Sandalwood: ನಟಿ ಹರಿಣಿ ಶ್ರೀಕಾಂತ್ ಅವರು ತಮ್ಮ ವೃತ್ತಿ ಜೀವನದ ಬಗ್ಗೆ ಮಾತನಾಡಿದ್ದು, ತಮ್ಮ ಪತಿ ಎಷ್ಟು ಬೆಂಬಲಿಸುತ್ತಾರೆ, ಎಷ್ಟು ಕಾಳಜಿ ಮಾಡುತ್ತಾರೆ ಅನ್ನೋ ಬಗ್ಗೆ ಮಾತನಾಡಿದ್ದಾರೆ.
ಮುಂಚೆ ಎಲ್ಲ ನಾನು ಏನೇ ಹೇಳಿಕ“ಳ್ಳುವುದಿದ್ದರೂ ನನ್ನ ಅಮ್ಮನ ಬಳಿಯೇ ಹೇಳುತ್ತಿದ್ದೆ. ಅದೇ ರೀತಿ ಇದೀಗ ನನ್ನ ಎಲ್ಲ ಪ್ರಾಬ್ಲಂಸ್, ಖುಷಿ ಎಲ್ಲವನ್ನು ನಾನು ನನ್ನ ಗಂಡನ ಬಳಿ ಹೇಳುತ್ತೇನೆ. ಕಂಪ್ಲೀಟ್ ಆಗಿ ಪತಿ ಶ್ರೀಕಾಂತ್ ಅವರು ಅಮ್ಮನ ಸ್ಥಾನವನ್ನು ತುಂಬಿದ್ದಾರೆ ಅಂತಾರೆ ಹರಿಣಿ.
ಶ್ರೀಕಾಂತ್ ಅವರು ಬೇರೆ ಊರಿನಲ್ಲಿ ಕೆಲಸ ಮಾಡಬೇಕಾಗಿದ್ದು, ಹರಿಣಿಯವರು ಬೆಂಗಳೂರಿನಲ್ಲಿ ಇರುತ್ತಾರೆ. ಶ್ರೀಕಾಂತ್ ಅವರು ಆಗಾಗ ಮನೆಗೆ ಬಂದು, ಮಡದಿ ಮಕ್ಕಳ ಜತೆ ಸಮಯ ಕಳೆಯುತ್ತಾರೆ. ಹಾಗಾಗಿ ನಾನು ಶ್ರೀಕಾಂತ್ ಅವರನ್ನು ತುಂಬಾ ಮಿಸ್ ಮಾಡಿಕ“ಳ್ಳೀನಿ ಅಂತಾರೆ ಹರಿಣಿ.
ನಮ್ಮ ಫ್ಯಾಮಿಲಿ, ಹೆಲ್ತ್, ದೇವರು ಇವರು ಇದ್ದರೆ ಮಾತ್ರ ನಾವು ಜೀವನದಲ್ಲಿ ಏನಾದ್ರೂ ಸಾಧಿಸೋಕ್ಕೆ ಸಾಧ್ಯ ಎಂದಿರುವ ಹರಿಣಿಗೆ ತಾನು ಸೆಲೆಬ್ರಿಟಿ ಅನ್ನೋ ಅಹಂ ಇಲ್ಲ. ಕೆಲ ಸಿನಿಮಾ, ಸಿರಿಯಲ್‌ನಲ್ಲಿ ನಟಿಸಿಬಿಟ್ರೆ, ತಾನೇ ಸ್ಟಾರ್ ಅನ್ನೋ ರೇಂಜಿಗೆ ಓಡಾಡೋ, ಎಲ್ ಬೋರ್ಡ್‌ಗಳಿಗಿಂತಲೂ, 30 ವರ್ಷದ ಕಲಾಪಯಣದಲ್ಲಿ ಸಾಗುತ್ತಿರುವ ಹರಿಣಿ ತುಂಬಾ ಸಿಂಪಲ್.
ನಾನು ಮೆಟ್ರೋದಲ್ಲಿ ಓಡಾಡ್ತೀನಿ. ಯಾರಾದರೂ ಗುರುತು ಹಿಡಿದು ಮಾತಾಡಿಸ್ತಾರೆ. ಫೋಟೋ ಕೇಳ್ತಾರೆ. ಅದೆಲ್ಲ ಮಾಮೂಲಿ. ಅದೇನು ಸಮಸ್ಯೆ ಅಲ್ಲ ಅಂತಾರೆ ಹರಿಣಿ. ಅವರ ಪೂರ್ತಿ ಸಂದರ್ಶನಕ್ಕಾಗಿ ಈ ವೀಡಿಯೋ ನೋಡಿ.




