Gadag News: ಗದಗ: ಗದಗ ಸಾಯಿ ಪೆಟ್ರೋಲ್ ಬಂಕ್ ನಲ್ಲಿ ಕಳ್ಳತನವಾಗಿದ್ದು, ಈ ಘಟನೆಯಿಂದ ಜನ ಬೆಚ್ಚಿಬಿದ್ದಿದ್ದಾರೆ. ಗದಗನ ಬೆಡಗೇರಿಯ ಶರಣಬಸವೇಶ್ವರ ನಗರದಲ್ಲಿ ಈ ಬಂಕ್ ಇದ್ದು, ಇಲ್ಲಿ ಕೆಲಸ ಮಾಡುವ ಸಿಬ್ಬಂದಿ ಕಣ್ಣಿಗೆ ಖಾರದ ಪುಡಿ ಎರಚಿ ರಾಬರಿ ಮಾಡಲಾಗಿದೆ.
ರಾತ್ರಿ ವೇಳೆ ಮಲಗಿದ್ದಾಗ, ಬಂಕ್‌ನ ಗಾಜಿನ ಬಾಗಿಲು ಒಡೆದು ಕಳ್ಳರು ನುಸುಳಿದ್ದಾರೆ. ಸಿಬ್ಬಂದಿಗಳಿಗೆ ಚಾಕು ತೋರಿಸಿ, ಹಣ ನೀಡಿ ಎಂದು ಬೆದರಿಸಿದ್ದಾರೆ. ಚಾಕು ನೋಡಿ ಹೆದರಿದ ಫಕಿರೇಶ್ ಎಂಬ ವ್ಯಕ್ತಿ ಹೆದರಿ ಹಣದ ಬ್ಯಾಗನ್ನು ಕಳ್ಳರಿಗೆ ನೀಡಿದ್ದಾನೆ.
ಮುಂಜಾನೆ ಬಂಕ್ ಮಾಲೀಕರು ಬಂದಾಗ ವಿಷಯ ಬೆಳಕಿಗೆ ಬಂದಿದೆ. ಮೂರು ಜನ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದು, ಹಣ ನೀಡದಿದ್ದರೆ, ಆಯುಧದಿಂದ ಚುಚ್ಚುತ್ತೇನೆ ಎಂದು ಹೆದರಿಸಿದ, ಅದಕ್ಕೆ ಹಣ ನೀಡಿದೆವು ಎಂದು ಸಿಬ್ಬಂದಿಗಳು ಹೇಳಿದ್ದಾರೆ. ಬೆಟಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಬೆಟಗೇರಿ ಪೋಲೀಸರು ಸ್ಥಳಕ್ಕಾಗಮಿಸಿ, ಪರಿಶೀಲನೆ ನಡೆಸಿದ್ದಾರೆ.