Chanakya Neeti: ಚಾಣಕ್ಯರು ತಮ್ಮ ಚಾಣಕ್ಯ ನೀತಿಯಲ್ಲಿ ಹಲವು ವಿಷಯಗಳ ಬಗ್ಗೆ ಹೇಳಿದ್ದಾರೆ. ಅಂಥ ನೀತಿಯಲ್ಲಿ ಅತಿಥಿಯಾಗಿ ನಾವು ಬೇರೆಯವರ ಮನೆಗೆ ಹೋದಾಗ, ಯಾವ ರೀತಿ ನಡೆದುಕ“ಳ್ಳಬೇಕು ಅಂತಲೂ ಚಾಣಕ್ಯರು ಹೇಳಿದ್ದಾರೆ. ಆ ಬಗ್ಗೆ ತಿಳಿಯೋಣ ಬನ್ನಿ..
ಕರೆಯದೇ ಹೋಗಬೇಡಿ: ಯಾರದ್ದಾದರೂ ಮನೆಗೆ ಹೋಗುವಾಗ 1 ಅವರು ನಿಮ್ಮನ್ನು ಕರೆದಿರಬೇಕು. ಅಥವಾ ನಿಮಗೇನಾದರೂ ಮುಖ್ಯವಾಗಿರುವ ಕೆಲಸವಿರಬೇಕು. ಆದರೆ ಏನೇ ಕೆಲಸವಿದ್ದರೂ, ಬರಬಹುದಾ ಎಂದು ಕೇಳಿದಾಗ, ಬನ್ನಿ ಎಂದರೆ ಮಾತ್ರ ನೀವು ಅವರ ಮನೆಗೆ ಹೋಗಬಹುದು. ಅವರು ನಿಮ್ಮ ಬರುವಿಕೆಯನ್ನು ನಿರಾಕರಿಸಿದರೂ ನೀವು ಹೋದರೆ, ನಿಮ್ಮ ಗೌರವಕ್ಕೆ ಧಕ್ಕೆ ಬರುವುದು ಖಚಿತ.
ಹೆಚ್ಚು ದಿನ ನಿಲ್ಲಬೇಡಿ: ಯಾರದ್ದಾದರೂ ಮನೆಗೆ ಹೋದಾಗ, ಹೆಚ್ಚು ದಿನ ಅಲ್ಲಿರಬೇಡಿ. ಅಥವಾ ಹೆಚ್ಚು ಸಮಯ ಅಲ್ಲಿರಬೇಡಿ. ಹಾಗಿದ್ದಲ್ಲಿ ನಿಮ್ಮ ಮೇಲಿನ ಗೌರವ ಕಡಿಮೆಯಾಗುತ್ತದೆ. ಪರೋಕ್ಷವಾಗಿ ಅವರು ನಿಮ್ಮನ್ನು ಎದ್ದು ಹೋಗುವಂತೆ ಹಂಗಿಸಲೂಬಹುದು.
ಕಾರಣವಿಲ್ಲದೇ ಹೋಗಬೇಡಿ: ಯಾರ ಮನೆಗಾದರೂ ಹೋಗುವಾಗ, ಕಾರಣವಿಲ್ಲದೇ, ಸುಮ್ಮ ಸುಮ್ಮನೆ ಹೋಗಬೇಡಿ. ಕಾರಣವಿದ್ದರೆ, ಕೆಲಸವಿದ್ದರೆ ಮಾತ್ರ ಹೋಗಿ. ವಿನಾಕಾರಣ ನೀವು ಸುತ್ತಾಡಲು ಬೇರೆಯವರ ಮನೆಗೆ ಹೋದರೆ, ನಿಮ್ಮ ಬಗ್ಗೆ ತಪ್ಪು ಅಭಿಪ್ರಾಯ ಬರಬಹುದು.
ಹೋಗುವ ಮುನ್ನ ತಿಳಿಸಿರಿ: ಯಾರದ್ದಾದರೂ ಮನೆಗೆ ಹೋಗುವಾಗ, ನಾವು ಬರಲಿದ್ದೇವೆ ಅಂತ ಹೇಳಿ ಹೋಗಬೇಕು. ಏಕೆಂದರೆ, ನೀವು ಬರುತ್ತೀರಿ ಎಂದು ಅವರು ಸಿದ್ಧರಾಗಿರಬೇಕು. ನೀವು ನಿಮ್ಮ ಮನೆಗೆ ಬೇಕಾದರೆ ಸರ್ಪ್ರೈಸ್ ವಿಸಿಟ್ ನೀಡಬಹುದು. ಆದರೆ ಇತರರ ಮನೆಗೆ ಸರ್ಪೈಸ್ ಆಗಿ ಹೋದರೆ, ಅವರಿಗೆ ಇರುಸು ಮುರುಸಾಗಬಹುದು. ಹಾಗಾಗಿ ಹೋಗುವ ಮುನ್ನ ಹೇಳಿರಿ. ಮತ್ತು ಹೇಳಿದ ಸಮಯಕ್ಕೆ ಸರಿಯಾಗಿ ಹೋಗಿ. ಏಕೆಂದರೆ, ಅವರು ತಮ್ಮ ಕೆಲಸವನ್ನು ಬದಿಗಿರಿಸಿ, ನಿಮಗಾಗಿ ಕಾಯುತ್ತಿರುತ್ತಾರೆ. ನೀವು ಹೋಗದಿದ್ದಲ್ಲಿ, ಅವರ ಸಮಯ ವ್ಯರ್ಥ ಮಾಡಿದಂತಾಗುತ್ತದೆ.