Tuesday, October 14, 2025

Latest Posts

ಮಣಿಪುರ ಶಾಂತಿಯ ಭರವಸೆ ಮತ್ತೇ ಭಂಗ!

- Advertisement -

ಜನಾಂಗೀಯ ಸಂಘರ್ಷಗಳಿಂದ ಬಳಲುತ್ತಿರುವ ಮಣಿಪುರದಲ್ಲಿ ಶಾಂತಿ ಸ್ಥಾಪಿಸಲು ಕೇಂದ್ರ ಸರ್ಕಾರ ಮಾಡುತ್ತಿದ್ದ ಪ್ರಯತ್ನಕ್ಕೆ ಮತ್ತೆ ಹಿನ್ನಡೆಯಾಗಿದೆ. ಇತ್ತೀಚೆಗಷ್ಟೇ ಶುಕ್ರವಾರ, ಕುಕಿ-ಜೋ ಸಮುದಾಯದೊಂದಿಗೆ ಕೇಂದ್ರ ಸರ್ಕಾರ ತ್ರಿಪಕ್ಷೀಯ ಒಪ್ಪಂದಕ್ಕೆ ಸಹಿ ಹಾಕಿತ್ತು. ಆದರೆ ಆ ಒಪ್ಪಂದಕ್ಕೆ ಈಗ ಮೈತೇಯಿ ಮತ್ತು ಕುಕಿ ಸಮುದಾಯಗಳೆರಡೂ ತೀವ್ರ ವಿರೋಧ ವ್ಯಕ್ತಪಡಿಸಿವೆ.

ಕುಕಿ ಝೇ ಕೌನ್ಸಿಲ್ ಸಮಿತಿಯು ರಾಷ್ಟ್ರೀಯ ಹೆದ್ದಾರಿ-2ನ್ನು ಸಂಚಾರಕ್ಕೆ ಮುಕ್ತಗೊಳಿಸಬೇಕು ಎಂಬುದು ಕೇಂದ್ರ ಸರ್ಕಾರ, ಮಣಿಪುರ ಸರ್ಕಾರ ಹಾಗೂ ಕುಕಿ-ಜೋ ಸಮಿತಿಗಳ ನಡುವಿನ ಒಪ್ಪಂದದ ಪ್ರಮುಖ ಅಂಶವಾಗಿತ್ತು. ಆದರೆ, ಕುಕಿ-ಜೋ ಸಮುದಾಯದ ಪ್ರಭಾವಿ ಗ್ರಾಮ ಸ್ವಯಂಸೇವಕ ಸಮನ್ವಯ ಸಮಿತಿ ಮಾತ್ರ ಎನ್‌ಚ್-2 ಅನ್ನು ಸಂಚಾರಕ್ಕೆ ಮುಕ್ತಗೊಳಿಸುವುದು ಅಸಂಗತ ಎಂದು ಹೇಳಿದೆ. ಕುಕಿ-ಜೋ, ಪ್ರದೇಶಕ್ಕೆ ಯಾವುದೇ ಕಾರಣಕ್ಕೂ ಮೈತೇಯಿ ಜನಾಂಗದವರ ಪ್ರವೇಶಕ್ಕೆ ಅವಕಾಶ ನೀಡಲ್ಲ ಎಂದು ತಿಳಿಸಿದೆ.

ಈ ನಡುವೆ, ಇಂಫಾಲ್ ಕಣಿವೆಯ ಮೈತೇಯಿಗಳ ಪರವಾಗಿರುವ ಮಣಿಪುರ ಸಮಗ್ರತೆ ಕುರಿತ ಸಮನ್ವಯ ಸಮಿತಿಯು ಕುಕಿ-ಜೋ ಸಮುದಾಯದ ಜತೆ ಶುಕ್ರವಾರ ನಡೆಸಿದ ತ್ರಿಪಕ್ಷೀಯ ಒಪ್ಪಂದಕ್ಕೂ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಇದೊಂದು ಜನವಿರೋಧಿ ನಡೆ ಎಂದು ಆರೋಪಿಸಿದೆ. ಈ ಒಪ್ಪಂದದ ಮೂಲಕ ಚಿನ್-ಕುಕಿ ಉಗ್ರ ಗುಂಪುಗಳನ್ನು ಕಾನೂನುಬದ್ಧಗೊಳಿಸಿದಂತಾಗಿದೆ ಎಂದು ದೂರಿದೆ.

ಪ್ರಧಾನಿ ನರೇಂದ್ರ ಮೋದಿಯವರು ಸೆಪ್ಟೆಂಬರ್ 2ನೇ ವಾರ ಮಣಿಪುರಕ್ಕೆ ಭೇಟಿ ನೀಡುವ ನಿರೀಕ್ಷೆ ಇದೆ. ಇದಕ್ಕೂ ಮೊದಲು ಕುಕಿ ಸಮುದಾಯದ ಜತೆಗೆ ನಡೆದ ಒಪ್ಪಂದದಿಂದ ಅಲ್ಲಿ ಶಾಂತಿಯ ಹೊಸ ಭರವಸೆ ಮೂಡಿತ್ತು.

ವರದಿ:ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss