Friday, July 18, 2025

Latest Posts

RCB ಮೇಲೆ ಕ್ರಿಮಿನಲ್ ಕೇಸ್ ಕಾಲ್ತುಳಿತಕ್ಕೆ ಕೊಹ್ಲಿ ಕಾರಣ? : ರಾಜ್ಯ ಸರ್ಕಾರದ ಗೌಪ್ಯ ಮಾಹಿತಿ ಬಹಿರಂಗ

- Advertisement -

ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಆವರಣದಲ್ಲಿ ನಡೆದ ಕಾಲ್ತುಳಿತ ಪ್ರಕರಣ ದೇಶದೆಲ್ಲೆಡೆ ಭಾರೀ ಚರ್ಚೆಯಾಗಿತ್ತು. ಯಾರು ಕಾರಣ ಎಂಬುದರ ಬಗ್ಗೆ ತನಿಖೆಗಳು ಸಹ ನಡೆಯುತ್ತಿದೆ. ಇದೀಗ 11 ಜನರ ಸಾವಿಗೆ ಕಾರಣವಾದ ಅಂಶ ಬೆಳಕಿಗೆ ಬಂದಿದೆ. ದುರಂತಕ್ಕೆ RCB ಮತ್ತು ತಂಡದ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಕಾರಣ ಎಂದು ರಾಜ್ಯ ಸರ್ಕಾರದ ವರದಿ ಹೇಳುತ್ತಿದೆ.

ಬೆಂಗಳೂರು ಕಾಲ್ತುಳಿತಕ್ಕೆ ಕರ್ನಾಟಕ ಸರ್ಕಾರ ಆರ್‌ಸಿಬಿಯನ್ನೇ ದೂಷಿಸಿದೆ. ಇದೇ ವರದಿಯಲ್ಲಿ ವಿರಾಟ್ ಕೊಹ್ಲಿ ಹೆಸರನ್ನೂ ಉಲ್ಲೇಖಿಸಲಾಗಿದೆ. ಕ್ರೀಡಾಂಗಣದಲ್ಲಿ ವಿಜಯೋತ್ಸವದಲ್ಲಿ ಪಾಲ್ಗೊಳ್ಳುವಂತೆ ಅಭಿಮಾನಿಗಳನ್ವು ಆಹ್ವಾನಿಸಲಾಗಿತ್ತು. ಆದರೆ ಇದಕ್ಕೆ ತಂಡದ ಆಡಳಿತ ಮಂಡಳಿ ರಾಜ್ಯ ಸರ್ಕಾರವನ್ನಾಗಲೀ ಅಥವಾ ಪೊಲೀಸ್ ಇಲಾಖೆಯ ಅನುಮತಿ ಪಡೆದಿರಲಿಲ್ಲ. ದಿಢೀರ್ ಕಾರ್ಯಕ್ರಮ ಘೋಷಣೆ ಮಾಡಿದ್ದರಿಂದ ಹಠಾತ್ತನೆ ಜಮಾಯಿಸಿದ ಜನಸಮೂಹ ನೂಕು ನುಗ್ಗಲು ಉಂಟಾಯಿತು ಎಂದು ರಾಜ್ಯ ಸರ್ಕಾರದ ವರದಿ ಹೇಳುತ್ತದೆ.

ಈ ಬಗ್ಗೆ ಎನ್ ಡಿಟಿವಿ ವರದಿ ಮಾಡಿದ್ದು, ಪ್ರಕರಣ ಸಂಬಂಧ ವಿಚಾರಣೆ ನಡೆಸುತ್ತಿರುವ ಹೈಕೋರ್ಟ್‌ಗೆ ಕರ್ನಾಟಕ ಸರ್ಕಾರ ತನ್ನ ವರದಿ ನೀಡಿದೆ. ಆರ್‌ಸಿಬಿ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಏಕಪಕ್ಷೀಯವಾಗಿ ಮತ್ತು ನಗರ ಪೊಲೀಸರಿಂದ ಸಮಾಲೋಚನೆ/ಅನುಮತಿ ಇಲ್ಲದೆ ಜನರನ್ನು ವಿಜಯೋತ್ಸವ ಮೆರವಣಿಗೆಗೆ ಆಹ್ವಾನಿಸಿದೆ ಎಂದು ಕೋರ್ಟ್‌ಗೆ ಸಲ್ಲಿಸಿದ ವರದಿಯಲ್ಲಿ ತಿಳಿಸಿದೆ.

ಅಂತೆಯೇ ಕರ್ನಾಟಕ ಹೈಕೋರ್ಟ್ ನಿರ್ದೇಶನದ ಮೇರೆಗೆ ವರದಿಯನ್ನು ಬಹಿರಂಗಪಡಿಸಲಾಗಿದೆ. ವರದಿಯನ್ನು ಗೌಪ್ಯವಾಗಿಡಲು ರಾಜ್ಯ ಸರ್ಕಾರ ನ್ಯಾಯಾಲಯವನ್ನು ಒತ್ತಾಯಿಸಿತ್ತು. ಆದರೆ ಅಂತಹ ಗೌಪ್ಯತೆಗೆ ಯಾವುದೇ ಕಾನೂನು ಆಧಾರಗಳಿಲ್ಲ ಎಂದು ನ್ಯಾಯಾಲಯ ಹೇಳಿತ್ತು. ಹೀಗಾಗಿ ಈ ವರದಿ ಇದೀಗ ಬಹಿರಂಗಗೊಂಡಿದ್ದು ರಾಜ್ಯ ಸರ್ಕಾರ ಆರ್ಸಿಬಿ ಮತ್ತು ವಿರಾಟ್‌ ಕೊಹ್ಲಿಯನ್ನು ನೇರ ಹೊಣೆ ಮಾಡಿದ್ದಾರೆ.

 

ವರದಿ:ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss