟ್ ಚೆಕ್ ಮಾಡೋದು ತುಂಬಾ ಮುಖ್ಯ ಅಂತ ಹೇಳಿದ್ದಾರೆ.
ಎಸ್ ‘ಬೇಗ ಬೆಳ್ಳಗಾಗೋದು ಅಥವಾ ಎಲ್ಲಾ ಸಮಸ್ಯೆ ಕ್ಷಣಾರ್ಧದಲ್ಲಿ ಮಾಯವಾಗುತ್ತೆ ಅನ್ನೋ ಸುಳ್ಳು ಭರವಸೆಗಳಿಗೆ ಮರುಳಾಗಬೇಡಿ. ಅಂದಕ್ಕಿಂತ ಆರೋಗ್ಯ ಮುಖ್ಯ ಅನ್ನೋದನ್ನ ಮರೆಯದಿದ್ರೆ ಇಂತಹ ಅಪಾಯಗಳಿಂದ ದೂರ ಇರಬಹುದು..ಹಾಗಾಗಿ ಯಾವುದೇ ವಸ್ತು ಬಳಸುವ ಮುನ್ನ ಎಚ್ಚರಿಕೆ ವಹಿಸಿ…




