Saturday, July 12, 2025

Latest Posts

Heart Attack ಬಗ್ಗೆ ಶಾಕಿಂಗ್ ಹೇಳಿಕೆ ನೀಡಿದ ವೈದ್ಯಕೀಯ ಸಚಿವ ಡಾ.ಶರಣ್ ಪ್ರಕಾಶ್

- Advertisement -

Political News: ರಾಜ್ಯದಲ್ಲಿ ಇತ್ತೀಚೆಗೆ ಹೃದಯಾಘಾತದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಈ ಬಗ್ಗೆ ಇಂದು ಕಲಬುರಗಿಯಲ್ಲಿ ಮಾತನಾಡಿರುವ ವೈದ್ಯಕೀಯ ಸಚಿವ ಡಾ.ಶರಣ್ ಪ್ರಕಾಶ್, ಹೃದಯಾಘಾತಕ್ಕೆ ಕಾರಣವೇನು ಎಂದು ಹೇಳಿದ್ದಾರೆ.

ಮೈಸೂರು, ಬೆಂಗಳೂರು, ಕಲಬುರಗಿ ಜಯದೇವ ಆಸ್ಪತ್ರೆಯಲ್ಲಿ ಜನರಿಗೆ ಸಾಕಷ್ಟು ಫೆಸಿಲಿಟಿಗಳಿದೆ. ಬಿಪಿಎಲ್ ಕಾರ್ಡ್ ಇರುವವರಿಗೆ ಫ್ರೀ ಚಿಕಿತ್ಸೆ ಇದೆ. ಯಾರೂ ಆತಂಕ ಪಡಬೇಕಿಲ್ಲ. ಆದರೆ ನನ್ನ ಸಲಹೆ ಏನಂದ್ರೆ, ನಿಮ್ಮ ಜೀವನ ಜೀವಿಸುವ ರೀತಿ ಸ್ವಲ್ಪ ಚೇಂಜ್ ಮಾಡಿಕ“ಳ್ಳಿ ಎಂದಿದ್ದಾರೆ.

ಅದರಲ್ಲೂ ಯುವಕರು ತಮ್ಮ ಜೀವನಶೈಲಿ ಬದಲಾಯಿಸಿಕ“ಳ್ಳುವ ಅವಶ್ಯಕತೆ ತುಂಬಾ ಇದೆ. ಅದರಲ್ಲೂ ಗುಟ್ಕಾ ತಿನ್ನುವುದು, ಸ್ಮೋಕ್ ಮಾಡುವುದು, ಆಲ್ಕೋಹಾಲ್ ಸೇವನೆ ಇವೆಲ್ಲವನ್ನೂ ಬಿಡಬೇಕಿದೆ. ಅಲ್ಲದೇ, ಕೋಲ್ಡ್ರಿಂಕ್ಸ್, ಬರ್ಗರ್, ಪಿಜ್ಜಾ, ಎಣ್ಣೆ ಬಳಸಿ ಮಾಡಿದ ಆಹಾರಗಳನ್ನು ಅವೈಡ್ ಮಾಡಿ, ಪ್ರತಿದಿನ ಮನೆಯೂಟ ಮಾಡಿ. ವ್ಯಾಯಾಮ ಮಾಡಿ, ಅದರ ಜತೆ ಮಾನಸಿಕ ನೆಮ್ಮದಿಗಾಗಿ ನಿಮ್ಮ ಧರ್ಮ ಪಾಲನೆ ಮಾಡಬೇಕು. ಅದು ಭಜನೆ, ಧ್ಯಾನ ಏನೇ ಆಗಿರಲಿ. ಇದೇ ನಮ್ಮ ಆರೋಗ್ಯವನ್ನು ಅಭಿವೃದ್ಧಿಗ“ಳಿಸುತ್ತೆ ಎಂದಿದ್ದಾರೆ.

ಅಲ್ಲದೇ ಹೃದಯಾಘಾತ ತಡೆಯಲು ನಾವು ಹಲವು ಕ್ರಮಗಳನ್ನು ಕೈಗ“ಂಡಿದ್ದೇವೆ. ನೀವೂ ಕೂಡ ನಿಮ್ಮ ಜೀವನ ಶೈಲಿಯಲ್ಲಿ ಬದಲಾವಣೆ ತನ್ನಿ ಎಂದು ವೈದ್ಯಕೀಯ ಸಚಿವ ಡಾ.ಶರಣ್ ಪ್ರಕಾಶ್ ಹೇಳಿದ್ದಾರೆ.

- Advertisement -

Latest Posts

Don't Miss