Health Tips: ಇತ್ತೀಚಿನ ದಿನಗಳಲ್ಲಿ ಜನ, ಅಮ್ಮ, ಅಜ್ಜಿ ಮಾಡ್ತಿದ್ದ ತಿಂಡಿ ಬಿಟ್ಟು, ಸೋಶಿಯಲ್ ಮೀಡಿಯಾದಲ್ಲಿ ಬರುವ ತಿಂಡಿಗಳನ್ನು ಮಾಡಿ ತಿನ್ನುತ್ತಿದ್ದಾರೆ. ಅದರಲ್ಲೂ ಡಯಟ್ ಅನ್ನೋ ಹೆಸರಲ್ಲಿ ಬರುತ್ತಿರುವ ಕೆಲ ಆಹಾರಗಳಂತೂ ನಮ್ಮ ಭಾರತೀಯರಿಗೆ ಹೇಳಿದ್ದಲ್ಲವೇ ಅಲ್ಲ. ಹಾಗಾದ್ರೆ ಯಾವ ಆಹಾರಗಳನ್ನು ನಾವು ಬೆಳಿಗ್ಗೆ ತಿಂಡಿಯಾಗಿ ತಿನ್ನಬಾರದು ಅಂತಾ ತಿಳಿಯೋಣ ಬನ್ನಿ..
ಮೈದಾದಿಂದ ಮಾಡಿದ ತಿಂಡಿ: ಮೈದಾದಿಂದ ಮಾಡಿದ ರೋಟಿ, ಬ್ರೇಡ್, ಬನ್, ಪರೋಟ ಸೇರಿ ಹಲವು ತಿಂಡಿಗಳನ್ನು ಮೈದಾದಲ್ಲಿ ಮಾಡಿರುತ್ತಾರೆ. ಇಂಥವುಗಳನ್ನು ನೀವು ಬೆಳಿಗ್ಗೆ ತಿಂಡಿಯಾಗಿ ತಿಂದರೆ, ನಿಮ್ಮ ದೇಹದ ತೂಕ ಹೆಚ್ಚಾಗಿ, ಹಲವು ರೋಗಗಳು ನಿಮ್ಮನ್ನು ಅಂಟಿಕ“ಳ್ಳುತ್ತದೆ. ಹಾಗಾಗಿ ಆದಷ್ಟು ಮೈದಾ, ಎಣ್ಣೆ ಬಳಸಿ ಮಾಡಿದ ಆಹಾರ ಸೇವನೆ ನಿಲ್ಲಿಸಿ.
ಪ್ಯಾಕ್ಡ್ ಜ್ಯೂಸ್: ಸೋಶಿಯಲ್ ಮೀಡಿಯಾ, ಟಿವಿಗಳಲ್ಲಿ ಬರುವ ವೀಡಿಯೋಗಳನ್ನು ನೋಡಿ, ಕೆಲವರು ಅದೇ ಆರೋಗ್ಯಕರವೆಂದು ಭಾವಿಸಿ, ಪ್ಯಾಕ್ ಮಾಡಿದ ಜ್ಯೂಸ್ಗಳನ್ನು ತಂದು, ತಾವು ಕುಡಿಯುತ್ತಾರೆ ಮತ್ತು ಮಕ್ಕಳಿಗೂ ನೀಡುತ್ತಾರೆ. ಆದರೆ ಇದೆಷ್ಟು ಡೇಂಜರ್ ಅನ್ನೋ ಅಂದಾಜು ಮಾತ್ರ ಅವರಿಗಿರುವುದಿಲ್ಲ. ಏಕೆಂದರೆ, ಇಂಥ ಜ್ಯೂಸ್ಗಳಲ್ಲಿ ಹಣ್ಣುಗಳನ್ನು ಬಳಸಿರುವುದೇ ಇಲ್ಲ. ಅಲ್ಲದೇ, ತುಂಬ ದಿನ ಉಳಿಯಲು ಕೆಮಿಕಲ್ ಬಳಸಿ, ಪ್ರಿಸರ್ವ್ ಮಾಡಿರುತ್ತಾರೆ. ಹಾಗಾಗಿ ಇಂಥ ಆಹಾರ ಸೇವಿಸಿದರೆ, ಅದರಲ್ಲೂ ಬೆಳಿಗ್ಗೆ ಇಂಥ ಆಹಾರ ಸೇವಿಸದರೆ, ಬೇಗ ನಿಮ್ಮ ಆರೋಗ್ಯ ಹಾಳಾಗುತ್ತದೆ.
ಸಕ್ಕರೆ ಬಳಸಿ ಮಾಡುವ ಚಹಾ: ಕೆಲವರಿಗೆ ಬೆಳಿಗ್ಗೆ ಎದ್ದ ತಕ್ಷಣ ಸಕ್ಕರೆ, ಹಾಲು ಬಳಸಿ ಮಾಡಿದ ಕಾಫಿ, ಚಹಾ ಬೇಕೇ ಬೇಕಾಗುತ್ತದೆ. ಆಗಲೇ ಅವರ ದಿನ ಶುರುವಾಗೋದು. ಆದರೆ ಈ ಅಭ್ಯಾಸ ಉತ್ತಮವಲ್ಲ. ಬೆಳಿಗ್ಗೆ ಎದ್ದ ತಕ್ಷಣ ನೀವು ಚಹಾ, ಕಾಫಿ ಕುಡಿಯುವ ಬದಲು, ತಿಂಡಿಯಾದ ಬಳಿಕ, ಕಡಿಮೆ ಸಕ್ಕರೆ ಬಳಸಿದ ಚಹಾ ಸೇವಿಸಬಹುದು. ಆದರೆ ಅದು ಕೂಡ ಮಿತವಾಗಿರಬೇಕು.




