Sunday, November 16, 2025

Latest Posts

ಅಘೋರ್ ಅಘೋರಿ ವ್ಯತ್ಯಾಸ? ಕೋಪ ಬಂದ್ರೆ ನೋಡೋಕಾಗಲ್ಲ!: Dr Agarbhanath Aghor Bhairavi Podcast

- Advertisement -

Webnews: ಅಘೋರರಾಗಿರುವ ಡಾ.ಅಗರ್‌ಭನತ್ ಅಘೋರ ಭೈರವಿ ಅವರು ಕರ್ನಾಟಕ ಟಿವಿ ಸಂದರ್ಶನದಲ್ಲಿ ಮಾತನಾಡಿದ್ದು, ಅಘೋರಿಗೂ ಅಘೋರ್‌ಗೂ ಇರುವ ವ್ಯತ್ಯಾಸದ ಬಗ್ಗೆ ತಿಳಿಸಿದ್ದಾರೆ.

ಶಿವನ ಭಕ್ತರಾದ ನಾಗಾಸಾಧುಗಳು, ಸಾಧನೆ ಮಾಡಿ ಮಾಡಿ, ಅಘೋರ ಸಾಧನೆಗೆ ಇಳಿಯುತ್ತಾರೆ. ಈ ವೇಳೆ ಅವರು 1 ದೇವರನ್ನು ಮಾತ್ರ ಸಾಧನೆ ಮಾಡಬೇಕು. ಅವರ ಮನಸ್ಸಿನಲ್ಲಿ ಬೇರೆ ಯಾವ ಭಾವನೆಯೂ ಇರಬಾರದು. ಲೋಭ, ಮೋಹ, ಮದ, ಮತ್ಸರ ಇವೆಲ್ಲವನ್ನೂ ಬಿಟ್ಟು ದೇವರ ಸ್ಮರಣೆ ಅಷ್ಟೇ ಇವರ ಜೀವನವಾಗಿರುತ್ತದೆ. ಅಲ್ಲದೇ ಹೀಗೆ ಸಾಧನೆ ಮಾಡುವ ವೇಳೆ ಇವರು ಸಸ್ಯಹಾರಿಯಾಗಿರಬೇಕು.

ಇನ್ನು ಅಘೋರಿ ಮತ್ತು ಅಘೋರರಲ್ಲಿ ಇರುವ ವ್ಯತ್ಯಾಸವೇನು ಎಂದು ಕೇಳಿದಾಗ, ಅಘೋರಿ ಎಂದರೆ ಶಿವನಿಗಾಗಿ ತಪಸ್ಸು ಮಾಡುವವರು. ಅಘೋರ ಎಂದರೆ, ಶಿವನಲ್ಲಿ ಲೀನರಾದವರು ಎನ್ನುತ್ತಾರೆ ಡಾ.ಅಗರ್‌ಭನತ್ ಅಘೋರ ಭೈರವಿ.

ಇನ್ನು ನಗಾಸಾಧುಗಳಿಗೆ, ಅಘೋರಿಗಳಿಗೆ ಭಾವನೆ ಅನ್ನೋದು ಇರೋದಿಲ್ಲ. ಇದು ಸತ್ಯಾನಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಮಗೆ ದುರಾಸೆ, ಅಪೇಕ್ಷೆ ಅನ್ನೋದು ಇರೋದಿಲ್ಲ. ಯಾವುದರ ಬಗ್ಗೆಯೂ ಹೆಚ್ಚು ಕುತೂಹಲವಿರುವುದಿಲ್ಲ. ಯಾರಿಂದ ಏನನ್ನೂ ನಿರೀಕ್ಷಿಸುವುದಿಲ್ಲ. ಅಲ್ಲದೇ ನಾಗಾಸಾಧು, ಅಘೋರಿ, ಅಘೋರಗಳಿಗೆ ಹೆಚ್ಚು ಕೋಪ ಬರೋದಿಲ್ಲ. ಆದರೆ ಕೋಪ ಬಂದ್ರೆ, ನೋಡೋಕ್ಕಾಗಲ್ಲ ಅಂತಾರೆ ಡಾ.ಅಗರ್‌ಭನತ್ ಅಘೋರ ಭೈರವಿ. ಇಂಥ ಕುತೂಹಲಕಾರಿ ವಿಷಯ ತಿಳಿಯಲು ವೀಡಿಯೋ ನೋಡಿ.

- Advertisement -

Latest Posts

Don't Miss