Hubli News: ಹಬ್ಬದ ವೇಳೆ ಗಲಾಟೆ ಮಾಡಿದ್ರೆ ಬೆಂಡೆತ್ತೋದೇ: ರೌಡಿ ಶೀಟರ್‌ಗಳಿಗೆ ಕಮಿಷನರ್ ಎಚ್ಚರಿಕೆ

Hubli News: ಹುಬ್ಬಳ್ಳಿ: ಗಣೇಶ ಹಾಗೂ ಈದ್ ಮಿಲಾದ್ ಹಬ್ಬ ಸಮೀಪ ಹಿನ್ನಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರೇಟ ವ್ಯಾಪ್ತಿಯ ರೌಡಿ ಶೀಟರ್‌ಗಳ ಪರೇಡ್ ನಡೆಸಿ, ರೌಡಿ ಶೀಟರ್‌ಗಳಿಗೆ ಖಡಕ್ ಎಚ್ಚರಿಕೆ ನೀಡಲಾಯಿತು.

ಹುಬ್ಬಳ್ಳಿ ನಗರದ ಹಳೇ ಸಿಎಆರ್ ಗ್ರೌಂಡನಲ್ಲಿ ಹುಬ್ಬಳ್ಳಿ ಹಾಗುಹ ಧಾರವಾಡ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ 50 ಕ್ಕೂ ಹೆಚ್ಚು ರೌಡಿ ಶೀಟರ್‌ಗಳನ್ನು ಗ್ರೌಂಡಗೆ ಕರೆ ತಂದು ಪರೇಡ್ ಮಾಡಲಾಯಿತು. ಈ ವೇಳೆ ಹುಬ್ಬಳ್ಳಿ ಧಾರವಾಡ ಪೊಲೀಸ್‌ ಕಮಿಷನರ್ ಎನ್ ಶಶಿಕುಮಾರವರು ರೌಡಿ ಶೀಟರ್‌ಗಳಿಗೆ ಯಾವುದೇ ದೊಂಬಿ ಗಲಾಟೆ, ಗುಂಪು ನಡೆಸಿದ್ದಲ್ಲಿ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದರು.

ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಹುಬ್ಬಳ್ಳಿ ಧಾರವಾಡ ಅವಳಿ ನಗರದಲ್ಲಿ ಗಣೇಶ ಹಬ್ಬವನ್ನು ವಿಜೃಂಭಣೆಯಿಂದ ಆಚರಣೆ ಮಾಡಕೊಂಡು ಬರಲಾಗುತ್ತಿದೆ. ಬೃಹತ್ ಗಾತ್ರದ ಗಣೇಶ ಮೂರ್ತಿಗಳನ್ನು ಪ್ರಮುಖ ವೃತಗಳಲ್ಲಿ ಸ್ಥಾಪನೆ ಮಾಡಲಾಗುತ್ತದೆ‌. ಜತೆಗೆ ಈದ್ ಮಿಲಾದ್ ಹಬ್ಬವು ಬಂದಿದೆ. ಈ ವಿಷಯವಾಗಿ ಈಗಾಗಲೇ ಶಾಂತಿ ಸಭೆ ಸೇರಿದಂತೆ ಗಣೇಶ ಮಂಡಳಿಗಳ ಸಭೆ ಮಾಡಿ ಬೇಡಿಕೆಗಳು ಬಗ್ಗೆ ತಿಳಿದುಕೊಳ್ಳಲಾಗಿದೆ.

ಜತೆಗೆ ಪೊಲೀಸ್‌ ಇಲಾಖೆಯ ಕ್ರಮಗಳ ಬಗ್ಗೆಯೂ ಮಂಡಳಿಗೆ ತಿಳಿ ಹೇಳಲಾಗಿದೆ‌. ಗಣೇಶೋತ್ಸವದ ಬಂದೋಬಸ್ತ್ ವಿಚಾರವಾಗಿ ಅವಳಿ ನಗರದಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಹೆಚ್ಚಿನ ಪೋರ್ಸ್ ಕೂಡಾ ಇಲ್ಲಿ ನಮ್ಮಗೆ ಬೆರಕಾಗುತ್ತದೆ‌. ಆರ್‌ಎ‌ಎಫ್ ಸೇರಿ ಸಿಆರ್‌ಪಿಎಫ್ ಸಿಬ್ಬಂದಿಗಳ ಬಗ್ಗೆ ನಮ್ಮ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಮನವಿ ಸಲ್ಲುಸಿದ್ದೇವೆ. ಹಿರಿಯ ಅಧಿಕಾರಿಗಳು ನಮ್ಮ ಮನವಿಗೆ ಸ್ಪಂದಿಸಿದ್ದಾರೆ‌ ಎಂದು ಕಮಿಷನರ್ ಹೇಳಿದ್ದಾರೆ.

ಶಾಂತಿ ಸುವ್ಯವಸ್ಥೆಯಿಂದ ಹಬ್ಬಗಳ ಆಚರಣೆಗೆ ಒತ್ತು ನೀಡುತ್ತೇವೆ. ಎಲ್ಲರೂ ಕಾನೂನು ಸುವ್ಯವಸ್ಥೆಯೊಂದಿಗೆ ಹಬ್ಬ ಆಚರಣೆ ಮಾಡಬೇಕು. ಗಣೇಶ ಮಂಡಳಿಗಳು ರಸ್ತೆ ತಗ್ಗು ಗುಂಡಿ, ಎಲೆಕ್ಟ್ರಿಸಿಟಿ ಕುರಿತು ಹೇಳಿದ್ದಾರೆ. ಸಂಬಂಧಿಸಿದ ಇಲಾಖೆಗಳ ಗಮನಕ್ಕೆ ವಿಷಯ ತರಲಾಗಿದೆ‌. ಗಣೇಶ ವಿಸರ್ಜನೆ ನಿಗದಿತ ಸ್ಥಳದಲ್ಲಿಯೂ ಸಿದ್ಧತೆಗಳು ನಡೆಯುತ್ತಿವೆ. ಎಲ್ಲರೂ ಸಹೋದರತ್ವ ಭಾವನೆಯೊಂದಿಗೆ ಹಬ್ಬ ಆಚರಿಸಿ ಎಲ್ಲರಿಗೂ ಮಾದರಿಯಾಗೋಣ ಎಂದು ಅವಳಿ ನಗರದ ಜನತೆಗೆ ಪೊಲೀಸ್‌ ಕಮಿಷನರ್ ಕರೆ ನೀಡಿದರು.

About The Author