Mandya News: ಮಂಡ್ಯ: ಅಂಗನವಾಡಿ ಎಂದರೆ ಚಿಕ್ಕ ಚಿಕ್ಕ ಮಕ್ಕಳು ಓದಿ,ಬರೆದು, ಆಟವಾಡುತ್ತ, ಪೋಷ್ಟಿಕಾಂಶಗಳನ್ನು ಪಡೆಯುತ್ತ ಬೆಳೆಯುವ ವಿದ್ಯಾ ಕೇಂದ್ರ. ಆದರೆ ಇತ್ತೀಚಿನ ದಿನಗಳಲ್ಲಿ ಅಂಗನವಾಡಿ ಅನ್ನೋದು ಮನಸ್ಸಿಗೆ ಬಂದಂತೆ, ತಮಗೆ ಹೇಗೆ ಬೇಕೋ ಹಾಗೆ ಪರಿವರ್ತಿಸಿಕ“ಳ್ಳಬಹುದಾದ ಜಾಗವಾಗಿದೆ.
ಮಂಡ್ಯದ ಕೆ.ಆರ್.ಪೇಟೆ ಪಟ್ಟಣದ ಹೇಮಾವತಿ ಬಡಾವಣೆ ಅಂಗನವಾಡಿಯಲ್ಲಿ ಓರ್ವ ಕುಡುಕ, ಚೆನ್ನಾಗಿ ಕುಡಿದು ಅಂಗನವಾಡಿಗೆ ಬಂದು ಮಲಗಿದ್ದಾನೆ. ಗುಲ್ಬರ್ಗ ಮೂಲದ ನಿಂಗಪ್ಪ (30) ಕುಡಿದು ಅಂಗನವಾಡಿಯಲ್ಲಿ ಮಲಗಿದ ವ್ಯಕ್ತಿಯಾಗಿದ್ದು, ಈತನನ್ನು ಕಂಡು ಚಿಕ್ಕ ಮಕ್ಕಳ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಚಿತ್ರ ಅಂದ್ರೆ ಆ ವ್ಯಕ್ತಿ ಹಾಗೆ ಕುಡಿದು ಬಂಂದು ಮಲಗಿದರೂ, ಅಲ್ಲಿನ ಸಹಾಯಕಿ ಮಾತ್ರ ಏನೂ ಆಗೇ ಇಲ್ಲದಂತೆ ಸುಮ್ಮನಿದ್ದಳು. ಹಾಗಾಗಿ ಪೋಷಕರು ಕೂಡ ಆಕೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಆತ ಕುಡಿದು ಮಕ್ಕಳು ಮತ್ತು ಪೋಷಕರ ವಿರುದ್ಧ ಅಸಭ್ಯ ವರ್ತನೆ ತೋರಿದ್ದಾನೆ. ಹಲ್ಲೆಗೆ ಕೂಡ ಮುಂದಾಗಿದ್ದಾನೆ. ಆತನ ವರ್ತನೆಯಿಂದ ಆತಂಕಗೊಂಡ ಪೋಷಕರು ಕೆ.ಆರ್.ಪೇಟೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

