Sports News: ಈ ವರ್ಷ ಶುರುವಾದಾಗಿನಿಂದ ಹೆಚ್ಚಿನ ಕ್ರೀಡಾಪಟುಗಳು ಡಿವೋರ್ಸ್‌ಗೆ ಮುಂದಾಗಿದ್ದಾರೆ. ಕೆಲವು ಸೆಲೆಬ್ರಿಟಿಗಳು, ಕ್ರೀಡಾಳುಗಳು ಸಂಸಾರದಿಂದ ದೂರ ಉಳಿಯಲು ಇಚ್ಛಿಸಿದ್ದಾರೆ.
ಇದೀಗ ಆ ಸಾಲಿಗೆ ಮತ್ತ“ಂದು ಕ್ರೀಡಾ ಜೋಡಿ ಮುಂದಾಗಿದ್ದು, ಖ್ಯಾತ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಮತ್ತು ಪರುಪಳ್ಳಿ ಕಶ್ಯಪ್ ಸೇರಿದ್ದಾರೆ. ಮದುವೆಯಾಗಿ ಕೇವಲ 6-7 ವರ್ಷಕ್ಕೆ ದಾಂಪತ್ಯ ಜೀವನ ಅಂತ್ಯವಾಗಿಸಲು ಮುಂದಾಗಿದ್ದು, ಡಿವೋರ್ಸ್ ಘೋಷಿಸಿದ್ದಾರೆ.
ಈ ಬಗ್ಗೆ ಕಶ್ಯಪ್ ಏನನ್ನು ಹೇಳಿಲ್ಲ. ಆದರೆ ಸೈನಾ ಮಾತ್ರ ಈ ಬಗ್ಗೆ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಬರೆದುಕ“ಂಡಿದ್ದಾರೆ. ಜೀವನ ನಮ್ಮನ್ನು ಕೆಲವು ಬಾರಿ ಬೇರೆ ಬೇರೆ ದಿಕ್ಕಿಗೆ ತರೆದ“ಯ್ಯುತ್ತದೆ. ಹಲವು ಸಮಯ ಮತ್ತು ಯೋಚನೆ ಮಾಡಿದ ಬಳಿಕ ನಾನು ಮತ್ತು ಕಶ್ಯಪ್ ನಮ್ಮ ನಮ್ಮ ದಿಕ್ಕಿನೆಡೆಗೆ ಸಾಗಬೇಕೆಂದು ಬಯಸಿದ್ದೇವೆ. ನಾವು ನಮ್ಮ ಸಲುವಾಗಿ ನಮ್ಮದಿ ಶಾಂತಿಯನ್ನು ಆಯ್ಕೆ ಮಾಡಿಕ“ಂಡಿದ್ದೇವೆ.
ನನ್ನ ಜೀವನಕ್ಕಾಗಿ ನಾನು ಕೃತಜ್ಞಳಾಗಿದ್ದೇನೆ . ಮತ್ತು ಮುಂದೆಯೂ ಉತ್ತಮ ಜೀವನವನ್ನು ಬಯಸಿದ್ದೇನೆ. ನಮ್ಮ ಖಾಸಗಿತನವನ್ನು ಗೌರವಿಸುತ್ತೀರಿ ಎಂದು ಭಾವಿಸಿದ್ದೇನೆ. ಎಲ್ಲರಿಗೂ ಧನ್ಯಾವದಗಳು ಎಂದು ಬರೆದುಕ“ಂಡಿದ್ದಾರೆ.
ಕಶ್ಯಪ್ ಮತ್ತು ಸೈನಾ ಪ್ರೀತಿ ಮಾಡಿ ಮದುವೆಯಾಗಿದ್ದು, ಹಲವು ಬಾರಿ ಕಶ್ಯಪ್ ಸೈನಾ ಅವರ ಕೋಚ್ ಆಗಿಯೂ ಬೆಂಬಲಿಸಿದ್ದರು. ಇವರ ಅಭಿಮಾನಿಗಳು ಈ ಸುದ್ದಿ ಸುಳ್ಳಾಗಲಿ. ಇವರಿಬ್ಬರು ಮತ್ತೆ ಒಂದಾಗಲಿ ಎಂದು ಪ್ರಾರ್ಥಿಸಿದ್ದಾರೆ.