5 ವರ್ಷ ಗಟ್ಟಿಮೇಳ ಧಾರವಾಹಿಯಲ್ಲಿ ತುಂಬಾ ವಿಷಯಗಳು ಕಲಿತೆ: ನಟಿ ಮಹತಿ ಭಟ್

Sandalwood: ನಟಿ ಮಹತಿ ಕರ್ನಾಟಕ ಟಿವಿ ಸಂದರ್ಶನದಲ್ಲಿ ಮಾತನಾಡಿದ್ದು, ತಮ್ಮ ಸಿನಿ ಪಯಣದ ಬಗ್ಗೆ ಮಾತನಾಡಿದ್ದಾರೆ. ಮಹತಿ ನಟಿಸಿದ ಫಸ್ಟ್ ಸಿರಿಯಲ್ ಅಂದ್ರೆ ಅದು ಗಟ್ಟಿಮೇಳ. ಈ ಸಿರಿಯಲ್ ಆಫರ್ ಬಂದಾಗ ಮಹತಿ ಏನು ಮಾಡಿದ್ರು..? ಸಿರಿಯಲ್‌ನಲ್ಲಿ ನಟಿಸುವಾಗ ಅವರ ಎಕ್ಸ್‌ಪಿರಿಯನ್ಸ್ ಹೇಗಿತ್ತು ಅಂತಾ ಅವರಿಂದಾನೇ ತಿಳಿಯೋಣ ಬನ್ನಿ..

ಮಹತಿಗೆ ಸಿರಿಯಲ್ ಆಫರ್ ಬಂದಾಗ, ನಾನು ಇರೋದು ಮಲೆನಾಡಲ್ಲಿ ಸಿರಿಯಲ್ ಶೂಟಿಂಗ್ ಇರೋದು ಬೆಂಗಳೂರಲ್ಲಿ ಹೇಗೆ ನಿಭಾಯಿಸೋದು ಅನ್ನೋ ಯೋಚನೆ ಬಂತಂತೆ. ಬಳಿಕ ಮಹತಿ ತಂದೆ, ಸಿರಿಯಲ್‌ನಲ್ಲಿ ನೀನು ನಟಿಸು ಎಂದು ಧೈರ್ಯ ತುಂಬಿದರು. ಆಗ ಮಹತಿ ಕೂಡ ಸಿರಿಯಲ್‌ನಲ್ಲಿ ನಟಿಸಲು ಓಕೆ ಎಂದಿದ್ದರಂತೆ.

ಮುಂಚೆ ಎಲ್ಲ ಸಿರಿಯಲ್‌ನಲ್ಲಿ ಆ್ಯಕ್ಟ್ ಮಾಡಲು ಏನೋ ಕಳವಳವಿತ್ತು. ಯಾಕಂದ್ರೆ ಸಿರಿಯಲ್‌ನಲ್ಲಿ ನಟಿಸಿ ಅಭ್ಯಾಸವಿರಲಿಲ್ಲ. ಹಾಗಾಗಿ ಸಿರಿಯಲ್‌ನಲ್ಲಿ ನಟಿಸುತ್ತ ತುಂಬ ಕಲಿತಿದ್ದೇನೆ ಅಂತಾರೆ ಮಹತಿ. ಈ ಸಿರಿಯಲ್‌ನಲ್ಲಿ ಮಹತಿ ಅಂಜಲಿ ಅನ್ನೋ ಪಾತ್ರ ಮಾಡಿದ್ದರು. ಆ ಪಾತ್ರದಲ್ಲಿ ಅವರೆಷ್ಟು ನಿಪುಣರಾಗಿಬಿಟ್ಟಿದ್ದರು ಅಂದ್ರೆ, ಯಾರಾದರೂ ಬೇರೆಯವರಿಗೆ ಅಂಜು ಅಂತಾ ಕರೆದ್ರೆ, ಇವರೇ ತಿರುಗಿರುತ್ತಿದ್ದರಂಂತೆ. ಆ ಮಟ್ಟಿಗೆ ಅಂಜಲಿ ಪಾತ್ರ ಅವರಲ್ಲಿ ಹಾಸುಹ“ಕ್ಕಾಗಿತ್ತು ಅಂತಾರೆ ಮಹತಿ. ಅವರ ಸಂಪೂರ್ಣ ಸಂದರ್ಶನವನ್ನು ನೀವು ಈ ವೀಡಿಯೋದಲ್ಲಿ ನೋಡಬಹುದು.

About The Author