Tuesday, July 15, 2025

Latest Posts

Hubli News: ಕಳೆದ 11 ವರ್ಷದಿಂದ ದೇಶವನ್ನ ಬಿಜೆಪಿ ಕೊಳ್ಳೆ ಹೊಡೆದಿದೆ: ಸಚಿವ ಸಂತೋಷ್ ಲಾಡ್

- Advertisement -

Hubli News: ಹುಬ್ಬಳ್ಳಿಯಲ್ಲಿಂದು ಮಾಧ್ಯಮದ ಜತೆ ಮಾತನಾಡಿರುವ ಸಚಿವ ಸಂತೋಷ್ ಲಾಡ್, ಬಿಜೆಪಿ ನಾಯಕರಿಗೆ ಪ್ರಶ್ನಿಸಿದ್ದಾರೆ. ರಾಜ್ಯ ಸರ್ಕಾರದಲ್ಲಿ ಸಿಎಂ ಖುರ್ಚಿಗಾಗಿ ದೊಂಬರಾಟ ನಡೆಯುತ್ತಿದೆ ಎಂಬ ಹೇಳಿಕೆಗೆ ಗರಂ ಆಗಿ ಉತ್ತರಿಸಿರುವ ಲಾಡ್, ನಾವೇನಾದ್ರೂ ಮಾಡ್ಕೋತೀವಿ, ಇವರಿಗೇನು? ಎಂದು ಪ್ರಶ್ನಿಸಿದ್ದಾರೆ.

ಶಶಿ ತರೂರ್ ಗೆ ಕಳ್ಸಿದ್ದು ಯಾವ ಆಟ.? ಪ್ರಧಾನ ಮಂತ್ರಿ 90 ದೇಶಕ್ಕೆ ಹೋದಾಗ ಅವರೊಂದಿಗೆ ಯಾವ ಸಚಿವರು ಹೋಗೋದಿಲ್ಲ. ದೊಂಬರಾಟ ಏನು ಮಾಡಿದ್ದೇವೆ ನಾವು? ಆಡಳಿತದಲ್ಲಿ ಏನು ತಪ್ಪಾಗಿದೆ?
ನಮ್ಮ ಕರ್ನಾಟಕ ಜಿಡಿಪಿಯಲ್ಲಿ ದೇಶದಲ್ಲೇ ನಂಬರ್ 1. ಬಿಜೆಪಿ ಆಡಳಿತದ ಯಾವ ರಾಜ್ಯ ನಂಬರ್ 1 ಇದೆ?

2 ಕೋಟಿ ಮಕ್ಕಳು 5 ರಿಂದ 8 ನೇ ತರಗತಿ ಹೊರಗಡೆ ಇದ್ದಾರೆ.ಮಹಾರಾಷ್ಟ್ರದಲ್ಲಿ 843 ಹೆಣ್ಣುಮಕ್ಕಳು ಗರ್ಭಕೋಶ ನಾಶ ಮಾಡಿಕೊಂಡಿದ್ದಾರೆ. ರಾಜಕಾರಣಿಗಳಿಗೆ, ಗಂಡು ಮಕ್ಕಳಿಗೆ ನಾಚಿಕೆ ಆಗಬೇಕು. ದೇಶದ ಬಿಜೆಪಿ, ಕಾಂಗ್ರೆಸ್ ಗಂಡು ಮಕ್ಕಳಿಗೆ ನಾಚಿಕೆ ಆಗಬೇಕು. ಯಾರು ಇಲ್ಲಿ ಶಾಶ್ವತವಾಗಿ ಉಳಿಯೋದಿಲ್ಲ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಇನ್ನು 50 ವರ್ಷ ಇರೋದಿಲ್ಲ ಈ ಪ್ರಪಂಚದಲ್ಲಿ. ತಮ್ಮ ಕರ್ಮಕಾಂಡ ಜನರಿಗೆ ಗೊತ್ತಾಗಬಾರದು ಅನ್ನೋ ಉದ್ದೇಶ ಅವರದು. ಕಳೆದ 11 ವರ್ಷದಿಂದ ದೇಶವನ್ನ ಬಿಜೆಪಿ ಕೊಳ್ಳೆ ಹೊಡೆದಿದೆ ಎಂದು ಲಾಡ್ ಆರೋಪಿಸಿದ್ದಾರೆ.

ಸರ್ಕಾರ ಕುಗ್ಗಿಸುವ ಕೆಲಸ ನಡಿತಾ ಇದೆ ಅನ್ನೋ ವಿಚಾರದ ಬಗ್ಗೆ ಪ್ರತಿಕ್ರಿಯಿಸಿರುವ ಲಾಡ್,  ಮುನರಾಬಾದ ಪೋರ್ಟ್ ನಲ್ಲಿ ಸಿಕ್ಕ ಡ್ರಗ್ ಹಣ ಭಯೋತ್ಪಾದಕ ಚಟುವಟಿಕೆಗೆ ಬಳಕೆ ಆಗಿದೆ. ಇದು ಇಂಪಾರ್ಟೆಂಟ್ ಪ್ರಶ್ನೆ ಅಲ್ವಾ? 1 ಲಕ್ಷದ 14 ಸಾವಿರ ಕೋಟಿ 500 ನೋಟು ನಕಲಿ ಇವೆ ಅಂತ ಆರ್ ಬಿ ಐ ರಿಪೋರ್ಟ್ ಹೇಳ್ತಿದೆ. ಹೊಸ ನೋಟು 26 ಸಾವಿರ ಕೋಟಿ 2000 ನೋಟಿದೆ. ಮೋದಿ ಸಾಹೇಬ್ರೆ 2000 ನೋಟು ಎಲ್ಲಿ ಹೋಯ್ತು? ಮಹಾತ್ಮಾ ಗಾಂಧೀ ಹಿಡಿದು ಯಾರಿಗೆ ಬೇಕಾದ್ರೂ ಬಿಜೆಪಿ ಅವರು ಬೈಯಬಹುದು. ಇವರಿಗೆ ಮಾತ್ರ ಪ್ರಶ್ನೆ ಕೇಳಬಾರದು ಅಂದ್ರೆ ಹೇಗೆ..? ಎಂದು ಸಂತೋಷ್ ಲಾಡ್ ಪ್ರಶ್ನಿಸಿದ್ದಾರೆ.

- Advertisement -

Latest Posts

Don't Miss