ಒಮ್ಮೆ ಮನಸ್ಸಿಗೆ ನೋವಾದರೆ, ಸಂಬಂಧವೇ ಬೇಡ ಎನ್ನುವರು ಈ ರಾಶಿಯವರು

Horoscope: ನಾವು ನಿಮಗೆ ಬೇರೆ ಬೇರೆ ರಾಶಿಗಳ ಗುಣ ಸ್ವಭಾವವನ್ನು ಹಲವು ಬಾರಿ ಹೇಳಿದ್ದೇವೆ. ಅದೇ ರೀತಿ ಇಂದು ನಾವು ಯಾವ ರಾಶಿಯವರಿಗೆ ಮನಸ್ಸಿಗೆ ಬೇಸರವಾದರೆ, ಅವರು ಸಂಬಂಧವೇ ಬೇಡವೆನ್ನುಂತೆ ಇರುತ್ತಾರೆಂದು ಹೇಳಲಿದ್ದೇವೆ.

ವೃಷಭ: ಅತೀ ಹೆಚ್ಚು ತಾಳ್ಮೆಯಿಂದ ಇರುವ ರಾಶಿಗಳಲ್ಲಿ ವೃಷಭ ರಾಶಿಗೆ 1ನೇ ಸ್ಥಾನ. ಆದರೆ ನೀವು ಇವರ ತಾಳ್ಮೆ ಕೆಡಿಸಿದರೆ, ಅಥವಾ ಇವರ ಮನಸ್ಸಿಗೆ ಅತೀ ಹೆಚ್ಚು ನೋವು ಮಾಡಿದರೆ, ಅವರು ನಿಮ್ಮನ್ನೆಂದಿಗೂ ಗೌರವಿಸುವುದಿಲ್ಲ, ಪ್ರೀತಿಸುವುದಿಲ್ಲ.

ಕರ್ಕ: ಕರ್ಕ ರಾಶಿಯವರು ಭಾವನಾತ್ಮಕ ಜೀವಿಗಳು. ಇವರು ಸಂಬಂಧಕ್ಕೆ ಹೆಚ್ಚು ಬೆಲೆ ನೀಡುತ್ತಾರೆ. ಆದರೆ ನೀವು ಅವರ ಮನಸ್ಸಿಗೆ ನೋವು ಮಾಡಿದರೆ, ಅವರು ನಿಮ್ಮನ್ನು ದ್ವೇಷಿಸಲು ಶುರು ಮಾಡುತ್ತಾರೆ. ಮೇಲಿನಿಂದ ನಿಮ್ಮನ್ನು ಗೌರವಿಸಿದರೂ, ಅವರ ಮನಸ್ಸಿನಲ್ಲಿ ನಿಮ್ಮ ಬಗ್ಗೆ ಉತ್ತಮ ಅಭಿಪ್ರಾಯವಿರುವುದಿಲ್ಲ.

ವೃಶ್ಚಿಕ: ವೃಶ್ಚಿಕ ರಾಶಿಯವರಿಗೆ ಕೋಪ ಹೆಚ್ಚು. ಇವರು ಗಂಭೀರ ಸ್ವಭಾವದವರು. ಹಿಡಿದ ಕೆಲಸ ಬಿಡದ ಛಲವಾದಿಗಳು. ಆದರೆ ಇವರ ಗೌರವಕ್ಕೆ ಧಕ್ಕೆಯಾದರೆ, ಆ ಸ್ಥಳದಲ್ಲಿ 1 ನಿಮಿಷ ಇರಲು ಅವರು ಇಚ್ಛಿಸುವುದಿಲ್ಲ. ಅಲ್ಲದೇ, ಇವರು ಸಂಬಂಧಕ್ಕೆ ಹೆಚ್ಚು ಬೆಲೆ ನೀಡುವವರು. ಹಾಗಾಗಿ ಸಂಬಂಧದಲ್‌ಲಿಯೂ ಮನಸ್ತಾಪವಾದರೆ, ಅವರ ಮತ್ತೆ ಮುಂಚಿನ ರೀತಿ ಇರಲು ಇಚ್ಛಿಸುವುದಿಲ್ಲ.

ಧನು: ಧನು ರಾಶಿಯವರು ತುಂಬಾ ಸೂಕ್ಷ್ಮ ಸ್ವಭಾವದವರು. ಅವರು ಯಾರ ಮೇಲೆಯೂ ಭಾರವಾಗಲು ಬಯಸುವವರಲ್ಲ. ಅಂಥ ಮನಸ್ಸಿನವರಿಗೆ ನೀವು ಅವಮಾನಿಸಿದರೆ, ನಿಮ್ಮ ಜತೆಗಿನ ಸಂಬಂಧದ ಬಗ್ಗೆ ಅವರಿಗೆ ಜಿಗುಪ್ಸೆ ಬರುತ್ತದೆ. ಸಂಬಂಧವೇ ಬೇಡವೆನ್ನಿಸಬಹುದು. ಹಾಗಾಗಿ ಧನು ರಾಶಿಯವರಿಗೆ ಎಂದಿಗೂ ಅವಮಾನವಾಗುವಂತೆ ಮಾಡಬೇಡಿ.

About The Author