ರಸ್ತೆಗೆ ಬಿದ್ದ ಬೃಹತ್ ಗಾತ್ರದ ಜಾಲಿ ಮರ ! ಸಂಚಾರ ಗಂಟೆ ಕಾಲ ದುಸ್ತರ

kUNDAGOLA: ಕುಂದಗೋಳ: ಬೃಹತ್ ಗಾತ್ರದ ಜಾಲಿ ಮರವೊಂದು ಗಾಳಿ ರಭಸಕ್ಕೆ ರಸ್ತೆಗೆ ಉರುಳಿ ಬಿದ್ದ ಪರಿಣಾಮ ರಸ್ತೆ ಸಂಪರ್ಕ ಒಂದು ಗಂಟೆಗೂ ಅಧಿಕ ಕಾಲ ಕಡಿತಗೊಂಡು ಜನ ಪರದಾಡಿದ ಪ್ರಸಂಗ ನಡೆದಿದೆ.

ಹೌದು ! ಕುಂದಗೋಳ ಪಟ್ಟಣದಿಂದ ಗುಡೇನಕಟ್ಟಿ ಸಂಪರ್ಕ ಕಲ್ಪಿಸುವ ಮಾರ್ಗ ಮಧ್ಯದಲ್ಲಿ ಹೊಲದ ಬದುವಿನಲ್ಲಿ ಬೆಳೆದಿದ್ದ ಜಾಲಿ ಮರ ಗಾಳಿ ರಭಸಕ್ಕೆ ರಸ್ತೆ ಉರುಳಿ ಬಿದ್ದು ರಸ್ತೆ ಸಂಪರ್ಕ ಬಂದ್ ಆಗಿತ್ತು. ಅದೃಷ್ಟವಶಾತ್ ಮರ ಬಿದ್ದ ವೇಳೆ ಯಾವುದೇ ಅಪಾಯ ಸಂಭವಿಸಿರಲಿಲ್ಲಾ.

ತಕ್ಷಣ ಸ್ಥಳೀಯ ಗುಡೇನಕಟ್ಟಿ ಗ್ರಾಮಸ್ಥರು, ಪ್ರಯಾಣಿಕರು ಅಗ್ನಿಶಾಮಕ ದಳಕ್ಕೆ ಕರೆ ಮಾಡಿ ವಿಷಯ ತಿಳಿಸಿದ ಬಳಿಕ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ತಂಡ ಮರದ ರೆಂಬೆ ಕೊಂಬೆಗಳನ್ನು ಕತ್ತರಿಸಿ, ಜೆಸಿಬಿ ಯಂತ್ರದ ಮೂಲಕ ರಸ್ತೆ ಸಂಚಾರ ಪುನಃ ಅನುಕೂಲ ಮಾಡಿಕೊಟ್ಟಿದ್ದಾರೆ.

About The Author