Sunday, October 5, 2025

Latest Posts

ಧರ್ಮಸ್ಥಳಕ್ಕೆ ಸೀಕ್ರೆಟ್‌ ಫೋರ್ಸ್‌ ಎಂಟ್ರಿ : ಬುರುಡೆ ಕೇಸ್‌ಗೆ ಬಿಗ್‌ ಟ್ವಿಸ್ಟ್‌ ?

- Advertisement -

ಶವ ಹೂತಿಟ್ಟ ಕೇಸ್‌ನಲ್ಲಿ SIT ಅಧಿಕೃತ ಎಂಟ್ರಿ
ಧರ್ಮಸ್ಥಳಕ್ಕೆ SIT ಮುಖ್ಯಸ್ಥ ಪ್ರಣವ್‌ ಮೊಹಾಂತಿ ಭೇಟಿ
ಬೆಳ್ತಂಗಡಿಯಲ್ಲಿ ತಾತ್ಕಾಲಿಕವಾಗಿ SIT ಕಚೇರಿ
ರಹಸ್ಯ ಸ್ಥಳದಲ್ಲಿ ದೂರುದಾರನ ವಿಚಾರಣೆ
ಸರಣಿ ಹತ್ಯೆ, ಅತ್ಯಾಚಾರದ ಆರೋಪ ಮಾಡಿದ್ದ ದೂರುದಾರ
ದೂರುದಾರನನ್ನ ಮಂಪರು ಪರೀಕ್ಷೆಗೊಳಪಡಿವ ಸಾಧ್ಯತೆ
ಧರ್ಮಸ್ಥಳದಲ್ಲಿ ಗುಪ್ತಚರ ಟೀಂ ಎಂಟ್ರಿ

ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಧರ್ಮಸ್ಥಳದ ನೂರಾರು ಶವಗಳನ್ನು ಹೂತಿಟ್ಟ ಕೇಸ್‌ಗೆ ಅಧಿಕೃತ ತನಿಖೆ ಪ್ರಾರಂಭ ಮಾಡಿದ SIT ಟೀಂ ಧರ್ಮಸ್ಥಳಕ್ಕೆ ಎಂಟ್ರಿ ಕೊಟ್ಟಿದೆ. ಈಗಾಗಲೇ ಎಸ್‌ಐಟಿ ಮುಖ್ಯಸ್ಥ ಡಿಜಿಪಿ ಪ್ರಣವ್ ಮೊಹಾಂತಿ ನೇತೃತ್ವದ ಅಧಿಕಾರಿಗಳ ತಂಡ ಬೆಳ್ತಂಗಡಿಯ ಪೊಲೀಸ್ ಠಾಣೆಯ ಬಳಿ ನೂತನವಾಗಿ ನಿರ್ಮಾಣಗೊಂಡಿರುವ ಪೊಲೀಸ್ ಕ್ವಾಟ್ರಸ್‌ನಲ್ಲಿ ತಾತ್ಕಾಲಿಕವಾಗಿ SIT ಕಚೇರಿ ತೆರೆದಿದೆ. ಧರ್ಮಸ್ಥಳದಿಂದ ೧೫ ಕಿ.ಮೀ ದೂರದಲ್ಲಿ ಆಫೀಸ್‌ ತೆಗೆಯೋದಕ್ಕೂ ಬಹುಮುಖ್ಯ ಕಾರಣ ಇದೆ. ದೂರುದಾರರು, ಸಾಕ್ಷಿದಾರರು ಯಾರದ್ದಾದ್ರೂ ಪ್ರಭಾವಕ್ಕೆ, ಭಯಕ್ಕೆ ಮಣಿದು ಮುಂದೆ ಬರೋದಕ್ಕೆ ಹಿಂಜರಿಯಬಹುದು. ಹಾಗಾಗಿಯೇ ಧರ್ಮಸ್ಥಳ ಗ್ರಾಮದಿಂದ ೧೫ ಕಿ.ಮೀ ದೂರದಲ್ಲಿ ಆಫೀಸ್‌ ತೆರೆಯೋ ಮೂಲಕ ಎಸ್‌ಐಟಿ ಟೀಮ್‌ ಆರಂಭದಲ್ಲೇ ನ್ಯಾಯ ಸಿಗುವ ಸುಳಿವು ನೀಡುತ್ತಿದೆ.

ಅನಾಮಿಕ ಸಾಕ್ಷಿದಾರರನನ್ನ ಅಥವಾ ಮಾಸ್ಕ್‌ ಮ್ಯಾನ್‌ ನನ್ನ ವಶಕ್ಕೆ ತೆಗೆದುಕೊಂಡು ರಹಸ್ಯ ಸ್ಥಳದಲ್ಲಿ ವಿಚಾರಣೆ ನಡೆಸಲು SIT ರೆಡಿಯಾಗಿದೆ. ಇನ್ನು ಈ ಹಿಂದೆ ಈ ಅನಾಮಿಕ ಸರಣಿ ಶವ ಹೂತಿಟ್ಟ ಆರೋಪ ಮಾಡಿದ್ದ, ಈತನನ್ನ ಮಂಪರು ಪರೀಕ್ಷೆಗೊಳಪಾಡಿಸುವ ಸಾಧ್ಯತೆ ಇದೆ.
ಇಷ್ಟೆ ಅಲ್ಲದೆ ಇಂದು SIT ಭೇಟಿಗೂ ಮುನ್ನವೇ, ಧರ್ಮಸ್ಥಳದಲ್ಲಿ ಗುಪ್ತಚರ ಟೀಂ ಎಂಟ್ರಿ ಕೊಟ್ಟು ಮಾಹಿತಿಯನ್ನು ಪಡೆದುಕೊಳ್ಳುತ್ತಿದೆ. ಮಫ್ತಿಯಲ್ಲಿ ಧರ್ಮಸ್ಥಳದಲ್ಲಿ ಗುಪ್ತಚರ ಇಲಾಖೆ ಸಿಬ್ಬಂದಿಗಳಿಂದ ರೌಂಡ್ಸ್‌ ಕೂಡ ನಡೆಯುತ್ತಾ ಇದೆ. ಬೇರೆ ಸ್ಥಳಗಳಿಗೆ ಹೋಗಿ ಶವ ಹೂತಿಟ್ಟ ಬಗ್ಗೆ ಮಾಹಿತಿ ಪಡೆಯುತ್ತಿರುವ ಮಫ್ತಿ. ಇತ್ತ ಅಧಿಕೃತವಾಗಿ ತನಿಖೆ ಆರಂಬಿಸಿರುವ SIT ತಂಡ. ಮುಂದೆ ಏನಾಗುತ್ತದೆ, ಇನ್ನೂ ಶವಗಳನ್ನ ಎಲ್ಲೆಲ್ಲಿ ಹೂತಿಟ್ಟಿದ್ದ ಅನ್ನೋ ಕುತೂಹಲಕಾರಿ ಹಾಗೂ ಭಯಾನಕ ಪ್ರಶ್ನೆಗಳಿಗೆ ಉತ್ತರ ಪಡೆದುಕೊಳ್ಳಬೇಕಿದೆ. ಬಹುದೊಡ್ಡ ಜನಾಕ್ರೋಶವನ್ನ ತಣಿಸುವ ದೊಡ್ಡ ಹೊಣೆ ಇದೀಗ ಎಸ್‌ಐಟಿಗಿದೆ.

 

ವರದಿ: ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss