Finance Knowledge: ಮುಂಚೆ ಎಲ್ಲ ಸೇವಿಂಗ್ಸ್ ಅಂದ್ರೆ ಚಿನ್ನ, ಎಫ್‌ಡಿ, ಆರ್‌ಡಿ ಅಷ್ಟೇ ಇತ್ತು. ಆದರೆ ಈಗ ಶೇರ್ಸ್, ಮ್ಯೂಚುವಲ್ ಫಂಡ್, ಗೋಲ್ಡ್ ಇಟಿಎಫ್, ಸಿಲ್ವರ್ ಇಟಿಎಫ್ ಹೀಗೆ ಹಲವು ಆಯ್ಕೆಗಳಿದೆ. ಹಾಗಾದ್ರೆ ಇನ್ಶೂರೆನ್ಸ್ ಮತ್ತು ಮ್ಯೂಚುವಲ್ ಫಂಡ್ ಉಪಯುಕ್ತವಾ ಅಲ್ಲವಾ ಎಂದು ಹಣಕಾಸು ತಜ್ಞ ಹೇಮಂತ್ ಕುಮಾರ್ ವಿವರಿಸಿದ್ದಾರೆ.
ಇನ್ಶೂರೆನ್ಸ್‌ನಲ್ಲಿ 2 ವಿಧಗಳಿದೆ 1 ಹೆಲ್ತ್ ಇನ್ಶೂರೆನ್ಸ್, 2ಯದ್ದು ಲೈಫ್ ಇನ್ಶೂರೆನ್ಸ್. ಆರೋಗ್ಯ ಹಾಳಾದಾಗ ಉಪಯೋಗಕ್ಕೆ ಬರೋದು ಹೆಲ್ತ್ ಇನ್ಶೂರೆನ್ಸ್. ಮನೆಯ ಯಜಮಾನನ ಜೀವಕ್ಕೆ ಆಪತ್ತು ಬಂದರೆ, ಉಪಯೋಗಕ್ಕೆ ಬರೋದು ಲೈಫ್ ಇನ್ಶೂರೆನ್ಸ್. ಹಾಗಾಗಿ ನೀವು ಯಾವುದೇ ಹೂಡಿಕೆ ಮಾಡುವ ಮುನ್ನ ಇವೆರಡನ್ನೂ ಮಾಡಬೇಕು.
ಏಕೆಂದರೆ, ನಿಮಗೆ ಏನಾದರೂ ಸಣ್ಣ ಪುಟ್ಟ ಖಾಯಿಲೆ ಬಂದರೆ, 1 ಸಲ ಆಸ್ಪತ್ರೆಗೆ ಹೋದರೆ, ಸಾವಿರ ಸಾವಿರ ಖರ್ಚಾಗುತ್ತದೆ. ಯಾವುದಾದರೂ ರೋಗ ಬಂದರೆ, ಲಕ್ಷ ಲಕ್ಷ ಖಾಲಿಯಾಗುತ್ತದೆ. ಅಲ್ಲಿಗೆ ನೀವು ಮಾಡಿದ ಹೂಡಿಕೆ ಎಲ್ಲವೂ ವೇಸ್ಟ್ ಆದಂತೆ. ಹಾಗಾಗಿ ಇನ್ಶೂರೆನ್ಸ್ ಮಾಡಿಸಿದರೆ, ಆ ಚಿಕಿತ್ಸೆಗೆ ಹಣ ಸಿಗುತ್ತದೆ. ಹಾಗಾಗಿ ಹೆಲ್ತ್ ಮತ್ತು ಲೈಫ್ಇನ್ಶೂರೆನ್ಸ್ ಎರಡೂ ತುಂಬಾ ಮುಖ್ಯ ಅಂತಾರೆ ಹೇಮಂತ್. ಇನ್ನು ಮ್ಯೂಚುವಲ್ ಫಂಡ್ ಬಗ್ಗೆ ಹೇಮಂತ್ ಅವರು ಏನು ಹೇಳಿದ್ದಾರೆಂದು ತಿಳಿಯಲು ವೀಡಿಯೋ ನೋಡಿ.




