Political News: ರಾಹುಲ್ ಗಾಂಧಿ ಪ್ರಧಾನಮಂತ್ರಿ ಆಗ್ತಾರೆ ಅನ್ನೋದು ಜೋಕ್: ಶಾಸಕ ಅರವಿಂದ್ ಬೆಲ್ಲದ್

Political News: Hubli: ಮಹಾದಾಯಿ ಕುರಿತ ಗೋವಾ ಸಿಎಂ ಅವರು ಮಾತನಾಡಿರುವ ಹೇಳಿಕೆ ರಾಜಕೀಯವಾಗಿದ್ದು. ಎಂದು ಶಾಸಕ ಅರವಿಂದ್ ಬೆಲ್ಲದ ಹೇಳಿದರು.

ನಗರದಲ್ಲಿ ಮಾತನಾಡಿದ ಅವರು ಸೋನಿಯಾಗಾಂಧಿ ಅವರು ಈ ಹಿಂದೆ ಹನಿ ನೀರು ಕೊಡಲ್ಲಾ ಅಂತ ಹೇಳಿದ್ದರು. ನಾವು ನೀಡೋ ದಾಖಲಾತಿಗಳ ಮೇಲೆ ಯೋಜನೆಗೆ ಅನುಮತಿ ನಿರ್ಧಾರವಾಗುತ್ತದೆ ರಾಜಕೀಯ ಹೇಳಿಕೆಯಿಂದ ಏನೂ ಆಗಲ್ಲಾ. ಸಿಎಂ ರಾಜಕೀಯ ಮಾಡಬಾರದು. ಅದನ್ನು ಬಿಟ್ಟು ಏನು ದಾಖಲಾತಿ ನೀಡಬೇಕೋ ದಾಖಲಾತಿಯನ್ನು ನೀಡೋ ಕೆಲಸ ಮಾಡಬೇಕು.  ರಾಜ್ಯ ಸರ್ಕಾರಕ್ಕೆ ಈ ಯೋಜನೆ ಬಗ್ಗೆ ಬದ್ದತೆ ಇಲ್ಲಾ. ಕಾಂಗ್ರೆಸ್ ಸರ್ಕಾರ ಬಂದಮೇಲೆ ಮಹದಾಯಿ ಬಗ್ಗೆ ಯಾವುದೇ ಪ್ರಗತಿಯಾಗಿಲ್ಲ ಎಂದು ಆರೋಪಿಸಿದರು.

ಇನ್ನೂ ಸಿಎಂ ಸಿದ್ದರಾಮಯ್ಯ ಮತ್ತು ಡಿಕೆಶಿ ನಡುವೆ ಕುರ್ಚಿ ಫೈಟ್ ವಿಚಾರವಾಗಿ ಪ್ರತಿಕ್ರಿಯಿಸಿ, ಕುರ್ಚಿಗಾಗಿ ಸಿಎಂ ಡಿಸಿಎಂ ನಡುವೆ ಹೋರಾಟ ನಡೆದಿದೆ. ರಾಜ್ಯದಲ್ಲಿ ರಾಜಕೀಯ ಕ್ರಾಂತಿ ಅಂತು ಆಗುತ್ತದೆ. ಆದ್ರೆ ಯಾವಾಗ ಆಗುತ್ತೆ ಅಂತ ನೋಡಬೇಕು. ಆ ಕುರ್ಚಿ ಮೇಲೆ ಯಾರು ಬಂದು ಕೂರ್ತಾರೋ ನೋಡಬೇಕು ಎಂದರು.

ಇದೇ ವೇಳೆ ರಾಹುಲ್ ಗಾಂಧಿಯವರು ಕಳ್ಳ ಓಟಿಂಗ್ ಆರೋಪಕ್ಕೆ ಪ್ರತಿಕ್ರಿಯೆ ನೀಡ, ರಾಹುಲ್ ಗಾಂಧಿ ಇನೋಸೆಂಟ್ ವ್ಯಕ್ತಿ. ಯಾರಾದ್ರು ಹೇಳಿದ್ರೆ ಅದನ್ನೇ ಬಂದು ಹೇಳ್ತಾರೆ. ಅವರ ಹೇಳಿಕೆಯನ್ನು ಯಾರು ಗಂಭೀರವಾಗಿ ಪರಿಗಣಿಸಬಾರದು. ರಾಹುಲ್ ಗಾಂಧಿ ಪ್ರಧಾನಮಂತ್ರಿ ಆಗ್ತಾರೆ ಅನ್ನೋದು ಜೋಕ್ ಎಂದರು.

About The Author