Saturday, July 12, 2025

Latest Posts

ಜನೌಷಧಿ ಕೇಂದ್ರಗಳನ್ನು ಮುಚ್ಚಲು ಮುಂದಾಗಿದ್ದ ಸರ್ಕಾರಕ್ಕೆ ಕೋರ್ಟ್ ಛೀಮಾರಿ ಹಾಕಿದೆ: ಆರ್.ಅಶೋಕ್

- Advertisement -

Political News: ಬೆಂಗಳೂರಿನಲ್ಲಿಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಮಾಧ್ಯಮದ ಜತೆ ಮಾತನಾಡಿದ್ದು, ಸಿದ್ದರಾಮಯ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ರಾಜ್ಯದಲ್ಲಿ ಹಲವು ಜನೌಷಧಿ ಕೇಂದ್ರವನ್ನು ಮುಚ್ಚಬೇಕೆಂದು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಆದರೆ ನ್ಯಾಯಾಲಯ ಅದಕ್ಕೆ ತಡೆಯ“ಡ್ಡಿ, ಕಡಿಮೆ ಬೆಲೆಗೆ ಮದ್ದು ಸಿಗುವಾಗ ನೀವೇಕೆ ತಡೆಯುತ್ತೀರಿ ಎಂದು ಛೀಮಾರಿ ಹಾಕಿದೆ ಎಂದು ಆರ್. ಅಶೋಕ್ ವ್ಯಂಗ್ಯವಾಡಿದ್ದಾರೆ.

ಖಾಸಗಿ ಮೆಡಿಕಲ್ ಶಾಪ್‌ಗಳಿಗೆ ಲಾಭ ತರಲು ಕೇಂದ್ರ ಸರ್ಕಾರದ ಮಹತ್ವದ ಯೋಜನೆಯಾಗಿರುವ ಜನೌಷಧಿ ಕೇಂದ್ರವನ್ನು ಮುಚ್ಚಲು ತಯಾರಾಗಿದ್ದ ಸರ್ಕಾರ ಎಂಥ ದುರುಳ ಸರ್ಕಾರ..? ಇಂಥ ಕೆಲಸಕ್ಕಾಗಿ ನ್ಯಾಯಾಲಯ ನೀವು ತಪ್ಪು ಮಾಡಿದ್ದೀರಿ ಎಂದು ರಾಜ್ಯ ಸರ್ಕಾರಕ್ಕೆ ಸ್ಪಷ್ಟ ಸಂದೇಶ ನೀಡಿದೆ ಎಂದು ಆರ್.ಅಶೋಕ್ ಹೇಳಿದ್ದಾರೆ.

ಇನ್ನು ರಂಭಾಪುರಿ ಶ್ರೀಗಳು ಗ್ಯಾರಂಟಿ ಯೋಜನೆ ಬಗ್ಗೆ , ಸಿಎಂ ಬದಲಾವಣೆ ಬಗ್ಗೆ ಮಾತನಾಡಿದ್ದು, ಈ ಹೇಳಿಕೆಗೆ ಅಶೋಕ್ ಪ್ರತಿಕ್ರಿಯಿಸಿದ್ದಾರೆ. ರಂಭಾಪುರಿ ಶ್ರೀಗಳು ತಮ್ಮ ಭಾವನೆಯನ್ನು ಹೇಳಿದ್ದಾರೆ. ಇದು ಪ್ರಜಾಪ್ರಭುತ್ವದ ದೇಶ ಪ್ರತಿಯ“ಬ್ಬರು ಅವರ ಭಾವನೆಗಳನ್ನು ಹೇಳುವ ಅವಕಾಶ ಇಲ್ಲಿದೆ. ಅದೇ ರೀತಿ ಸ್ವಾಮೀಜಿಗಳಿಗೂ ಅವಕಾಶವಿದೆ. ಅವರ ಭಕ್ತರು ಅವರ ಬಳಿ ಹೇಳಿದ್ದನ್ನೇ ಶ್ರೀಗಳು ಹೇಳಿರಬಹುದು ಎಂಬುದು ನನ್ನ ಭಾವನೆ.

ಇನ್ನು ಈ ಹೇಳಿಕೆಗೆ ರಾಜ್ಯ ಸರ್ಕಾರ ಕೂಡ ಸಮರ್ಥನೆ ನೀಡುವ ಪ್ರಯತ್ನ ಮಾಡುತ್ತಿದೆ. ನಾವು ಗ್ಯಾರಂಟಿ ಯೋಜನೆ ಜಾಾರಿಗೆ ತಂದಿದ್ದೇ ಸರಿ ಎಂದಾದರೆ, ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯವೇಕೆ ನಿಧಾನವಾಗಿದೆ..? ಗ್ಯಾರಂಟಿ ಪ್ರತೀ ತಿಂಗಳು ನೀಡುತ್ತೇವೆ ಎಂದಿದ್ದಿರಿ. ಪ್ರತೀ ತಿಂಗಳು ನೀಡುತ್ತಿದ್ದೀರಾ ಎಂದು ಅಶೋಕ್ ಪ್ರಶ್ನಿಸಿದ್ದಾರೆ.

ಸ್ವಾಮೀಜಿಗಳು ಜನಗಳ ಪರವಾಗಿ ಆ ಹೇಳಿಕೆ ನೀಡಿರಬಹುದು. ನಾವು ಜನರಿಗೆ ಮೀನು ನೀಡುವುದಲ್ಲ. ಮೀನು ಹಿಡಿಯುವುದನ್ನೂ ಕಲಿಸಬೇಕು ಎಂದು ಬುದ್ಧ ಹೇಳಿದ್ದಾರೆ. ಅದೇ ರೀತಿ ಜನರಿಗೆ ಫ್ರೀ ನೀಡುವ ಬದಲು, ಉದ್ಯೋಗಾವಕಾಶ ಕಲ್ಪಿಸಿಕ“ಡಿ ಎಂದು ಶ್ರೀಗಳು ಹೇಳಿರಬಹುದು. ಿಂಥ ತಪ್ಪುಗಳನ್ನು ಸರಿ ಮಾಡಿಕ“ಳ್ಳಿ ಎಂದು ಜನರ ಪರವಾಗಿ ಶ್ರೀಗಳು ಮಾತನಾಡಿದ್ದಾರೆಂದು ಅಶೋಕ್ ಶ್ರೀಗಳ ಹೇಳಿಕೆಯನ್ನು ಸಮರ್ಥಿಸಿಕ“ಂಡಿದ್ದಾರೆ.

- Advertisement -

Latest Posts

Don't Miss