Chanakya Neeti: ಚಾಣಕ್ಯರು ಜೀವನ ನಡೆಸುವ ಬಗ್ಗೆ, ಆರ್ಥಿಕ ಪರಿಸ್ಥಿತಿ ಸುಧಾರಿಸುವ ಬಗ್ಗೆ ಹೀಗೆ ಹಲವು ವಿಷಯಗಳ ಬಗ್ಗೆ ವಿವರಿಸಿದ್ದಾರೆ. ಅದೇ ರೀತಿ ಚಾಣಕ್ಯರು ನಾವು ನೆಮ್ಮದಿಯಿಂದರಬೇಕಾದರೆ ಕೆಲವು ಕೆಲಸಗಳನ್ನು ಮಾಡಬೇಕು ಮತ್ತು ಆ ಕೆಲಸಗಳು ನಮ್ಮ ಮನಸ್ಸಿಗೆ ತೃಪ್ತಿ ತರುತ್ತದೆ ಎಂದು ಹೇಳಿದ್ದಾರೆ. ಹಾಗಾದರೆ ಆ ಕೆಲಸಗಳೇನು ಅಂತಾ ತಿಳಿಯೋಣ ಬನ್ನಿ..
ದಾನ: ದಾನ ಮಾಡಿದಷ್ಟು ಖುಷಿ ಹೆಚ್ಚುತ್ತದೆ. ಮನಸ್ಸಿಗೆ ಓನೋ ಸಂತೋಷ, ನೆಮ್ಮದಿ ಸಿಗುತ್ತದೆ ಅಂತಾ ಹೇಳಿದ್ದನ್ನು ನಾವು ನೀವು ಕೇಳಿರುತ್ತೇವೆ. ಆದರೆ ದಾನ ಮಾಡಲು ಮಾತ್ರ ಹಲವರು ಮನಸ್ಸು ಮಾಡೋದಿಲ್ಲಾ. ಹಾಗೆ ನೀವು ಮನಸ್ಸು ಮಾಡಿ, ಅವಶ್ಯಕತೆ ಇದ್ದವರಿಗೆ ನಿಮ್ಮಿಂದ ಕೈಲಾದ ವಸ್ತುವನ್ನು ದಾನ ಮಾಡಿದರೆ, ನಿಮ್ಮ ಮನಸ್ಸಿಗೆ ತೃಪ್ತಿ ಸಿಗುವುದು ಖಂಡಿತ.
ಓದು: ಪುಸ್ತಕ ಓದುವ ಹವ್ಯಾಸ ಇರುವವರು ಈಗಿನ ಕಾಲದಲ್ಲಿ ಸಿಗುವುದು ತುಂಬಾ ಅಪರೂಪ. ಅಂಥವರು ಸಿಕ್ಕರೆ, ಅಂಥವರನ್ನು ನೋಡಿದರೆ, ಎಂಥಾ ವಿಚಿತ್ರ, ಅದೇನು ಓದೋ ಹುಚ್ಚೋ ಅಂತಾ ಹೇಳುತ್ತಾರೆ. ಆದರೆ ನೀವು ಓದುವುದನ್ನು ಹವ್ಯಾಸ ಮಾಡಿಕ“ಂಡರೆ, ಓದುವುದು ನಿಮ್ಮ ದಿನನಿತ್ಯದ 1 ಭಾಗವಾಗುತ್ತದೆ.
ಮಂತ್ರೋಚ್ಛಾರ: ಮಂತ್ರ ಕಲಿಯುವುದು, ಉಚ್ಛಿರುಸುವುದು ಕೆಲವರಿಗೆ ಕಷ್ಟವಾಗಬಹುದು. ಆದರೆ ನೀವು ಮನಸ್ಸು ನೀಡಿ, ಮಂತ್ರೋಚ್ಛಾರಣೆ ಮಾಡಿದರೆ, ನಿಮಗೆ ಇನ್ನೂ ಹೆಚ್ಚಿನ ಮಂತ್ರ ಕಲಿಯುವ ಆಸಕ್ತಿ ಬರುತ್ತದೆ. ಅಲ್ಲದೇ ಮಂತ್ರ ಪಟಣೆಯಿಂದ ಜೀವನ ಬದಲಾದ, ನೆಮ್ಮದಿಯಿಂದಿರುವ ಹಲವು ಉದಾಹರಣೆಗಳಿದೆ.

