Political News: ಬೆಂಗಳೂರಿನಲ್ಲಿಂದು ಮಾಧ್ಯಮದ ಜತೆ ಮಾತನಾಡಿರುವ ಸಚಿವ ಸತೀಶ್ ಜಾರಕಿಹ“ಳಿ, ರಂಭಾಪುರಿ ಶ್ರೀಗಳು ನೀಡಿದ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ರಂಭಾಪುರಿ ಶ್ರೀಗಳು ಸಿಎಂ ಬದಲಾವಣೆಯಾಗುವ ಬಗ್ಗೆ ಮತ್ತು ಗ್ಯಾರಂಟಿ ಯೋಜನೆ ಬಗ್ಗೆ ಹೇಳಿಕೆ ನೀಡಿದ್ದರು. ಅಲ್ಲದೇ ಡಿಕೆಶಿಯವರನ್ನು ಸಿಎಂ ಮಾಡಬೇಕು. ಅವರಿಗೂ ಅವಕಾಶ ನೀಡಬೇಕು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲು ಅವರ ಪರಿಶ್ರಮ ಹೆಚ್ಚಿದೆ ಎಂದು ಹೇಳಿದ್ದರು.
ಈ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವ ಸತೀಶ್ ಜಾರಕಿಹ“ಳಿ, ಸ್ವಾಮೀಜಿಗಳಿಗೂ ರಾಜಕೀಯಕ್ಕೂ ಸಂಬಂಧವೇ ಇಲ್ಲ. ಅವರ ಕಾರ್ಯವ್ಯಾಪ್ತಿ ಬೇರೆ, ನಮ್ಮ ಕಾರ್ಯವ್ಯಾಪ್ತಿ ಬೇರೆ. ನಾವೀಗ ಈ ಬಗ್ಗೆ ಹೇಳಿಕೆ ನೀಡಿದರೆ, ನಮ್ಮ ಮಧ್ಯೆ ಘರ್ಷಣೆಯಾಗುತ್ತದೆ. ಸ್ವಾಮೀಜಿಯಾದವರು ಆಶೀರ್ವಾದ ಮಾಡಬೇಕು, ಸಮಾಜ ನಿರ್ಮಿಸುವ ಕಾರ್ಯ ಮಾಡಬೇಕು. ಇಂಥ ಹೇಳಿಕೆಗಳನ್ನು ಶ್ರೀಗಳು ನೀಡಬಾರದು. ಅವರಿಗೆ ಈ ವಿಷಯವೇ ಸಂಬಂಧಿಸಿಲ್ಲ ಎಂದು ಜಾರಕಿಹ“ಳಿ ಹೇಳಿದ್ದಾರೆ.
ಇನ್ನು ರಾಜ್ಯದಲ್ಲಿ ಸಿಎಂ ಬದಲಾವಣೆ ಬಗ್ಗೆ ಮಾತನಾಡಿರುವ ಸಚಿವ ಸತೀಶ್, ಈ ಬಗ್ಗೆ ತೀರ್ಮಾನಿಸುವವರು ಹೈಕಮಾಂಡ್. ಅವರ ನಿರ್ಧಾರವೇ ಅಂತಿಮ. ಅವರೇ ಸಿದ್ದರಾಮಯ್ಯ ಮುಂದುವರಿಯಲಿ ಎಂದಾಗ ನಾವೇನು ಹೇಳುವುದು ಎಂದು ಮರುಪ್ರಶ್ನಿಸಿದ್ದಾರೆ.