Health Tips: ನಾವು ಸೇವಿಸುವ ಆರೋಗ್ಯಕರ ಆಹಾರವೇ ನಮ್ಮನ್ನು ಬಲಶಾಲಿಯಾಗಿಸುತ್ತದೆ. ಆದರೆ ಇಂದಿನ ಕಾಲದ ಹಲವರಿಗೆ, ಆರೋಗ್ಯಕರ ಆಹಾರ ಸೇವಿಸಲು ಕೂಡ ಸಮಯವೇ ಇಲ್ಲ. ಆದರೆ ನೀವು ಕೆಲ ವಸ್ತುಗಳನ್ನು ರಾತ್ರಿ ನೀರಿನಲ್ಲಿ ನೆನೆಸಿ, ಬೆಳಿಗ್ಗೆ ಸೇವಿಸಿದರೆ, ನಿಮ್ಮ ಆರೋಗ್ಯ ಉತ್ತಮವಾಗುತ್ತದೆ. ಹಾಗಾದ್ರೆ ಯಾವುದು ಆ ಆಹಾರ ಅಂತಾ ತಿಳಿಯೋಣ ಬನ್ನಿ..
ಬಾದಾಮ್: ಬಾದಾಮಿಯನ್ನು ರಾತ್ರಿ ನೆನೆಸಿ, ಬೆಳಿಗ್ಗೆ ಸಿಪ್ಪೆ ತೆಗೆದು ಸೇವಿಸಿದರೆ, ನಿಮ್ಮ ಹೃದಯ, ಮೆದುಳು ಮತ್ತು ನಿಮ್ಮ ಮೂಳೆಯ ಆರೋಗ್ಯ ವೃದ್ಧಿಸುತ್ತದೆ. ಏಕೆಂದರೆ ಇದರಲ್ಲಿ ಹೆಲ್ದಿ ಫ್ಯಾಟ್ ಮತ್ತು ವಿಟಾಮಿನ್ ಈ ಇರುತ್ತದೆ. ಹಾಗಾಗಿ ಇದು ಮೂಳೆ, ಹೃದಯವನ್ನು ಶಕ್ತಿಶಾಲಿಯನ್ನಾಗಿ ಮಾಡತ್ತೆ.
ಮೆಂತ್ಯೆ ಕಾಳು: ರಾತ್ರಿಯೀಡಿ ಮೆಂತ್ಯೆ ಕಾಳನ್ನು ನೀರಿನಲ್ಲಿ ನೆನೆಸಿ, ಬೆಳಿಗ್ಗೆ ಖಾಲಿ ಹ“ಟ್ಟೆಯಲ್ಲಿ ಇದನ್ನು ತಿಂದು ನೀರು ಕುಡಿದರೆ, ನಿಮ್ಮ ಉದರ ಸಮಸ್ಯೆಗೆ ಮುಕ್ತಿ ಸಿಗುತ್ತದೆ. ಅಲ್ಲದೇ, ಶುಗರ್ ಲೆವಲ್ ಕಂಟ್ರೋಲಿನಲ್ಲಿರುತ್ತದೆ.
ಚೀಯಾ ಸೀಡ್ಸ್: ಚೀಯಾ ಸೀಡ್ಸ್ ನೆನೆಸಿ, ಓಟ್ಸ್ಗೆ ಹಾಕಿ, ತಿನ್ನುವುದು ಈಗ ಟ್ರೆಂಡ್ ಆಗಿದೆ. ಇತ್ತೀಚಿನ ದಿನಗಳಲ್ಲಿ ಇದರ ಬೆಲೆ ಜನರಿಗೆ ತಿಳಿದಿದೆ. ಆದರೆ ಭಾರತದಲ್ಲಿ ಇದು ಹಲವು ವರ್ಷಗಳ ಮುಂಚೆಯಿಂದಲೇ ಚಾಲ್ತಿಯಲ್ಲಿತ್ತು. ಇದನ್ನೇ ಜನ ಕಾಮಕಸ್ತೂರಿ ಬೀಜ ಎನ್ನುತ್ತಿದ್ದರು. ದೇಹ ತಂಪಾಗಿಸಲು ಜನ ಇದನ್ನು ನೆನೆಸಿ, ನೀರಿಗೆ ಹಾಕಿ, ಜ್ಯೂಸ್ ರೀತಿ ಸೇವಿಸುತ್ತದ್ದರು. ಇದರ ಸೇವನೆಯಿಂದ ಶುಗರ್, ಬಿಪಿ ಕಂಟ್ರೋಲಿನಲ್ಲಿರುತ್ತದೆ. ತ್ವಚೆ, ಕೂದಲು ಸುಂದರವಾಗುತ್ತದೆ. ಉಷ್ಣ ಸಮಸ್ಯೆ ಏನೇ ಇದ್ದರೂ ಸರಿಯಾಗುತ್ತದೆ.
ಒಣದ್ರಾಕ್ಷಿ: ಒಣದ್ರಾಕ್ಷಿಯನ್ನು ರಾತ್ರಿಯಿಡೀ ನೀರಿನಲ್ಲಿ ನೆನೆಸಿ, ಸೇವನೆ ಮಾಡುವುದರಿಂದ ನಿಮ್ಮ ದೇಹದಲ್ಲಿ ಹಿಮೋಗ್ಲೋಬಿನ್ ಹೆಚ್ಚಾಗುತ್ತದೆ. ಜೀರ್ಣಕ್ರಿಯೆ ಸರಿಯಾಗಿ ಆಗುತ್ತದೆ. ಅನೇಮಿಯಾ ಮತ್ತು ನಿಶ್ಶಕ್ತಿಯನ್ನು ಇದು ದೂರ ಮಾಡುತ್ತದೆ.

