- Advertisement -
Chanakya Neeti: ಚಾಣಕ್ಯರು ತಮ್ಮ ಚಾಣಕ್ಯ ನೀತಿಯಲ್ಲಿ ಹಲವು ವಿಷಯಗಳ ಬಗ್ಗೆ ವಿವರಿಸಿದ್ದಾರೆ. ಮದುವೆ, ಜೀವನ, ಆರ್ಥಿಕ ಪರಿಸ್ಥಿತಿ ಹೀಗೆ ಎಲ್ಲದರ ಬಗ್ಗೆ ವಿವರಿಸಿದ್ದಾರೆ. ಅದೇ ರೀತಿ ಚಾಣಕ್ಯರು ನಾವು ಯಾವ 3 ಗುಣಗಳನ್ನು ಅಳವಡಿಸಿಕ“ಂಡಾಗ ನಮಗೆ ಗೌರವ ಸಿಗುತ್ತದೆ ಅಂತಲೂ ಹೇಳಿದ್ದಾರೆ. ಹಾಗಾದ್ರೆ ಯಾವುದು ಆ 3 ಗುಣಗಳು ಅಂತಾ ತಿಳಿಯೋಣ ಬನ್ನಿ..
- ಮೃದು ಸ್ವಭಾವ. ಮಾತಿನಲ್ಲಿ ಮೃದುತ್ವ ಇದ್ದಾ ಮಾತ್ರ ಇತರರು ನಿಮ್ಮನ್ನು ಗೌರವಿಸುತ್ತಾರೆ. ಹಾಗಾಗಿ ಮಾತಿನಲ್ಲಿ ಮೃದುತ್ವ, ಸ್ಪಷ್ಟತೆ ಇರಲಿ. ಆಗ ಜನ ನಿಮ್ಮ ಮಾತು ಎಷ್ಟು ಅರ್ಥಪೂರ್ಣ, ಎಷ್ಟು ಚೆಂದವೆಂದು ಮೆಚ್ಚುತ್ತಾರೆ. ಹಾಗಾಗಿ ಮಾತು ಸರಿಯಾಗಿದ್ದಾಗ ಮಾತ್ರ ನೀವು ಗೌರವ ಪಡೆಯಲು ಸಾಧ್ಯ. ಅದು ಮನೆಯಲ್ಲೇ ಆಗಿರಬಹುದು, ಆಚೆಯೂ ಆಗಿರಬಹುದು.
- ಆಹ್ವಾನವಿಲ್ಲದೇ ಎಲ್ಲಿಯೂ ಹೋಗಬೇಡಿ: ಅದು ಯಾರದ್ದಾದರೂ ಮನೆ ಇರಬಹುದು. ಮದುವೆ, ಮುಂಜಿ, ಗೃಹಪ್ರವೇಶ ಅಥವಾ ಯಾವುದೇ ಕಾರ್ಯಕ್ರಮ ಹೀಗೆ ಎಲ್ಲಿಯೇ ಆಗಲಿ, ಕರೆಯದೇ ಹೋಗಲೇಬೇಡಿ. ಆಗಲೇ ನಿಮ್ಮ ಗೌರವ ಹೆಚ್ಚುತ್ತದೆ. ಕರೆಯದ ಕಾರ್ಯಕ್ರಮಕ್ಕೆ ಮಿತ್ರರ ಜತೆಯೋ, ಸಂಬಂಧಿಕರ ಜತೆಯೋ ಪದೇ ಪದೇ ಹೋದರೆ, ನಿಮಗೆ ಗೌರವ ಕಡಿಮೆಯಾಗುತ್ತದೆ.
- ಗೌರವ ನೀಡಿ: ಜೀವನದಲ್ಲಿ ನಿಮಗೆ ಗೌರವ ಬೇಕೆಂದಲ್ಲಿ, ನೀವು ಬೇರೆಯವರಿಗೂ ಗೌರವಿಸಬೇಕು. ಇತರರನ್ನು ನೀವು ಗೌರವಿಸಿದರೆ, ನಿಮಗೂ ಗೌರವ ಸಿಗುತ್ತದೆ. ಹಾಗಾಗಿ ಗೌರವಿಸಿ, ಗೌರವ ಪಡೆಯಿರಿ.
- Advertisement -