Monday, October 6, 2025

Latest Posts

Horoscope: ಈ ರಾಶಿಯವರನ್ನು ಅವಮಾನಿಸಿದರೆ ಜೀವನಪೂರ್ತಿ ನಿಮ್ಮನ್ನು ದೂರವಿಡುತ್ತಾರೆ.

- Advertisement -

Horoscope: ಕೆಲವು ರಾಶಿಯವರು ಯಾವಾಗಲೂ ಖುಷಿಯಾಗಿರುತ್ತಾರೆ. ಇನ್ನು ಕೆಲವರು ಸದಾ ದುಃಖದಲ್ಲಿರುತ್ತಾರೆ. ಮತ್ತೆ ಕೆಲವರು ಅತೃಪ್ತರಾಗಿರುತ್ತಾರೆ. ಹೀಗೆ ಕೆಲವರದ್ದು ಕೆಲವು ಸ್ವಭಾವ. ಅದೇ ರೀತಿ ಕೆಲ ರಾಶಿಯವರನ್ನು ನೀವೇನಾದರೂ ಅವಮಾನಿಸಿದರೆ, ಅವರು ನಿಮ್ಮನ್ನೆಂದಿಗೂ ಹತ್ತಿರ ಸೇರಿಸುವುದಿಲ್ಲ. ಹಾಗಾದ್ರೆ ಯಾವ ರಾಶಿಯವರು ಇವರು ಅಂತಾ ತಿಳಿಯೋಣ ಬನ್ನಿ..

ವೃಷಭ ರಾಶಿ: ತಾಳ್ಮೆ ಸ್ವಭಾವವುಳ್ಳ ರಾಶಿ ಅಂದ್ರೆ, ಅದು ವೃಷಭ ರಾಶಿಯವರದ್ದು. ಆದರೆ ಇವರು ತಾಳ್ಮೆ ಕಳೆದುಕ“ಂಡರೆ, ಮತ್ತೆ ನಿಮ್ಮನ್ನು ಮನಸಾರೆ ಎಂದಿಗೂ ಪ್ರೀತಿಸುವುದಿಲ್ಲ. ಹಾಗಾಗಿ ನಿಮ್ಮ ಪ್ರೀತಿ ಪಾತ್ರರು ವೃಷಭ ರಾಶಿಯವರಾಗಿದ್ದರೆ, ಅವರ ಮನಸ್ಸನ್ನು ಎಂದಿಗೂ ನೋಯಿಸಬೇಡಿ. ಅವರನ್ನು ಎಂದಿಗೂ ಅವಮಾನಿಸಬೇಡಿ.

ಕಟಕ ರಾಶಿ: ಕಟಕ ರಾಶಿಯವರು ಎಲ್ಲರನ್ನೂ ತಮ್ಮವರೆಂದೇ ಭಾವಿಸುತ್ತಾರೆ. ಸಹಾಯದ ಮನೋಭಾವ ಉಳ್ಳವರು. ಭಾವನಾತ್ಮಕ ಜೀವಿಗಳು. ಆದರೆ ಇವರ ಮನಸ್ಸಿಗೆ ನೀವು ಸ್ವಲ್ಪ ನೋವು ಮಾಡಿದರೂ ಕೂಡ, ಇವರು ನಿಮ್ಮನ್ನು ದೂರವಿಡುತ್ತಾರೆ.

ವೃಶ್ಚಿಕ ರಾಶಿ: ವೃಶ್ಚಿಕ ರಾಶಿಯವರು ಗಂಭೀರ ಸ್ವಭಾವದವರು. ಸ್ವಲ್ಪ ಮಾತು ತಪ್ಪಿದರೂ, ಅವರ ಕೋಪಕ್ಕೆ ಗುರಿಯಾಗಬೇಕಾಗುತ್ತದೆ. ಅಲ್ಲದೇ, ಅವರು ಮುಖ ನೋಡಿಯೇ, ಎದುರಿನವರು ಎಂಥವರು ಅಂತಾ ಹೇಳಿಬಿಡುತ್ತಾರೆ. ಹಾಗಾಗಿ ಇವರ ಬಳಿ ಸರಿಯಾಗಿ ವರ್ತಿಸಬೇಕು. ನಿಮ್ಮ ವರ್ತನೆಯಲ್ಲಿ ಏರುಪೇರಾದರೂ, ಅವರು ನಿಮ್ಮನ್ನು ದೂರವಿಡುತ್ತಾರೆ.

ಧನು ರಾಶಿ: ಧನು ರಾಶಿಯವರು ತುಂಬ ಸೂಕ್ಷ್ಮ ಸ್ವಭಾವದವರು. ಅವರು ಉತ್ತಮ ಸ್ವಬಾವದವರೂ ಹೌದು. ಆದರೆ ಅವರನ್ನು ನೀವು ತಮಾಷೆ ಮಾಡಿ ಅಥವಾ ಯಾವುದೇ ರೀತಿಯಿಂದ ಅವಮಾನಿಸಿದರೂ, ಅವರು ನಿಮ್ಮನ್ನು ದೂರವಿಡುತ್ತಾರೆ.

- Advertisement -

Latest Posts

Don't Miss