Friday, November 14, 2025

Latest Posts

Health Tips: ಈ 4 ಗಿಡಗಳನ್ನು ಬೆಳೆಸಿ ಮತ್ತು ಬಳಸಿ ಆರೋಗ್ಯ, ಸೌಂದರ್ಯ ವೃದ್ಧಿಸಿ

- Advertisement -

Health Tips: ನಮ್ಮ ಆರೋಗ್ಯ ಮತ್ತು ಸೌಂದರ್ಯ ಕಾಪಾಡಬೇಕು ಅಂದ್ರೆ, ನಾವು ಮಾರುಕಟ್ಟೆಯಿಂದ ಖರೀದಿಸಿ ತರುವ ಬ್ಯೂಟಿ ಪ್ರಾಡಕ್ಟ್‌ಗಳನ್ನೇ ಬಳಸಬೇಕು ಎಂದೇನಿಲ್ಲ. ನಾವು ನಮ್ಮ ಗಾರ್ಡನ್‌ನಲ್ಲೇ ಇರುವ ಕೆಲ ಗಿಡಗಳ ಎಲೆಗಳನ್ನು ಬಳಸಿಯೇ ನಮ್ಮ ಆರೋಗ್ಯ, ಸೌಂದರ್ಯ ವೃದ್ಧಿಸಬಹುದು. ಹಾಗಾದ್ರೆ ಯಾವುದು ಆ ಗಿಡಗಳು ಅಂತಾ ತಿಳಿಯೋಣ ಬನ್ನಿ..

ತುಳಸಿ: ಹಿಂದೂಗಳ ಮನೆಯಲ್ಲಿ ತುಳಸಿ ಗಿಡ ಇದ್ದೇ ಇರುತ್ತದೆ. ಯಾಕಂದ್ರೆ ತುಳಸಿಯಲ್ಲಿ ಔಷಧಿಯ ಗುಣವಿರುವುದು ಮಾತ್ರವಲ್ಲದೇ, ಹಿಂದೂಗಳು ತುಳಸಿಯನ್ನು ದೇವಿಯಾಗಿ ಪೂಜಿಸುತ್ತಾರೆ. ಆದರೆ ನಿಮಗೆ ಕೆಮ್ಮಿನ ಸಮಸ್ಯೆ ಇದ್ದರೆ, ಜೀರ್ಣಕ್ರಿಯೆ ಸಮಸ್ಯೆ ಇದ್ದರೆ, ಕೆಮ್ಮು, ನೆಗಡಿ, ಜ್ವರ, ಕಫ, ಲೋ ಬಿಪಿ ಹೀಗೆ ಯಾವುದೇ ಆರೋಗ್ಯ ಸಮಸ್ಯೆ ಇದ್ದರೂ ತುಳಸಿ ಎಲೆ ಸೇವನೆ ಅಥವಾ ತುಳಸಿ ಕಶಾಯ ಸೇವನೆ ಮಾಡಿದರೆ, ಈ ಎಲ್ಲ ಸಮಸ್ಯೆಗಳಿಂದ ಮುಕ್ತಿ ಸಿಗುತ್ತದೆ.

ಆ್ಯಲೋವೆರಾ: ಆ್ಯಲೋವೆರಾ 1 ಅದ್ಭುತವಾದ ಗಿಡವಾಗಿದೆ. ಇದರ ಜ್ಯೂಸ್ ಬೆಳಿಗ್ಗೆ ಸೇವಿಸಿದರೆ, ದೇಹದ ತೂಕ ಆರೋಗ್ಯಕರವಾಗಿ ಕಡಿಮೆಯಾಗುತ್ತದೆ. ಇನ್ನು ಗಾಯ, ಕಲೆ, ಗುಳ್ಳೆ ಹೀಗೆ ತ್ವಚೆಯ ಯಾವುದೇ ಸಮಸ್ಯೆ ಇದ್ದರೂ ಆ್ಯಲೋವೆರಾ ಜೆಲ್ ಹಚ್ಚಿದ್ರೆ, ಆ ಚರ್ಮದ ಸಮಸ್ಯೆ ಮಾಯವಾಗುತ್ತದೆ.

ಪುದೀನಾ: ಪುದೀನಾ ಎಲೆಯ ಚಟ್ನಿ ಅಥವಾ ತಂಬುಳಿ ಅಥವಾ ಬರೀ ಎಲೆ ಸೇವನೆ ಮಾಡಿದರೂ ಉತ್ತಮ. ಇದು ತ್ವಚೆಯ ಆರೋಗ್ಯ ಚೆನ್ನಾಗಿರಿಸುತ್ತದೆ. ಅಲ್ಲದೇ, ಜೀರ್ಣಕ್ರಿಯೆ ಸುಲಭವಾಗಿಸುತ್ತದೆ. ಪುದೀನಾ ಪೇಸ್ಟ್ ಮಾಡಿ ನೀವು ಗುಳ್ಳೆಗಳ ಮೇಲೆ ಹಚ್ಚಿದರೆ, ಗುಳ್ಳೆಯೂ ಮಾಯವಾಗುತ್ತದೆ.

ತಿಮರೆ: ತಿಮರೆ ಎಂದರೆ, ಸರಸ್ವತಿ ಎಲೆ, ವಂದೆಲಗ. ಇದರ ಸೇವನೆಯಿಂದ ನೆನಪಿನ ಶಕ್ತಿ ಹೆಚ್ಚಾಗುತ್ತದೆ. ಹಾಗಾಗಿಯೇ ಚಿಕ್ಕ ಮಕ್ಕಳಿಗೆ, ಗರ್ಭಿಣಿಯರಿಗೆ ತಿಮರೆಯ ತಂಬುಳಿ ಮಾಡಿಕ“ಡಲಾಗುತ್ತದೆ. ಇದನ್ನು ಬೆಳೆಸಲು ಹೆಚ್ಚು ಜಾಗ ಬೇಡ ಮತ್ತು ಇದು ಬೇಗ ಬೇಗ ಬೆಳೆಯುತ್ತದೆ.

- Advertisement -

Latest Posts

Don't Miss