Horoscope: ಹಿರಿಯರನ್ನು ಸದಾಕಾಲ ಗೌರವಿಸುವ ರಾಶಿಯವರು ಇವರು

Horoscope: ನಾವು ನಿಮಗೆ ಯಾವ ಯಾವ ರಾಶಿಯವರಲ್ಲಿ ಎಂತೆಂಥ ಗುಣವಿರುತ್ತದೆ ಎಂದು ಹೇಳಿದ್ದೆವು. ಅದೇ ರೀತಿ ಇಂದು ಹಿರಿಯರನ್ನು ಸದಾಕಾಲ ಗೌರವಿಸುವ ರಾಶಿಯವರ ಬಗ್ಗೆ ಹೇಳಲಿದ್ದೇವೆ.

ವೃಷಭ: ವೃಷಭ ರಾಶಿಯವರು ಹಿರಿಯರನ್ನು ಸದಾ ಗೌರವಿಸುತ್ತಾರೆ. ಬರೀ ಹಿರಿಯರಿಗೆ ಗೌರವ ನೀಡುವುದಲ್ಲದೇ, ಕಿರಿಯರಿಗೆ ಸಾಕಷ್ಟು ಪ್ರೀತಿ ನೀಡುತ್ತಾರೆ. ಇವರು ಬದುಕುವುದೇ ತಮ್ಮವರಿಗಾಗಿ. ಎಲ್ಲ ಸುಖಗಳನ್ನು ಬದಿಗಿರಿಸಿ ಬದುಕುವ ಇವರು ಭೂಮಿಯಷ್ಟು ತಾಳ್ಮೆ ಉಳ್ಳವರು.

ಸಿಂಹ: ನಾಯಕತ್ವದ ಗುಣವುಳ್ಳ ಸಿಂಹ ರಾಶಿಯವರು ಕೂಡ ಹಿರಿಯರನ್ನು ಗೌರವಿಸುವುದರಲ್ಲಿ ಸದಾ ಮುಂದು. ಅಲ್ಲದೇ ಕಷ್ಟದಲ್ಲಿರುವವರಿಗೆ ಸದಾ ಸಹಾಯಕ್ಕಾಗಿ ಮುಂದೆ ಬರುತ್ತಾರೆ.

ಕರ್ಕ: ಕರ್ಕ ರಾಶಿಯವರು ಮೃದು ಸ್ವಭಾವದವರು, ಕರುಣೆ ತೋರುವವರು. ಅದೇ ರೀತಿ ಹಿರಿಯರನ್ನು ಗೌರವಿಸುತ್ತಾರೆ ಮತ್ತು ಅವರ ಕಾಳಜಿ ಸದಾ ಮುಂದಿರುತ್ತಾರೆ.

ಧನು: ಧನು ರಾಶಿಯವರು ಆಲ್‌ ರೌಂಡರ್ , ಬುದ್ಧಿವಂತರು ಅಂತಲೇ ಹೇಳಬಹುದು. ಇವರ ಬುದ್ಧಿವಂತಿಕೆಯಿಂದಲೇ ಇವರು ಹೆಸರುವಾಸಿಯಾಗಿರುತ್ತಾರೆ. ಮತ್ತು ಇವರು ಹಿರಿಯರಿಗೆ ಹೆಚ್ಚು ಗೌರವ ತೋರುವವರಾಗಿರುತ್ತಾರೆ.

ಮೀನ:ಮೀನ ರಾಶಿಯವರು ಕೂಡ ಕರ್ಕ ರಾಶಿಯವರಂತೆ ಕಾಳಜಿಯ ಮನೋಭಾವ ಉಳ್ಳವರು. ಹಿರಿಯರನ್ನು ಹೆಚ್ಚು ಗೌರವಿಸುವವರು. ಎದುರಿನವರು ಬೈದರು, ಬೇಸರವಾದರೂ, ಅದನ್ನು ತೋರಿಸದೇ, ಏನೂ ಆಗೇ ಇಲ್ಲ ಎಂದು ಬದುಕುವವರು.

About The Author