Monday, July 21, 2025

Latest Posts

ಟ್ರಾನ್ಸ್ಲೇಟ್ ತಂದ ಫಜೀತಿ! : ಮೆಟಾ ವಿರುದ್ಧ ಸಿದ್ದರಾಮಯ್ಯ ಆಕ್ರೋಶ! ; ಭಾಷಾಂತರಕ್ಕೆ ಕಕ್ಕಾಬಿಕ್ಕಿಯಾದ ನೆಟ್ಟಿಗರು

- Advertisement -

ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಆನ್ಲೈನ್​ನಲ್ಲಿ ಟ್ರಾನ್ಸ್ಲೇಷನ್ ಮಾಡುವ ವೇಳೆ ಅನೇಕ ರೀತಿಯ ಯಡವಟ್ಟುಗಳು ನಡೆಯುತ್ತಿರುತ್ತವೆ. ನಮಗೆ ಬೇಕಾದ ಭಾಷೆಗೆ ಅದರಲ್ಲೂ ಕನ್ನಡದಿಂದ ಇಂಗ್ಲಿಷ್ ಭಾಷೆಗೆ ತರ್ಜುಮೆ ಮಾಡುವ ಸನ್ನಿವೇಶಗಳು ಸೃಷ್ಟಿಯಾಗುತ್ತವೆ. ಅಂತಹ ಸಂದರ್ಭದಲ್ಲಿ ನಾವು ಗೂಗಲ್ ಟ್ರಾನ್ಸ್ಲೇಟರ್​ನ ಮೊರೆ ಹೋಗುತ್ತೇವೆ. ಅದರಲ್ಲಿ ನಮಗೆ ಬೇಕಾದ ಮಾಹಿತಿಯನ್ನು ಹಾಕಿ ಭಾಷಾಂತರದ ರೂಪ ಪಡೆಯುತ್ತೇವೆ.

ದರೆ ಇದೇ ಗೂಗಲ್ ಟ್ರಾನ್ಲೇಟ್​​ನಿಂದ ಆದ ಯಡವಟ್ಟಿಗೆ ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಮೆಟಾ ಸಂಸ್ಥೆಯ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಅಲ್ಲದೆ ತಮಗಾದ ಮುಜಗರದಿಂದ ಕೆಂಡಾಮಂಡಲರಾಗಿ ಮೆಟಾ ಸಂಸ್ಥೆಗೆ ಭಾಷಾಂತರದ ತಪ್ಪಿನ ಬಗ್ಗೆ ಒತ್ತಿ ಹೇಳಿದ್ದಾರೆ. ಇನ್ನೂ ಅಭಿನಯ ಶಾರದೆ ಹಾಗೂ ಹಿರಿಯ ನಟಿ ಬಿ.ಸರೋಜಾದೇವಿ ನಿಧನದ ಹಿನ್ನೆಲೆ ಸಿದ್ದರಾಮಯ್ಯ ನಟಿಯ ಅಂತಿಮ ದರ್ಶನ ಪಡೆದಿದ್ದಾರೆ.

ಬಳಿಕ ಅದಕ್ಕೆ ಸಂಬಂಧಿಆಸಿದ ಪೋಸ್ಟ್​​ವೊಂದನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಆದರೆ ಅದನ್ನು ಟ್ರಾನ್ಸ್ಲೇಟ್ ಮಾಡಿದಾಗ ‘Chief minister siddaramaiah passed away yesterday multilingual star, senior actress B.Sarojadevi Took darshan of Sarojadevi’s earthly body and paid his last respects ಎಂದು ಪೋಸ್ಟ್​ನಲ್ಲಿ ಟ್ರಾನ್ಸ್ಲೇಟ್ ಆಗಿರುವುದು ಎಲ್ಲರನ್ನೂ ದಂಗು ಬಡಿಸಿದೆ.

ಆಕ್ಷೇಪಾರ್ಹವಾದ ಪದಗಳಿಂದ ಕೂಡಿದ ಭಾಷಾಂತರ ಕಂಡು ಬಳಕೆದಾರರೂ ಸಹ ಕಕ್ಕಾಬಿಕ್ಕಿಯಾಗಿದ್ದಾರೆ. ಅಲ್ಲದೆ ಮೆಟಾ ಸಂಸ್ಥೆಯ ಟೆಕ್ನಾಲಜಿ ಯಡವಟ್ಟಿಗೆ ನೆಟ್ಟಿಗರು ತರಹೇವಾರಿ ಕಮೆಂಟ್ ಮೂಲಕ ಸಂಸ್ಥೆಯ ಕಾಲೆಳೆದಿದ್ದಾರೆ.

ಇನ್ನೂ ಇದನ್ನು ಗಂಭೀರವಾಗಿ ಪರಿಗಣಿಸಿರುವ ಸಿಎಂ ಸಿದ್ದರಾಮಯ್ಯ ಮೆಟಾ ಸಂಸ್ಥೆಗೆ ಪತ್ರ ಬರೆದು ಭಾಷಾಂತರದ ಯಡವಟ್ಟುಗಳನ್ನು ಸರಿಪಡಿಸುವಂತೆ ಸೂಚಿಸಿದ್ದಾರೆ. ಸಾಮಾಜಿಕ ಜಾಲತಾಣದ ವೇದಿಕೆಗಳು ಜವಾಬ್ದಾರಿಯುತವಾಗಿ ವರ್ತಿಸಬೇಕಾಗುತ್ತದೆ. ನಾಗರಿಕರು ಈ ರೀತಿಯ ಭಾಷಾಂತರ ಲೋಪಗಳ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ಪತ್ರದಲ್ಲಿ ತಿಳಿಸಿದ್ದಾರೆ. ಮೆಟಾ ವೇದಿಕೆಯು ಬಳಕೆದಾರರಿಗೆ ತಪ್ಪು ಮಾಹಿತಿಯನ್ನು ನೀಡುತ್ತಿದೆ. ಆದರೆ ಇದು ಕಚೇರಿ ವ್ಯವಹಾರಗಳಲ್ಲಿ ಅತ್ಯಂತ ಅಪಾಯಕಾರಿಯಾಗಿರುತ್ತದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.ಅಲ್ಲದೆ ಈ ರೀತಿಯ ಬೇಜವಾಬ್ದಾರಿ ಸಾರ್ವಜನಿಕ ತಿಳುವಳಿಕೆ ಹಾಗೂ ನಂಬಿಕೆಗೆ ಧಕ್ಕೆ ತರುತ್ತವೆ ಎಂದು ಮೆಟಾ ಸಂಸ್ಥೆಗೆ ಸಿದ್ದರಾಮಯ್ಯ ವಾರ್ನಿಂಗ್ ನೀಡಿದ್ದಾರೆ.

- Advertisement -

Latest Posts

Don't Miss