- Advertisement -
Bidar News: ಬೀದರ್: ನಿನ್ನೆ ಚಂದ್ರ ಗ್ರಹಣವಿದ್ದ ಹಿನ್ನೆಲೆ, ಬೀದರ್ನ ಬಿವಿಬಿ ಕಾಲೇಜು ಆವರಣದಲ್ಲಿರುವ ಸೈನಿಕ ಶಾಲೆಯಲ್ಲಿ ಸೈನಿಕ ಮಕ್ಕಳಿಗೆ ವೈಚಾರಿಕತೆಯ ಪಾಠ ಮತ್ತು ಗ್ರಹಣ ವೀಕ್ಷಣೆಗೆ ವ್ಯವಸ್ಥೆ ಇತ್ತು.
ಚಂದ್ರಗ್ರಹಣ ವೀಕ್ಷಿಸಲು ಆವರಣದಲ್ಲಿ 2 ದೂರದರ್ಶಕ, 2 ಬೈನಾಕ್ಯೂಲರ್ ವ್ಯವಸ್ಥೆ ಮಾಡಲಾಗಿತ್ತು. ಅಲ್ಲದೇ ಮಕ್ಕಳಿಗೆ ಹಾಲು ಮತ್ತು ಬಾಳೆಹಣ್ಣು ನೀಡಿ, ಗ್ರಹಣ ಎಂದರೇನು ಎಂದು ವಿವರಿಸಲಾಯಿತು.
ಅಲ್ಲದೇ ಚಂದ್ರಗ್ರಹಣ ಮೌಢ್ಯತೆ ಆಚರಿಸಬಾರದು. ನಭೋ ಮಂಡಲದ ಕೌತುಕವನ್ನ ಕಣ್ತುಂಬಿಕೊಳ್ಳಬೇಕು ಎಂದು ಮಕ್ಕಳಿಗೆ ಶಿಕ್ಷಕರು ಪಾಠ ಮಾಡಿದರು. ಇದೆ ವೇಳೆ ಶಿಕ್ಷಕರು ಮಕ್ಕಳಿಗೆ ವೈಚಾರಿಕತೆಯ ಪ್ರತಿಜ್ಞೆ ಬೋಧಿಸಿದರು.
- Advertisement -

