Mandya News: ಆರ್‌ಎಸ್‌ಎಸ್ ಬ್ಯಾನ್ ಆಗಬೇಕು ಎಂದು ಸಚಿವ ಪ್ರಿಯಾಂಕ್ ಖರ್ಗೆ ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದು, ಈ ಬಗ್ಗೆ ಹಲವು ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಲ್ಲದೇ ಮಂಡ್ಯದಲ್ಲೂ ಈ ಬಗ್ಗೆ ಆರ್ಎಸ್‌ಎಸ್‌ನವರು, ಬಿಜೆಪಿಗರು ಸಿಡಿದೆದ್ದು, ಐ ಲವ್ RSS ಪೋಸ್ಟರ್ ಅಭಿಯಾನ ಶುರು ಮಾಡಿದ್ದಾರೆ. ಮಂಡ್ಯದ ಅಂಚೆ ಕಚೇರಿ ಬಳಿ ಐ ಲವ್ ಆರ್ ಎಸ್ ಎಸ್ ಅಭಿಯಾನ ನಡೆಸಿದ್ದು, ಸಚಿವ ಪ್ರಿಯಾಂಕ್ ಖರ್ಗೆ ವಿರುದ್ದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ಮುಖಂಡ ಸಿಟಿ ಮಂಜುನಾಥ್ ನೇತೃತ್ವದಲ್ಲಿ ಈ ಕ್ಯಾಂಪೇನ್ ಶುರುವಾಗಿದ್ದು, ಯಾರು ಭಾರತವನ್ನು ಪ್ರೀತಿಸುತ್ತಾರೋ ಅವರು RSS ಅನ್ನು ಪ್ರೀತಿಸುತ್ತಾರೆ ಎಂದು ಪ್ಲೇ ಕಾರ್ಡ್ ಹಿಡಿದು ಅಭಿಯಾನ ನಡೆಸಿ, ಮಂಡ್ಯದ ವಿವಿ ರೋಡ್ ನಲ್ಲಿ ಸ್ಕೂಟರ್, ಕಾರ್, ಆಟೋಗಳಿಗೆ ಸ್ಟಿಕ್ಕರ್ ಅಂಟಿಸಿದ್ದಾರೆ.
ಅಲ್ಲದೇ, ಬಿಜೆಪಿ ಕಾರ್ಯಕರ್ತರು ಐ ಲವ್ ಆರ್ ಎಸ್ ಎಸ್ ಎಂದು ಘೋಷಣೆ ಕೂಗಿದ್ದಾರೆ. ಧಮ್, ತಾಕತ್ ಇದ್ದರೆ RSS ಬ್ಯಾನ್ ಮಾಡಿ ಎಂದು ಕಾಂಗ್ರೆಸ್ ಗೆ ಸವಾಲ್ ಹಾಕಿದ್ದಾರೆ.

