ರುದ್ರಾಕ್ಷಿ ಅಂದ್ರೆ ರುದ್ರನ ಕಣ್ಣು. ಹಣೆಯ ಮೇಲೆ ಮೂಡಿದ ಶಿವನ ಮೂರನೇ ಕಣ್ಣನ್ನ ರುದ್ರಾಕ್ಷಿ ಎಂದು ಕರೆಯಲಾಗುತ್ತದೆ. ಇಂಥ ರುದ್ರಾಕ್ಷಿಗೆ ತನ್ನದೇ ಆದ ಮಹತ್ವವಿದೆ. ಹಾಗಾಗಿ ರುದ್ರಾಕ್ಷಿಯನ್ನ ಮನಸ್ಸಿಗೆ ಬಂದ ಹಾಗೆ ಬಳಸುವಂತಿಲ್ಲ. ಹಾಗಾದ್ರೆ ರುದ್ರಾಕ್ಷಿ ಬಳಸುವಾಗ ಅನುಸರಿಸುವ ಕ್ರಮಗಳ ಬಗ್ಗೆ ಕೆಲ ಮಾಹಿತಿಯನ್ನ ನೀಡಲಿದ್ದೇವೆ.

ರುದ್ರಾಕ್ಷಿಯಲ್ಲಿ ಏಕಮುಖಿ ದ್ವಿಮುಖಿ ಪಂಚಮುಖಿ ಎಂಬ ಪ್ರಕಾರಗಳಿದೆ. ಇಂದಿನ ಕಾಲದಲ್ಲಿ ಜನ ಎಲ್ಲರದರಲ್ಲೂ ಫ್ಯಾಷನ್ ಮಾಡುವುದನ್ನ ಕಂಡುಕೊಂಡಿದ್ದಾರೆ. ಅಂತೆಯೇ ರುದ್ರಾಕ್ಷಿ ಹಾಕಿಕೊಳ್ಳುವುದು ಕೂಡ ಫ್ಯಾಷನ್ ಆಗಿದೆ. ಆದ್ರೆ ನಿಜವಾದ ರುದ್ರಾಕ್ಷಿಯನ್ನ ಎಲ್ಲರೂ ಬಳಸಕೂಡದು. ಬಳಸಿದರೂ ಮಡಿ ಮೈಲಿಗೆ ಪಾಲಿಸಬೇಕು.
ರುದ್ರಾಕ್ಷಿ ಧರಿಸುವ ಮುನ್ನ ಪಂಚಗವ್ಯದಿಂದ ರುದ್ರಾಕ್ಷಿಯನ್ನ ಅಭಿಷೇಕ ಮಾಡಿ ಧರಿಸಬೇಕು. ಧರಿಸಿದ ಬಳಿಕ ಮಂತ್ರಪಠಣೆ ಮಾಡಬೇಕು. ರುದ್ರಾಕ್ಷಿಗೆ ಮುಟ್ಟಾದ ಹೆಣ್ಣು ಮಕ್ಕಳ ಸ್ಪರ್ಶವಾಗಬಾರದು. ಸೂತಕದಲ್ಲಿರುವವರು ರುದ್ರಾಕ್ಷಿ ಧರಿಸಬಾರದು ಮತ್ತು ರುದ್ರಾಕ್ಷಿ ಧರಿಸಿದವರನ್ನು ಮುಟ್ಟಬಾರದು.
ಇನ್ನು ಹೆಣ್ಣು ಮಕ್ಕಳು ಋತುಮತಿಯಾಗುತ್ತಾರೆಂಬ ಕಾರಣಕ್ಕೆ ರುದ್ರ ಪಠಿಸ ಬಾರದು, ರುದ್ರಾಕ್ಷಿ ಧರಿಸಬಾರದೆಂಬ ನಿಯಮವಿದೆ. ಅದಕ್ಕಾಗಿ ರುದ್ರಾಕ್ಷಿಯನ್ನ ಧರಿಸುವ ಬದಲು ದೇವರ ಕೋಣೆಯಲ್ಲಿಟ್ಟು, ಮಡಿ ಮೈಲಿಗೆ ಪಾಲಿಸಿ ಪೂಜೆ ಮಾಡಿದರೆ ಉತ್ತಮ. ಇನ್ನು ರುದ್ರಾಕ್ಷಿ ಧರಿಸುವವರಾಗಿದ್ದರೆ ನಿಮ್ಮ ಗುರುಗಳ ಬಳಿ ಸಲಹೆ ಪಡೆದು ತದನಂತರ ರುದ್ರಾಕ್ಷಿ ಧರಿಸಿ. ಏಕೆಂದರೆ ಕೆಲವರ ರಾಶಿಗೆ ರುದ್ರಾಕ್ಷಿ ಸೂಕ್ತವಿರುವುದಿಲ್ಲ.

ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶುಕ್ಲಾಚಾರ್ಯು ಗುರೂಜಿ, ದೂರವಾಣಿ ಸಂಖ್ಯೆ: 9886868111
ನಿಮ್ಮ ಸಮಸ್ಯೆಗಳಾದ ಸ್ತ್ರೀ ಪುರುಷ ವಶೀಕರಣ, ಗಂಡ ಹೆಂಡತಿ ಸಮಸ್ಯೆ, ಸಾಲಬಾಧೆ, ವ್ಯಾಪಾರ, ಶತ್ರುನಾಶ, ಮಾಟಮಂತ್ರ, ಜನವಶ, ಧನವಶ ಯಾವುದೇ ಸಮಸ್ಯೆಗಳಿದ್ದರೂ ಕೇವಲ ಮೂರು ದಿನಗಳಲ್ಲಿ ಪರಿಹಾರ..




