Hubli News: ಹುಬ್ಬಳ್ಳಿ: ಹುಬ್ಬಳ್ಳಿಯ ಕೆಎಲ್ಇ ಬಿವ್ಹಿಬಿ ಕಾಲೇಜಿನ ಆವರಣದಲ್ಲಿ ನಡೆದಿದ್ದ ಹುಬ್ಬಳ್ಳಿಯ ಯುವತಿಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯ ಜಾಮೀನು ಅರ್ಜಿ ವಿಚಾರಣೆಯನ್ನು ನ್ಯಾಯಾಲಯ ಮುಂದೂಡಿದೆ.
ನೇಹಾ ಹಿರೇಮಠ ಕೊಲೆ ಆರೋಪಿ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ ಮಾಡಿದ್ದು, ಜುಲೈ 28 ಕ್ಕೆ ಮುಂದೂಡಿದೆ. ಹೌದು.. ಆರೋಪಿ ಫಯಾಜ್ ಗೆ ಜಾಮೀನು ನೀಡುವಂತೆ ಸಲ್ಲಿಕೆಯಾಗಿರೋ ಅರ್ಜಿ ವಿಚಾರಣೆಯನ್ನು ಸುದೀರ್ಘವಾಗಿ ವಾದ ಪ್ರತಿವಾದ ಆಲಿಸಿರೋ ನ್ಯಾಯಾಧೀಶರು ವಿಚಾರಣೆ ಮೂಂದುಡಿದ್ದಾರೆ.
ಹುಬ್ಬಳ್ಳಿ 1 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ನಡೆದ ವಿಚಾರಣೆಯಲ್ಲಿ ಮುಂದಿನ ವಿಚಾರಣೆಯನ್ನು ಜುಲೈ 28 ಕ್ಕೆ ನಿಗದಿ ಪಡಿಸಿದೆ. ಸದ್ಯ ಹುಬ್ಬಳ್ಳಿಯ ಉಪ ಕಾರಾಗೃಹದಲ್ಲಿ ಫಯಾಜ್ ಬಂಧಿಯಾಗಿದ್ದಾನೆ.




