Belagavi: ಬೆಳಗಾವಿ: ಬೆಳಗಾವಿಯ ಸವದತ್ತಿ ಎಲ್ಲಮ್ಮನ ಭಕ್ತನ ಮೇಲೆ ಪೋಲೀಸರು ಮತ್ತು ದೇವಸ್ಥಾನದ ಹೋಮ್‌ಗಾರ್ಡ್ ಹಲ್ಲೆ ಮಾಡಿದ್ದು, ಹಲ್ಲೆಗ“ಳಗಾದ ಶ್ರೀರಾಮ ಸೇನೆ ಧಾರವಾಡ ಜಿಲ್ಲಾಧ್ಯಕ್ಷ ಅಣ್ಣಪ್ಪ ದಿವಟಗಿ ಎಂಬುವವರಿಗೆ ಗಂಭೀರ ಗಾಯವಾಗಿದೆ.
ಅಣ್ಣಪ್ಪ ಮತ್ತು ಅವರ ಪತ್ನಿ ಮತ್ತು ಮಗು ಮೂವರು ದೇವಿ ದರ್ಶನ ಮುಗಿಸಿ ಬರು್ತಿದ್ದಾಗ, ಮಗು ಅಳುತ್ತಿತ್ತು. ಹೀಗಾಗಿ ಮಗುವಿಗೆ ಹಸಿದಿರಬೇಕು, ಏನಾದರೂ ತಿನ್ನಲು ಕ“ಡೋಣವೆಂದು ಅಣ್ಣಪ್ಪ ಅವರ ಪತ್ನಿ ಬ್ಯಾಗ್‌ನಲ್ಲಿ ತಿನಿಸು ತೆಗೆಯಲು ಮುಂದಾಗಿದ್ದರು. ಮಾರ್ಗ ಮಧ್ಯ ನಿಂತಿದ್ದ ಕಾರಣಕ್ಕೆ, ಇಲ್ಲಿ ನಿಲ್ಲಬೇಡಿ, ಜಾಗ ಬಿಟ್ಟು ನಿಲ್ಲಿ ಅಥವಾ ಆಚೆ ಹೋಗಿ ಎಂದು ಹೋಮ್‌ಗಾರ್ಡ್ ಗದರಿದ್ದಾರೆ.
ಹೀಗಾಗಿ ತಾಯಿ ಮಗು ಇಬ್ಬರೂ ಆಚೆ ಬಂದು, ಅಲ್ಲೇ ಇದ್ದ ಅಂಗಡಿಯಲ್ಲಿ ಕುಳಿತಿದ್ದಾರೆ. ಆದರೆ ಅಲ್ಲಿ.ೂ ಬಂದು ಇಲ್ಲೂ ಕೂರಬೇಡಿ ಎಂದು ಕಿರುಕುಳ ನೀಡಿದ್ದಾರೆಂದು ಆರೋಪಿಸಲಾಗಿದೆ. ಸವದತ್ತಿ ಠಾಣೆ ಸಿಬ್ಬಂದಿ ನಾಗನಗೌಡ ಹಾಗುಹ ದೇವಸ್ಥಾನ ಹೋಮ ಗಾರ್ಡ್ ಕರೆಪ್ಪ ಎಂಬುವವರು ಎದ್ದು ಹೋಗಿ ಎಂದು ಆವಾಜ್ ಹಾಕಿದ್ದಾರೆನ್ನಲಾಗಿದೆ.
ಕೂಡಲೇ ಅಣ್ಣಪ್ಪ ಅವರ ಪತ್ನಿ ಅವರಿಗೆ ವಿಷಯ ತಿಳಿಸಿದ್ದು, ಈ ಬಗ್ಗೆ ಅಣ್ಣಪ್ಪ ಪೋಲೀಸರಿಗೆ ಪ್ರಶ್ನಿಸಿದ್ದು, ತಕ್ಷಣ ಲಾಠಿಯಿಂದ ಹಲ್ಲೆ ಮಾಡಿದ್ದಾರೆಂದು ಆರೋಪಿಸಲಾಗಿದೆ. ಹಲ್ಲೆಯಿಂದಾಗಿ ಅಣ್ಣಪ್ಪ ತಲೆಗೆ ಏಟು ಬಿದ್ದು, ರಕ್ತ ಸೋರಿ, ಗಂಭೀರ ಗಾಯವಾಗಿದೆ. ಆದರೂ ಕೂಡ ಆತನನ್ನು ಆಸ್ಪತ್ರೆಗೆ ಸೇರಿಸದೇ, ಹೋಮ್‌ಗಾರ್ಡ್ ಮತ್ತು ಪೋಲೀಸರು ವಾಗ್ವಾದ ನಡೆಸಿದ್ದಾರೆ. ಆದರೆ ಅಲ್ಲೇ ಇದ್ದ ಸ್ಥಳೀಯರು ಆಸ್ಪತ್ರೆಗೆ ರವಾನಿಸಿದ್ದಾರೆಂದು ಪತ್ನಿ ತಿಳಿಸಿದ್ದಾರೆ. ಇನ್ನು ಪೊಲೀಸ್ ಸಿಬ್ಬಂದಿ ಹಾಗೂ ದೇವಸ್ಥಾನ ಹೋಮ್ ಗಾರ್ಡ ವರ್ತನೆಗೆ ಭಕ್ತರು ಗರಂ ಆಗಿದ್ದು, ಈ ಕುರಿತು ಸವದತ್ತಿ ಪೊಲೀಸ್ ಠಾಣೆಯಲ್ಲಿ ಅಣ್ಣಪ್ಪ ದೂರು ನೀಡಿದ್ದಾರೆ.