Recipe: ಬೇಕಾಗುವ ಸಾಮಗ್ರಿ: 2 ಕಪ್ ಸಕ್ಕರೆ, 250 ಗ್ರಾಮ್ ಖೋವಾ, 65 ಗ್ರಾಮ್ ಪನೀರ್, 1 ಸ್ಪೂನ್ ಸಕ್ಕರೆ ಪುಡಿ, 3 ಸ್ಪೂನ್ ಮೈದಾ, ಕಾಲು ಸ್ಪೂನ್ ಬೇಕಿಂಗ್ ಪುಡಿ, ಕರಿಯಲು ಎಣ್ಣೆ.
ಮಾಡುವ ವಿಧಾನ: 2 ಕಪ್ ಸಕ್ಕರೆಗೆ, 1 ಕಪ್ ನೀರು ಹಾಕಿ, ಸಕ್ಕರೆ ಪಾಕ ತಯಾರಿಸಿ. ಇದಕ್ಕೆ ಫ್ಲೇವರ್ ಬರಲು, ಏಲಕ್ಕಿ ಅಥವಾ ರೋಸ್ ವಾಟರ್, ಕೇಸರಿದಳ ಸೇರಿಸಿ.
ಈಗ 1 ಹರಿವಾಣದಲ್ಲಿ ಖೋವಾ, ಪನೀರ್ ತುರಿ ಹಾಕಿ ಸಪರೇಟ್ ಆಗಿ ನಾದಬೇಕು. ಬಳಿಕ ಸಕ್ಕರೆ ಪುಡಿ, ಮೈದಾ, ಬೇಕಿಂಗ್ ಪುಡಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ನಿಧಾನವಾಗಿ ನಾದಬೇಕು. ಇದಕ್ಕೆ ಕಾಟನ್ ಕ್ಲಾನ್ ಮುಚ್ಚಿಯಬೇಕು. 10 ನಿಮಿಷದ ಬಳಿಕ ಉಂಡೆ ತಯಾರಿಸಿ, ಕಾದ ಎಣ್ಣೆಯಲ್ಲಿ ಕರಿಯಬೇಕು.ಬಳಿಕ ರೆಡಿ ಮಾಡಿದ ಸಕ್ಕರೆ ಪಾಕಕ್ಕೆ ಹಾಕಿ, 6 ಗಂಟೆ ಇರಿಸಿದರೆ, ಜಾಮೂನ್ ರೆಡಿ.
ಸಾಮಗ್ರಿಗಳನ್ನು ಹಾಕುವಾಗ ಸರಿಯಾಗಿ ಅಳತೆ ಮಾಡಿ. ಮತ್ತು ಉಂಡೆ ಮಾಡುವಾಗ, ಎಲ್ಲಿಯೂ ಕ್ರ್ಯಾಕ್ ಆಗದಂತೆ ಉಂಡೆ ಮಾಡಿ.




