Horoscope: ನೀವು ಪ್ರವಾಸ ಪ್ಲಾನ್ ಮಾಡಿದಾಗ, ನಿಮ್ಮ ಗ್ರೂಪ್‌ನಲ್ಲಿ ಯಾರಾದರೂ ಪ್ರವಾಸದ ಬಗ್ಗೆ ತುಂಬಾ ನಾಲೆಜ್ ಇರುವ ವ್ಯಕ್ತಿ ಇದ್ದೇ ಇರುತ್ತಾರೆ. ಪ್ರವಾಸಕ್ಕೆ ಹೋಗುವಾಗ, ಈ ದಾರಿಯಲ್ಲಿ ಹೋಗಬೇಕು. ಏನೇನು ತರಬೇಕು..? ಎಲ್ಲಿ ಉಳಿಯಬೇಕು ಎಲ್ಲವೂ ಅವರಿಗೆ ತಿಳಿದಿರುತ್ತದೆ. ಅಂಥ ರಾಶಿಗಳ ಬಗ್ಗೆ ನಾವಿಂದು ಹೇಳಲಿದ್ದೇವೆ.
ಧನು ರಾಶಿ: ಧನು ರಾಶಿಯವರು ಪ್ರವಾಸ ಮಾಡೋದ್ರಲ್ಲಿ ನಂಬರ್ 1 ಅಂತಾನೇ ಹೇಳಬಹುದು. ಪ್ರವಾಸಿ ತಾಣಗಳ ಬಗ್ಗೆ ಚೆನ್ನಾಗಿ ಮಾಹಿತಿ ಹುಡುಕಿ ತೆಗೆದು, ಅದರ ಬಗ್ಗೆ ತಿಳಿದು, ತಮ್ಮ ಜತೆ ಬರುವ ಜನರಿಗೆ ಗೈಡ್ ಮಾಡುವ ಅರ್ಹತೆ ಇವರಿಗಿರುತ್ತದೆ. ಬುದ್ಧಿವಂತರು, ತಿಳುವಳಿಕೆ ಉಳ್ಳವರು ಇವರಾಗಿದ್ದು, ನೂತನ ವಿಷಯ ತಿಳಿಯುವ ಪ್ರಯತ್ನ ಸದಾಕಾಲ ಇವರದ್ದಾಗಿರುತ್ತದೆ.
ತುಲಾ ರಾಶಿ: ತುಲಾ ರಾಶಿಯವರು ಪ್ರವಾಸ ಪ್ರಿಯರು. ಇವರಿಗೆ ಪ್ರತೀ ಕ್ಷಣವನ್ನು ಎಂಜಾಯ್ ಮಾಡುವ, ಪ್ರವಾಸಿ ತಾಣಗಳಲ್ಲಿ ಸಿಗುವ ಆಹಾರ ಸೇವಿಸುವ ಗುಣವಿರುತ್ತದೆ. ಹಾಗಾಗಿ ಪ್ರವಾಸವನ್ನು ಸಖತ್ ಎಂಜಾಯ್ ಮಾಡ್ತಾರೆ.
ಕರ್ಕ ರಾಶಿ: ಕರ್ಕ ರಾಶಿಯವರು ಪ್ರವಾಸ ಪ್ರಿಯರು. ಆದರೆ ಪ್ರವಾಸದ ವೇಳೆ ಎಂಜಾಯ್ ಮಾಡೋದು ಕಡಿಮೆ. ಆದರೆ ಇವರಿಗೆ ಎಲ್ಲೆಲ್ಲಿ ಹೋಗಬಹುದು ಅನ್ನೋ ಐಡಿಯಾ ಇರುತ್ತದೆ. ಅದಕ್ಕಾಗಿ ಸುಮಾರು ಹುಡುಕಾಟ ನಡೆಸಿ, ವಿಷಯ ಕಲೆಕ್ಟ್ ಮಾಡಿರುತ್ತಾರೆ.